More

  ಸಾಂರ್ದಭಿಕ ಅನಿವಾರ್ಯತೆಗಳಾಚೆ, ಅಮೆರಿಕ, ಇರಾನ್, ಇರಾಕ್

  ಸ್ವಾಮಿ ವಿವೇಕಾನಂದರು ಔಪನಿಷದ ವಿಚಾರಧಾರೆಯನ್ನು ಪಶ್ಚಿಮದಲ್ಲಿ ತೆರೆದಿಟ್ಟು,ಅಲ್ಲಿಯವರ ಕಣ್ಣು ತೆರೆಸಿದರು. ಶ್ರೀಪ್ರಭುಪಾದರು ಭಕ್ತಿಸಿದ್ಧಾಂತವನ್ನು ಆಫ್ರಿಕಾ, ರಷ್ಯಾ, ಚೀನಾ, ಜಪಾನುಗಳಲ್ಲಿ ಎಲ್ಲೆಲ್ಲೂ ಹರಡಿ, ಮ್ಲೇಚ್ಛ, ಹೂಣ, ಪುಲಿಂದ, ಪುಲ್ಯಸರನ್ನೂ ಸಾತ್ವಿಕಮಾರ್ಗದತ್ತ ಎಳೆದು, ದುರಾಚಾರ ಬಿಡಿಸಿ, ದೀಕ್ಷೆ ಇತ್ತು, ಕೃಷ್ಣಪ್ರಜ್ಞೆಯನ್ನು ವಿಸ್ತರಿಸಿದರು.

  ‘ಮೂಲವನ್ನು ಕೆದಕಬಾರದು’ ಎಂಬುದು ಋಷಿ, ಮುನಿ, ನದೀ, ದೇವತೆಗಳಿಗೆ ಮಾತ್ರ ಅನ್ವಯ. ರಾಷ್ಟ್ರ, ಜನಾಂಗ, ಮತೀಯ, ಕೋಮುಸಮುದಾಯಗಳ ವಿಷಯದಲ್ಲಿ ಮೂಲವನ್ನು ಅರಿಯುವುದು ಇಂದಿಗೆ ಅತ್ಯವಶ್ಯಕವಾಗುತ್ತದೆ. ಪ್ರಾಣಿಗಳಲ್ಲಿ, ಸಸ್ಯಗಳಲ್ಲಿ, ‘ಹೈಬ್ರಿಡ್’ ಸಂತಾನಗಳೆಂಬ ಸ್ವರೂಪ ವಿಕೃತಿಗಳ ಬಗೆಗೆ ಇಂದೂ ಸಂಶೋಧನೆ ನಡೆಯುತ್ತಿದ್ದರೂ, ಹುಲಿ ಹುಲ್ಲು ತಿನ್ನುವುದಿಲ್ಲ. ಆನೆ ಮಾಂಸ ತಿನ್ನುವುದಿಲ್ಲ. ಅತ್ಯಂತ ಬಲಶಾಲಿ ಕುದುರೆ ಅಪ್ಪಟ ಸಸ್ಯಹಾರಿ. ಜಿಂಕೆ ಪರಮ ಸಾತ್ವಿಕ ಪ್ರಾಣಿ. ಸಿಂಹಕ್ಕೆ ಅಹಿಂಸೆ ಬೋಧಿಸುವವರಾರು? ನಾಯಿ, ಬೆಕ್ಕು, ಇಲಿ, ಹಾವು, ಜಿರಳೆ, ಸೊಳ್ಳೆ ಇತ್ಯಾದಿಗಳ ಬಗ್ಗೆ ನಾನು ಬರೆಯುವುದೇ ಬೇಡ. ದೇವರ ಸೃಷ್ಟಿಯೇ ಬೇರೆ. ವಿಶ್ವಾಮಿತ್ರ ಸೃಷ್ಟಿಯೇ ಬೇರೆ. ತೆಂಗು ಈಚಲು ಆಗುವುದಿಲ್ಲ. ಹಸು ಎಮ್ಮೆಯಾಗುವುದಿಲ್ಲ. ಕಡಲೆಕಾಳು ಬೇರೆ, ಕಡಲೆಕಾಯಿ ಬೇರೆ. ಎಳ್ಳು ಬೇರೆ, ಹುಚ್ಚೆಳ್ಳೇ ಬೇರೆ. ತಾಳೆ ಬೇರೆ, ಕತ್ತಾಳೆ, ಭೂತಾಳೆ ಬೇರೆ. ಹಾವ್ರಾಣಿ, ಹೆಂಟೆಗೊದ್ದವೆಂಬ ಗೋಸುಂಬೆ, ಹಲ್ಲಿ, ಮೊಸಳೆ ಒಂದೇ ಜಾತಿ ಎನಿಸಿದರೂ, ಗುಣ, ಸ್ವಭಾವ, ಲಕ್ಷಣ, ಬೇರೆ ಬೇರೆ.

  ಪ್ರಾಣಿಗಳಲ್ಲಿ ಕೃತಕ ‘ಮೈತ್ರಿ’ ಇರುವುದಿಲ್ಲ. ಅವು ಗೋಸುಂಬೆ ರಾಜಕಾರಣಿಗಳಲ್ಲಿ ಮಾತ್ರ. ದೇಶ, ಕಾಲ, ಭೂ ಮಟ್ಟದ ಎತ್ತರ, ಬೆಟ್ಟ, ಗುಡ್ಡಗಾಡು, ಅರಣ್ಯ, ನದೀತೀರ, ಅಲ್ಲಿ ಸಿಗುವ ಆಹಾರ, ಒದಗುವ ಹವೆ, ಉಷ್ಣಾಂಶ, ವಾಯುಭಾರಾದಿಗಳನ್ನು ಅವಲಂಬಿಸಿ ಪ್ರಾಣಿಗಳು ಸ್ವಭಾವವನ್ನು ತಳೆಯುತ್ತವೆ. ಆದರೂ, ಬದಲಾದ ಸಂದರ್ಭಗಳಲ್ಲೂ ಮೂಲಸ್ವಭಾವ ಬೆನ್ನಟ್ಟಿ ಬರುತ್ತದೆ. ಒಂದು ಉದಾಹರಣೆ. ಹಳ್ಳಿ ಹಳ್ಳಿಗಳಲ್ಲಿ ಕಾಣಬರುವ ಕತ್ತೆ ಎಂಬ ಪ್ರಾಣಿಯ ಸ್ವಭಾವ ನೋಡಿ. ದಡ್ಡಪ್ರಾಣಿ ಎಂದರೂ ತುಂಬ ತಾಳ್ಮೆ, ಸಹನೆ, ಭಾರವಾಹಿ, ಕರ್ಕಶಧ್ವನಿ. ಒಂದೆಡೆ ಬೂದಿಯರಾಶಿಯನ್ನು ಕಂಡೊಡನೆ ಅದು ಬಿದ್ದು ಹೊರಳಾಡುತ್ತದೆ. ಏಕೆ? ಬರೀ ನೆಲದಲ್ಲಿ ಕಾಣದುದು ಬೂದಿಯಲ್ಲಿ ಏನಿದೆ? ಒಬ್ಬ ಈ ಬಗ್ಗೆ ಶಾಸ್ತ್ರಜ್ಞನೆಂದು ಕೊಂಡವನನ್ನು ಕೇಳಿದೆ. ಅವನು ಹೇಳಿದ- ‘ಇದು ಮೂಲದಲ್ಲಿ ಮರಳುಗಾಡಿನ ಪ್ರಾಣಿ! ಅದಕ್ಕೆ ಮರಳುರಾಶಿ, ಗುಡ್ಡೆ, ಸ್ಯಾಂಡ್ ಡಮ್್ಸ ಎಂಬ ಅಗಾಧವನ್ನು ಕಂಡು ಕಂಡು ರೂಢಿಯಾಗಿ, ಅದಕ್ಕೆ ಪರಂಪರೆಯಿಂದ, ಜನ್ಮಜನ್ಮಾಂತರದಿಂದ ಒಂದು ್ಟಟ್ಝಛ್ಡಿ, ಒಂದು ಅದಮ್ಯ ಪ್ರಾಕೃತಿಕ ಕ್ರಿಯೆ, ಒಂದು ಪ್ರಚೋದನೆ, ಒಂದು ಸಹಜ ಪ್ರತಿಕ್ರಿಯೆ ಇರುತ್ತಿದ್ದು, ಬೂದಿಯನ್ನು ಕಂಡೊಡನೆ ಆ ಮರಳು ರಾಶಿ ನೆನಪಾಗಿ ಹೊರಳಾಡುತ್ತದೆ’ ಅಂತ.

  ಇದು ಗೀತೆ, ವೇದ, ಉಪನಿಷತ್ತುಗಳ ಕರ್ಮಜನ್ಮ ಚಕ್ರದ ಸಿದ್ಧಾಂತಕ್ಕೆ ಅನುಗುಣವಾಗಿಯೇ ಇರುವುದು ಸತ್ಯ. ಕೋಗಿಲೆಗೆ ಮಾವಿನ ಎಳೆ ಚಿಗುರೇ ಸ್ಪೂರ್ತಿದಾಯಕ. ವಸಂತ ಬಿಟ್ಟು ಬೇರೆ ಕಾಲದಲ್ಲಿ ಇದು ಹಾಡುವುದಿಲ್ಲ. ಹಾಗೆ ಪ್ರಾಣಿಗೂ ಜನ್ಮ, ಕರ್ಮ, ವಾಸನೆ, ತೊಡರಾಗಿ ಅಂಟಿ ಬರುತ್ತದೆ. ನಾಯಿಮಾಂಸ, ಚಕ್ಕಳವನ್ನೇ ಪರಂಪರೆಯಿಂದ ತಿಂದು ರೂಢಿಯಾದವನಿಗೆ ಒಬ್ಬಟ್ಟು ಎಂಬ ಹೋಳಿಗೆಯ ಹೊರಪದರದ ‘ಕಣಿಕ’, ಗೋಧಿಹಿಟ್ಟಿನ ಹೊದಿಕೆ, ಚಕ್ಕಳವಾಗಿಯೇ ರುಚಿಯಾಗಿ ಕಾಣುತ್ತದೆ. ಈ ಬಗ್ಗೆ ಕಥೆಗಳೂ ಇವೆ. ಹೋರಿ, ಎತ್ತುಗಳು ಕೆಂಪುಬಣ್ಣ ನೋಡಿ ಏಕೆ ಉದ್ರಿಕ್ತವಾಗುತ್ತವೆ? ಬೇರೆ ಬಣ್ಣಗಳು ಕಾಣುವುದಿಲ್ಲವೇಕೆ? ನಮಗೆ ತಿಳಿಯದ ಕಾರಣಗಳಿಗೇಕೆ ನಾಯಿಗಳು ಊಳಿಡುತ್ತವೆ? ನನ್ನ ಬಾಲ್ಯದಲ್ಲಿ ‘ಕಥಾವಳಿ’ ಎಂಬ ಪತ್ರಿಕೆಯಲ್ಲಿ ಓದಿದ ಒಂದು ಕಥೆ.

  ಒಬ್ಬ ಸುಧಾರಕ ಒಂದು ಎಳೆ ಸಿಂಹಮರಿಯನ್ನು ದತ್ತು ತೆಗೆದುಕೊಂಡ. ಅದಕ್ಕೆ ಬರೀ ಅನ್ನ, ಸಾರು, ಪಾಯಸ, ತೊವ್ವೆ, ಮೊಸರು, ತರಕಾರಿ ಹಾಕಿ ಬೆಳೆಸುತ್ತ ಬಂದ. ಅದು ಸಾತ್ವಿಕ ಪ್ರಾಣಿಯ ದಾರಿಯಲ್ಲಿದೆ ಎಂದು ಹಿಗ್ಗಿದ. ಒಮ್ಮೆ ತಾನು ಕೂಡುವ ಬೆತ್ತದ ಆರಾಮ ಕುರ್ಚಿಯಲ್ಲಿ ಕುಳಿತು, ಬಲಪಕ್ಕದಲ್ಲಿ ಅದನ್ನೂ ಕೂಡಿಸಿಕೊಂಡು ಪೇಪರು ಓದುತ್ತಿದ್ದ. ಆ ಮರಿ ವಿಧೇಯವಾಗಿ ಅಲ್ಲಿ ಕುಳಿತಿರುತ್ತಿತ್ತು. ಹೀಗೆಯೇ ನಡೆಯುವಾಗ ಒಮ್ಮೆ ಅವನು ನೀಡಿದ ಬಲಗೈಯನ್ನು ನೆಕ್ಕಲು ಆರಂಭಿಸಿತು. ಅದು ಪ್ರೀತಿಗಾಗಿ ಎಂದು ಕೊಂಡ. ಕ್ರಮೇಣ, ನೆಕ್ಕುತ್ತ ಚರ್ಮ ಹರಿದು ರಕ್ತವೂ ಬರುತ್ತ ಅದರ ರುಚಿ ಹತ್ತಿತು. ರಕ್ತರುಚಿ ಹತ್ತಿದೊಡನೆ Racial Consciousness ಚಿಗುರಿ, ಮಾಂಸಾಹಾರಿಯಾಗಿ ಮಾರ್ಪಟ್ಟು ಅವನ ಕೈಯ್ಯನ್ನೇ ಹರಿದು ತಿಂದಿತು. ಯಜಮಾನ ತಪ್ಪಿಸಿಕೊಳ್ಳಲು ನೋಡಿದ. ಅದು ಅಟ್ಟಿಸಿಕೊಂಡು ಎಗರಿ ಬಿತ್ತು. ಕುತ್ತಿಗೆಗೂ ಜಿಗಿಯಿತು. ಯಜಮಾನ ಆಗ ತನ್ನ ಬಂದೂಕಿನಿಂದ ಕೊಲ್ಲಬೇಕಾಯ್ತು. ತೆನಾಲಿ ರಾಮಕೃಷ್ಣ ಕರೀ ನಾಯಿಯನ್ನು ಬಿಳಿ ನಾಯಿ ಮಾಡಲು ಹೋದ ಕಥೆಯಂತಿದ್ದರೂ, ಇಲ್ಲಿ ಕ್ರೌರ್ಯ ಎಂಬುದು ಡಿಎನ್​ಎದಲ್ಲೇ ಇದ್ದರೆ ಏನಾಗುತ್ತದೆ ಎಂದು ನೋಡಬಹುದು.

  ನಿಮ್ಹಾನ್ಸ್ ಸಂಸ್ಥೆಯ ಮಾಜಿ ನಿರ್ದೇಶಕ ಆರ್.ಎನ್. ವರ್ವ ಎಂಬುವರು ನಾನೂ ಹಾಜರಿದ್ದ ಒಂದು ವಿಚಾರಗೋಷ್ಠಿಯಲ್ಲಿ ಹೇಳಿದ್ದು-‘ಮನುಷ್ಯನಲ್ಲಿ ಈ ರೇಷಿಯಲ್ ಪ್ರಜ್ಞೆ ಹೇಗೆ ಸದಾ ಜಾಗೃತವಾಗಿರುತ್ತದೆ ಎಂದು ಕೇಳಲು ಭಯಂಕರ’. ಕತ್ತೆಯ ವಿಷಯ ಹೇಳಿದೆನಲ್ಲ? ಅಲ್ಲಿgeographical conditions ಇರುತ್ತದೆ. ಹೊರ ಬರಲು ಕಷ್ಟ. ರಷ್ಯಾದವರು ದೇಹದಾರ್ಢ್ಯದಲ್ಲಿ ಗಟ್ಟಿಗರು. ಹಿಮಪ್ರದೇಶ. ಹಸಿರು ಕಡಿಮೆ/ಇಲ್ಲದ ಕ್ರೂರ ವಾತಾವರಣ. ಅಲ್ಲಿ ಯುದ್ಧ ಮಾಡಿ ನೆಪೋಲಿಯನ್, ಹಿಟ್ಲರ್ ಸೋತರು, ಶೀತಹವೆಗೆ ಸೇನೆ ಒಗ್ಗಲಿಲ್ಲ. ಜರ್ಮನಿಯ ತಲೆ, ರಷ್ಯಾದ ಶರೀರವುಳ್ಳ ಹೊಸ ತಳಿ/ಜನಾಂಗವನ್ನು ಹಿಟ್ಲರ್ ತಯಾರು ಮಾಡಲು ಹೊರಟಿದ್ದ ಎಂದು ವರದಿ ಇದೆ. ಐರೋಪ್ಯರು-ಇಂಗ್ಲೆಂಡು, ಫ್ರಾನ್ಸ್, ಸ್ಪೇನ್, ಹಾಲೆಂಡ್, ಪೋರ್ಚುಗಲ್ ಎಲ್ಲವೂ ವಸಾಹತು ಹಿಡಿದು ಜಗತ್ತನ್ನು ಶೋಷಿಸಿದವು. ರಷ್ಯಾ ಏಕೆ ಹಾಗೆ ಮಾಡಲಿಲ್ಲ? ಮೂಲದಲ್ಲಿ ಅದು ಶಾಂತ ದೇಶ. ಕಮ್ಯುನಿಸಂ ಬಂದ ಮೇಲೆ ಆರೋಪಿತ ಸ್ವಭಾವದಿಂದ ನಾಶವಾಯ್ತು. ಟಾಲ್​ಸ್ಟಾಯ್ನ ರಷ್ಯಾ ಬೇರೆ, ಲೆನಿನ್, ಸ್ಟಾಲಿನ್​ನ ರಷ್ಯಾ ಬೇರೆ. ಕನ್​ಫ್ಯೂಷಿಯಸ್​ನ ಚೀನಾ ಬೇರೆ, ಮಾವೋದ ಚೀನಾ ಬೇರೆ. ಈ ಆರೋಪಿತ-Parasite-ಎಂಬ ಅಸಹಜ, ವಿಕೃತ, ವಿರೂಪ ಬಹುಕಾಲ ನಿಲ್ಲುವುದಿಲ್ಲ. ಸ್ವರೂಪ, ವಿರೂಪಗಳ ನಡುವೆ ಹೋರಾಟದಲ್ಲಿ ಜಯ ಸ್ವರೂಪಕ್ಕೇ. ಆದರೆ ಕಾಲ ಹಿಡಿಯುತ್ತದೆ. ಹಾವಳಿ ಸ್ವಲ್ಪಕಾಲ ನಡೆಯುತ್ತದೆ.

  ಈಗ ಯುರೋಪು, ಅರಬ್ಬಿ ಜನಾಂಗೀಯ ಮೂಲಸ್ವರೂಪ ನೋಡಿ. ಅವರು essentially warring tribes. ಅದು ಜಂಗಲ್ ಕಲ್ಚರ್. Angles Jutes Saxons Danes Germans ಬುಡಕಟ್ಟುಗಳು ಗ್ರೀಕ್ ಪೂರ್ವ ಕಾಲದಿಂದಲೂ ಯುದ್ಧಪ್ರಿಯರು, ಯುದ್ಧಮಾರಿಗಳು, ಯುದ್ಧಜೀವಿಗಳು, ಕ್ರೂರಿಗಳು, ಹೋರಾಡಿ ಸಾಯುವ ಹುಟ್ಟುಗುಣದ ಬರ್ಬರರು… ಅಂತಲೇ ಕ್ರೖೆಸ್ತಮತದ ಹೇರಿಕೆ ಅಲ್ಲಿ ಸಾಧ್ಯವಾಯಿತು. ಗ್ರೀಕ್​ರೇನು? ರೋಮಕರೇನು? ಯುದ್ಧವೇ ಜೀವನ ಕ್ರಮದ ಅನಾಗರೀಕರು, ಅಲ್ಲಿ ಸಾಕ್ರೆಟೀಸ್, ಪ್ಲೇಟೋ, ಪ್ಲೊಟೀನಸ್, ಅರಿಸ್ಟಾಟಿಲ್, ಸಿಸರೋ ಮುಂತಾದ ಚಿಂತಕರ, ಅಂತಮುಖಿ ಸಾಮ್ರಾಜ್ಯಾನ್ವೇಷಕರ ದರ್ಶನಕ್ಕೆ ಪ್ರಾಶಸ್ಱ ಸಿಗಲಿಲ್ಲ. ಒಳ ಜಗತ್ತು ತೆರೆಯದೆಯೇ ಹೊರ ಜಗತ್ತು ಗೆಲ್ಲಲು ಹೊರಟ ಈ ಜನಾಂಗೀಯರಲ್ಲಿ ಅಲೆಗ್ಜಾಂಡರ್, ನೆಪ್ಲೋಲಿಯನ್, ಹಿಟ್ಲರ್, ರ್ಚಚಿಲ್, ರಾಬರ್ಟ್ ಕ್ಲೈವ್, ಡ್ಯೂಪ್ಲೇ, ಈಸ್ಟ್ ಇಂಡಿಯಾ ಕಂಪನಿಗಳಿಗೆ ಸಿಕ್ಕ ಪ್ರಾಶಸ್ಱ, ಸಾಹಿತಿಗಳು, ಸಂಗೀತಜ್ಞರು, ಅನ್ವೇಷಕರು, ಚಿಂತಕರಿಗೆ ಸಿಗಲಿಲ್ಲ! ಅದು ಕ್ರೖೆಸ್ತವಿಸ್ತರಣಾವಾದಿಗಳಿಗೆ ಅನುಕೂಲವಾಗಿ ಪರಿಣಮಿಸಿತು.

  ಅಶೋಕ ಗಾಂಧಾರಕ್ಕೆ ಬೌದ್ಧರನ್ನು ರಫ್ತು ಮಾಡಿದನಲ್ಲ? ಇಸ್ಲಾಂನ ಮುಂದೆ ಅದು ಏಕೆ ನಿಲ್ಲಲಿಲ್ಲ? ರೋಮ್ೆ ಏಕೆ ಬೌದ್ಧ ಹರಡಲಿಲ್ಲ? ಮಿತ್ರನೆಂಬ ವೈದಿಕದೇವತಾ ಉಪಾಸನೆಯನ್ನೇ ಕದ್ದು, ವ್ಯಾಟಿಕನ್ನನ್ನು ಹಿಡಿದು ಶಿಲುಬೆ ಏರಿಸಿದರಲ್ಲ? ಮಿತ್ರ, ವರುಣ, ಆದಿತ್ಯ, ಪೂಷಾ, ಅದ್ಯಮಾ, ಸವಿತಾ, ಭಗ-ಎಲ್ಲಿ ಹೋದರು? ಬರ್ಬರಲ್ಲಿ ಹುಡುಕಿ! ಅರೇಬಿಯಾ, ಇರಾಕ್, ಇರಾನ್, ಸಿರಿಯಾ, ಪ್ಯಾಲೆಸ್ಟೀನ್​ಗಳಿಗೆ ಬನ್ನಿ. ಮರಳುಗಾಡು, ಶುಷ್ಕ ಪ್ರದೇಶ, ನೀರೂ ಸಿಗದ, ಹಸಿರು ಕಾಣದ, ಪ್ರಾಣಿಗಳೂ ಇಲ್ಲದ, ತಿನ್ನಲು ಏನೂ ಬೆಳೆಯದ ಪ್ರದೇಶ. ಆ ಪ್ರಕೃತಿ ಅಲ್ಲಿಯವರನ್ನು ಕ್ರೂರಿಗಳನ್ನಾಗಿ, ಹೊರದೇಶಗಳ ಆಕ್ರಮಣಕಾರರನ್ನಾಗಿಸಿದೆ. ಇತರರನ್ನು ಹಿಡಿದು ತಿನ್ನದೇ ಬದುಕಲು ಆಗದ ಸ್ಥಿತಿ. ಮಂಗೊಲಿಯಾ ಮತ್ತು ಮಂಚೂರಿಯಾಗಳ ಹಿಮಪ್ರದೇಶಗಳ ಸ್ಥಿತಿಯೂ ಬೇರೆ ರೀತಿಯಲ್ಲಿ ಅದೇ. ಅಲ್ಲಿ ತೈಮೂರ, ಚೆಂಗೇಸ್ ಖಾನ್, ಅದೇ ವಂಶದ ಬಾಬರನಿಂದ ಹೈದರ್ ಟಿಪು್ಪವರೆಗೆ ಎಲ್ಲರ ಡಿಎನ್​ಎ ಒಂದೇ ಇದೆ. ನೋಡಿದೆವಲ್ಲ ಅದು ಮೊಗಲ ್ಟ್ಚಚ್ಝ ಹಾವಳಿ! ಪಾಕ್​ನ ಸ್ಥಿತಿ ನೋಡಿ! ಸರ್ಪ¤ಗಳ ನಾಡಾಗಿ ‘ಪಂಚನದೀ’=ಪಂಜಾಬು ಪ್ರಾಂತ್ಯದ ಈಗಣ ಪಠಾಣರು ಏನಾಗಿದ್ದಾರೆ? ಅಲ್ಲಿ ಋಷಿ ಪ್ರಜ್ಞೆ ಇದೆಯೇನಿರಯ್ಯ? ಋಷಿಗಳ ಹೆಣಗಳ ಮೇಲಲ್ಲವೇ ಪಾಕ್ ಉದಿಸಿದ್ದು? ಇದೆಲ್ಲ ಹೀಗೆ ವಿಚಾರ ಮಾಡುವಾಗ ನಿರಾಸೆ ಬರುತ್ತದೆ. ಹುಟ್ಟಿನಿಂದ ನಾನು ನಿರಾಶವಾದಿಯಲ್ಲ! ಪ್ರಕೃತಿಯಲ್ಲೇ ‘ಡಿಟರ್ವಿುನಿಸಂ’ ಎಂಬ ಪೂರ್ವನಿರ್ಧಾರಿತ ಸ್ವರೂಪವು ಹುದುಗಿದ್ದರೆ, ಅದರಿಂದ ವಿಮೋಚನೆ ಹೇಗೆ? ಅದಕ್ಕೆ ಆಹಾರ, ವಿಚಾರ, ಸಹವಾಸ, ಚಿಂತನೆ, ಧ್ಯಾನಗಳಿಂದ ವಿಮೋಚನೆ ಸಾಧ್ಯ ಎನ್ನುತ್ತದೆ ಗೀತೆ, ಉಪನಿಷತ್ತು. ‘ಸ್ವಭಾವವಿಜಯ’ ಶಬ್ದ ಉದ್ಧವ ಗೀತೆಯಲ್ಲಿ ಭಾಗವತದಲ್ಲಿ ಬರುತ್ತದೆ. ‘ವೈಶಾರದೀ ಪ್ರಜ್ಞೆ’ ಎಂಬುದು ಉದಯವಾಗಬೇಕು.

  ಸ್ವಾಮಿ ವಿವೇಕಾನಂದರು ಔಪನಿಷದ ವಿಚಾರಧಾರೆಯನ್ನು ಪಶ್ಚಿಮದಲ್ಲಿ ತೆರೆದಿಟ್ಟು, ಅಲ್ಲಿಯವರ ಕಣ್ಣುತೆರೆಸಿದರು. ಶ್ರೀಪ್ರಭುಪಾದರು ಭಕ್ತಿಸಿದ್ಧಾಂತವನ್ನು ಆಫ್ರಿಕಾ, ರಷ್ಯಾ, ಚೀನಾ, ಜಪಾನುಗಳಲ್ಲಿ ಎಲ್ಲೆಲ್ಲೂ ಹರಡಿ, ಮ್ಲೇಚ್ಛ, ಹೂಣ, ಪುಲಿಂದ, ಪುಲ್ಯಸರನ್ನೂ ಸಾತ್ವಿಕಮಾರ್ಗದತ್ತ ಎಳೆದು, ದುರಾಚಾರ ಬಿಡಿಸಿ, ದೀಕ್ಷೆ ಇತ್ತು, ಕೃಷ್ಣಪ್ರಜ್ಞೆಯನ್ನು ವಿಸ್ತರಿಸಿದರು. ಇದು ಪ್ರಬಲವಾಗಿ ಎಲ್ಲೆಲ್ಲೂ ಹರಡುತ್ತಿರುವುದು ಯೋಗವಿದ್ಯೆ. ವ್ಯಾಪ್ತಿಗೆ ಕಾರಣ ಮೋದಿಯವರು. ಕಮ್ಯುನಿಸ್ಟರು, ಇಸ್ಲಾಂರು, ಈಸಾಯಿಗಳೂ ಯೋಗಮಾರ್ಗದಲ್ಲಿ ಬಂದರೆ ಜಗತ್ತಿಗೆ ಕ್ಷೇಮ. ಇರಾನ್-ಇರಾಕ್​ಗಳಲ್ಲಿ ಮೂಲದಲ್ಲಿದ್ದವರು ನಮ್ಮವರೇ! ಆಗ ಪರ್ಷಿಯಾ ಇನ್ನೂ ಮುಂಚೆ ಮೆಸೆಪೊಟೇಮಿಯಾ, ಆ ಮೇಲೆ ಇಸ್ಲಾಂ ಬಂದು ಶಾಂತಿ ಸ್ವಭಾವ ಇಲ್ಲವಾಗಿಸಿತು. ಇದು ಇತಿಹಾಸದಲ್ಲಿ ದೀರ್ಘವೆನಿಸಿದರೂ ಬರ್ಬರತೆ ನಿಲ್ಲುವುದಿಲ್ಲ. ಉಳಿಯುವುದಿಲ್ಲ.

  ಜಗತ್ತಿಗೆ ಈಗ ಶಾಂತಿ ಬೇಕು-ಇಸ್ಲಾಂ, ಈಸಾಯಿ ಗ್ರಹಿಕೆಗಳನ್ನೂ ಯುದ್ಧ ಮಾನಸಿಕತೆಯನ್ನೂ, ಜಿಹಾದಿಯನ್ನೂ ಜಗತ್ತು ಪ್ರಕಟವಾಗಿ, ಪ್ರಬಲವಾಗಿ ತಿರಸ್ಕರಿಸುತ್ತ ಬಂದಿದೆ. ಅಮೆರಿಕದಲ್ಲಿ ಹಿಂದೆ ಇದ್ದವರಲ್ಲ ಭಾರತೀಯರು-ಮಯ, ತಕ್ಷಕ, ಆಸ್ತಿಕ, ನಾಗಾ ವಂಶಸ್ಥರೂ ಹಾಗೂ ಪ್ರಾಚೀನ ಚೀನಿಯರು. ಅಲ್ಲಿ ಐರೋಪ್ಯರ ಆಕ್ರಮಣ ಒಂದು ಆಘಾತ, ಉಲ್ಕಾಪಾತ. ಅದು ಈಗ ರುದ್ರ ತಾಂಡವವಾಡುತ್ತ ಸುಸ್ತಾಗಿ ಸೋಲುವ ಕಾಲ. ಅಲ್ಲಿ ಭಾರತೀಯ ಚಿಂತನೆಗೆ ತುಂಬ ಬೇಡಿಕೆ ಇದೆ. 300ಕ್ಕಿಂತ ಹೆಚ್ಚು ದೇವಾಲಯಗಳು, ಹಿಂದೂ ಸಂಸ್ಥೆಗಳೂ, ಮಠಗಳೂ ಇವೆ ಎಂದು ವರದಿ. ಇದು ಇರಾಕ್, ಇರಾನ್​ಗಳಲ್ಲಿ ಆಗಬೇಕಾದರೆ, ಅಲ್ಲಿ ಮೂಲಭೂತವಾದ ಸಾಯಬೇಕು. ಅದು ಒಂದೇ ಶಾಂತಿಗೆ ದಾರಿ. ಕಳೆದ ಹಾಗೂ ಇಂದಿನ ಶತಮಾನಗಳ ಬಹಳಷ್ಟು ಯುದ್ಧಗಳು ಅಲ್ಲೇ ಸುತ್ತಮುತ್ತ ಏಕೆ? ಯೋಚಿಸಿ. ಆರೋಪಿತಣ ಸ್ವಭಾವಕ್ಕೂ ಘರ್ಷಣೆ ನಡೆಯುವುದು ಒಳಮರ್ಮ. ತಿಳಿಯಿರಿ.

  ಇಲ್ಲಿ ಜಿಹಾದಿ ಮನನೆಲೆ ಸಾಯದೇ ಜಗತ್ತಿಗೆ ಶಾಂತಿ ಇಲ್ಲ. ನಡುವೆ ಪಾಕ್, ಆಪ್ಘಾನಿಗಳೂ ಸೇರಿ, ಅದಕ್ಕೆ ಕಾಂಗ್ರೆಸ್ಸು ತುಪ್ಪ ಸುರಿದು ನಮ್ಮನ್ನು ಸಾಯಿಸುತ್ತಿದೆ. ಇಲ್ಲಿ ಕಾಂಗ್ರೆಸ್ ಸಾಯಬೇಕು. ಮತ್ತೆ ಬೂದಿಯಿಂದ ಎದ್ದು ಬಾರದ ಸ್ಥಿತಿಗೆ ಬಂದಾಗ ಭಾರತಕ್ಕೂ ತನ್ಮೂಲಕ ಜಗತ್ತಿಗೂ ಶಾಂತಿ ಸಾಧ್ಯ. ಅರವಿಂದರು ಹೇಳಿದ ಕಾಲ ಬರುತ್ತಿದೆ. ‘ಭಾರತವೇ ವಿಶ್ವಗುರು ಸ್ಥಾನೀಯ, ಬೇರೆ ದೇಶ ಅಲ್ಲ. ಋಷಿಮುನಿ ಯೋಗಿಗಳ ದರ್ಶನ ಮಾತ್ರ ಸ್ವರೂಪವನ್ನು ತಿದ್ದಿ ತೀಡಿ ಪರಿಷ್ಕರಿಸಬಲ್ಲದು’. ಆಗ ಜೆಎನ್​ಯುು, ಅಲೀಗಢ, ಜಾಧವಪುರ ವಿಶ್ವವಿದ್ಯಾಲಯಗಳು ಮಣಿದು ಮಾಯವಾಗಬೇಕು. ಹೌದೆ? ಈ ಸದಾಸಂಘರ್ಷ ಅಳಿದು ಮಹಾದೇವ ರುದ್ರ ಸದಾಶಿವನಾದ ಹೊರತು ತಾಂಡವ ನಿಲ್ಲದು.

  (ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts