More

    ಕಾನ್ಪುರ ಪೊಲೀಸ್ ಹತ್ಯೆ ಪ್ರಕರಣ ಮ್ಯಾಜಿಸ್ಟ್ರಿಯಲ್ ತನಿಖೆ: ದುಬೆಯ ಸೊಸೆ ಸಹಿತ ಮೂವರ ಸೆರೆ

    ಕಾನ್ಪುರ: ಕಾನ್ಪುರ ಸಮೀಪದ ಬಿಕ್ರು ಗ್ರಾಮದಲ್ಲಿ ಎಂಟು ಪೊಲೀಸರ ಹತ್ಯಾಕಾಂಡ ಪ್ರಕರಣವನ್ನು ರಾಜ್ಯ ಸರ್ಕಾರ ಮ್ಯಾಜಿಸ್ಟ್ರಿಯಲ್ ತನಿಖೆಗೆ ಒಪ್ಪಿಸಿದೆ. ಈ ಮಧ್ಯೆ, ಪ್ರಮುಖ ಆರೋಪಿ ವಿಕಾಸ್ ದುಬೆಯ ಸೊಸೆ, ಮನೆಗೆಲಸದವಳು ಹಾಗೂ ನೆರೆಮನೆಯ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಎನ್​ಕೌಂಟರ್ ವೇಳೆ ದುಬೆ ಹಾಗೂ ಆತನ ಸಹಚರರಿಗೆ ಬೆಂಬಲ ಹಾಗೂ ಪೊಲೀಸರ ಬಗ್ಗೆ ಮಾಹಿತಿ ನೀಡಿದ ಆರೋಪದ ಮೇಲೆ ಈ ಮೂವರನ್ನು ಬಂಧಿಸಲಾಗಿದೆ.

    ದುಷ್ಕರ್ವಿುಗಳು ಹಾಗೂ ಪೊಲೀಸರ ನಡುವಿನ ಗುಂಡಿನ ಚಕಮಕಿ ವೇಳೆ ದುಬೆ ಸಹಚರರ ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲೆಂದು ಒಬ್ಬ ಪೊಲೀಸ್ ಸಿಬ್ಬಂದಿ ರಕ್ಷಣೆಗಾಗಿ ಮನೆಯ ಬಾಗಿಲನ್ನು ಬಡಿದರೂ ದುಬೆ ಸೊಸೆ ಬಾಗಿಲು ತೆಗೆದಿರಲಿಲ್ಲ ಎಂದು ಆರೋಪಿಸಲಾಗಿದೆ. ಇನ್ನಿಬ್ಬರು ಬಂಧಿತರು ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು ಎಲ್ಲೆಲ್ಲಿ ಇದ್ದಾರೆ ಎಂಬ ಮಾಹಿತಿಯನ್ನು ದುಷ್ಕರ್ವಿುಗಳಿಗೆ ನೀಡುತ್ತಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಗ್ಯಾಂಗ್​​​ಸ್ಟರ್​ ವಿಕಾಸ್​ ದುಬೆ ಮನೆಯನ್ನು ಕೆಡವಿ, ಎರಡು ಕಾರನ್ನು ಧ್ವಂಸ ಮಾಡಿದ ಕಾನ್ಪುರ ಜಿಲ್ಲಾಡಳಿತ

    ದುಬೆಯ ಆಪ್ತನ ಪತ್ನಿ, ಕೆಲಸದಾಳು ರೇಖಾ, ದುಬೆಯ ಆಪ್ತ ದಯಾಶಂಕರ್ ಅಗ್ನಿಹೋತ್ರಿಯ ಪತ್ನಿ. ದಯಾಶಂಕರ್​ನನ್ನು ಜುಲೈ 3 ದುರ್ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿತ್ತು.

    ಎಂಟು ಪೊಲೀಸರನ್ನು ಕೊಂದ ವಿಕಾಸ್​ ದುಬೆಯದ್ದು ಮನೆಯಲ್ಲ, ಮದ್ದುಗುಂಡಿನ ಕಾರ್ಖಾನೆ; ಇಡೀ ಪ್ರದೇಶ ಸ್ಫೋಟಕ್ಕೆ ಸಂಚು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts