More

    ವಿಜಯವಿಠಲಕ್ಕೆ ಜಿಲ್ಲಾಧಿಕಾರಿ ಭೇಟಿ

    ಹೊಸಪೇಟೆ: ಹಂಪಿಗೆ ಬರುವ ದೇಶ-ವಿದೇಶ ಪ್ರವಾಸಿಗರ ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಇದನ್ನೂ ಓದಿ: ರಾಯರ ಆರಾಧನಾ ಮಹೋತ್ಸವ ಸಂಪನ್ನ

    ಹಂಪಿಯ ವಿಜಯವಿಠಲ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಬ್ಯಾಟರಿ ಚಾಲಿತ ವಾಹನಗಳನ್ನು ಸೋಮವಾರ ಪರಿಶೀಲಿಸಿ ಮಾತನಾಡಿದರು. ಸ್ಮಾರಕಗಳ ವಿಕ್ಷಣೆ ಬೆಳಗ್ಗೆ 6 ಗಂಟೆಯಿಂದ ಆರಂಭವಾದರೆ, ಸಂಪರ್ಕ ಕಲ್ಪಿಸುವ ಬ್ಯಾಟರಿ ಚಾಲಿತ ವಾಹನಗಳು 9 ಗಂಟೆಯಿಂದ ಆರಂಭವಾಗುತ್ತದೆ.

    ಬೆಳಗ್ಗೆ ಹಂಪಿ ನೋಡ ಬೇಕು ಎನ್ನುವ ಪ್ರವಾಸಿಗರಿಗೆ ಅನಾನುಕೂಲವಾಗುತ್ತಿದೆ ಎಂದು ವಿಜಯವಾಣಿ ದಿನ ಪತ್ರಿಕೆಯಲ್ಲಿ ಭಾನುವಾರ ‘ಹಂಪಿ ಪ್ರವಾಸಿಗರಿಗೆ ಕಾಯುವುದೇ ಕಾಯಕ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತು. ಇದರ ಬೆನ್ನಲ್ಲೆ ಜಿಲ್ಲಾಧಿಕಾರಿ ಬೇಟಿ ನೀಡಿದರು.

    ಎಲ್ಲಾ ಬ್ಯಾಟರಿ ಚಾಲಿತ ವಾಹನಗಳನ್ನು ರಾತ್ರಿ ವೇಳೆ ಒಂದೇ ಬಾರಿಗೆ ಚಾಜಿರ್ಂಗ್ ಮಾಡಲು ಹೆಚ್ಚುವರಿ ವಿದ್ಯುತ್ ಪಾಯಿಂಟ್ ಅಳವಡಿಸಲು ಸೂಚಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ವಾಹನಗಳನ್ನು ಪಾಳೆಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಇನ್ನು ನಾಲ್ಕು ಜನ ಚಾಲಕರು ಬೇಕಾಗಿದ್ದಾರೆ. ಇತರೆ ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
    ಎಂ.ಎಸ್.ದಿವಾಕರ್, ಜಿಲ್ಲಾಧಿಕಾರಿ ವಿಜಯನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts