More

    ವಿಜಯವಾಣಿ ಪ್ರೀಮಿಯರ್ ಲೀಗ್‌ಗೆ ಅದ್ದೂರಿ ತೆರೆ: ಹಿಗ್ಗಿ ಕುಣಿದ ಚಾಂಪಿಯನ್‌ಗಳು

    ಬೆಂಗಳೂರು: ಬಸವನಗುಡಿಯ ಕೃಷ್ಣರಾವ್ ಪಾರ್ಕ್‌ನಲ್ಲಿ ಭಾನುವಾರ ‘ವಿಜಯವಾಣಿ ಪ್ರೀಮಿಯರ್ ಲೀಗ್’ನ (ವಿಪಿಎಲ್) 4ನೇ ಆವೃತ್ತಿಗೆ ಅದ್ದೂರಿಯಾಗಿ ತೆರೆಬಿದ್ದಿದೆ.

    ಅಂತಿಮ ದಿನದಲ್ಲಿ ಬ್ಯಾಡ್ಮಿಂಟನ್, ಇಡ್ಲಿ ತಿನ್ನುವಿಕೆ ಸೇರಿ ವಿವಿಧ ರಂಜನೀಯ ಕ್ರೀಡೆಗಳು ನಡೆದವು. ಪುರುಷರ ಡಬಲ್ಸ್ ವಿಭಾಗ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಚೇತನ್-ಹರೀಶ್ ನಾಗರಾಜು ಜೋಡಿ, ರೋಹಿತ್ ಮತ್ತು ರಾಘವೇಂದ್ರ ವಿರುದ್ಧ ಗೆದ್ದು ಚಾಂಪಿಯನ್ ಆಯಿತು. ಎದುರಾಳಿ ತಂಡ ರನ್ನರ್ ಅಪ್‌ಗೆ ತೃಪ್ತಿ ಪಡೆಯಿತು. ಮಹಿಳೆ ವಿಭಾಗದ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಪ್ರಣಮ್ಯ ಆರ್. ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಎಂ.ಜಿ.ಅರುಣ ರನ್ನರ್ ಅಪ್ ಆದರು. ಮಕ್ಕಳ ವಿಭಾಗದ ಬ್ಯಾಡ್ಮಿಂಟನ್‌ನಲ್ಲಿ ಅನಿರುದ್ಧ ಗೆಲುವು ಸಾಧಿಸಿದರೆ, ಶಿವಾಂಗ್ ದ್ವಿತೀಯ ಸ್ಥಾನ ಪಡೆದರು. ಅಂಪೈರ್‌ಗಳಾದ ಉಮೇಶ್, ಮಹೇಶ್, ಸೂರಜ್ ಮತ್ತು ಬಾಲು ಅತ್ಯುತ್ತಮವಾಗಿ ಪಂದ್ಯಗಳನ್ನು ನಿರ್ವಹಿಸಿದರು. ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ 22 ಇಡ್ಲಿಯನ್ನು ಗಬಗಬನೆ ತಿನ್ನುವ ಮೂಲಕ ದಿವಿತ್ ಹಾಗೂ ಮಹಿಳಾ ವಿಭಾಗದಲ್ಲಿ ಅರುಣ ಗೆಲುವಿನ ನಗೆ ಬೀರಿದರು. ಬಲೂನ್ ಊದುವ ಸ್ಪರ್ಧೆಯಲ್ಲಿ ಕೃಷ್ಣಮೂರ್ತಿ ಜಯ ಸಾಧಿಸಿದರು. ನಟಿ ಸಂಗೀತಾ ಶೃಂಗೇರಿ,ವಿಆರ್‌ಎಲ್ ಮೀಡಿಯಾ ಪ್ರೈವೇಟ್ ಲಿ. ನಿರ್ದೇಶಕ ಶಿವ ಸಂಕೇಶ್ವರ ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

    ರಂಜನೀಯ ಕ್ರೀಡೆಗಳ ರಸದೌತಣ

    ವಿಜಯವಾಣಿ ಪ್ರೀಮಿಯರ್ ಲೀಗ್‌ಗೆ ಅದ್ದೂರಿ ತೆರೆ: ಹಿಗ್ಗಿ ಕುಣಿದ ಚಾಂಪಿಯನ್‌ಗಳು

    ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ಸಹಯೋಗದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಮೈದಾನದಲ್ಲಿ ಶುಕ್ರವಾರ ಮತ್ತು ಶನಿವಾರ ದಿನದಂದು ವಿಪಿಎಲ್‌ನ ಕ್ರಿಕೆಟ್ ಆಟದ ಸೊಬಗಿನ ಜತೆಗೆ ವಿವಿಧ ರಂಜನೀಯ ಕ್ರೀಡೆಗಳ ಸಡಗರ-ಸಂಭ್ರಮ ಕಳೆಗಟ್ಟಿತ್ತು. ಮೊದಲ ದಿನ ಕ್ರಿಕೆಟ್ ಪಂದ್ಯಾವಳಿ, ತಂತಿ ಬಜ್ಜಾರ್’, ರಿಂಗ್‌ನಲ್ಲಿ ಗ್‌ಟಿ ಆಟ, ಪದಬಂಧ ಆಟ ನಡೆಯಿತು. ಎರಡನೇ ದಿನ ವಿಪಿಎಲ್ ಫೈನಲ್ ಪಂದ್ಯ, ಸೆಲೆಬ್ರಿಟಿ ಇಲೆವೆನ್ ಹಾಗೂ ವಿಪಿಎಲ್ ಇಲೆವೆನ್ ನಡುವೆ ಔಪಚಾರಿಕ ಪಂದ್ಯ ನಡೆಯಿತು. ಜತೆಗೆ, ನೀರಿನ ಕಪ್‌ಗೆ ಚೆಂಡು ಎಸೆಯುವುದು, ಬಲೂನ್ ಊದಿ ಒಡೆಯುವುದು, ಸ್ಲೋ ಸೈಕಲ್ ರೇಸ್, ನಟಿ ಚಿತ್ರಕ್ಕೆ ಬಿಂದಿ ಸೇರಿ ಇತರೆ ರಂಜನೀಯ ಕ್ರೀಡೆಗಳ ನಡೆದವು. ಬೆಂಗಳೂರು ವಿವಿ ಕುಲಪತಿ ಎಸ್.ಎಂ.ಜಯಕರ,ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್ ಜೋಶಿ, ಬೆಂ.ವಿವಿ ಕುಲಸಚಿವ ಎನ್.ಮಹೇಶ್, ದೈಹಿಕ ಶಿಕ್ಷಣ ಕಾಲೇಜು ಪ್ರಾಂಶುಪಾಲ ಡಾ.ಕೆ.ಕೆ. ಅಮರನಾಥ್, ನಟರಾದ ಗಣೇಶ್ ಮತ್ತು ಸತೀಶ್ ನೀನಾಸಂ ಕ್ರೀಡಾಕೂಟದ ರಂಗು ಹೆಚ್ಚಿಸಿದರು.

    ಆಟಗಾರರ ಸಂಭ್ರಮ

    ವಿಜಯವಾಣಿ ಪ್ರೀಮಿಯರ್ ಲೀಗ್‌ಗೆ ಅದ್ದೂರಿ ತೆರೆ: ಹಿಗ್ಗಿ ಕುಣಿದ ಚಾಂಪಿಯನ್‌ಗಳು

    ಟೂರ್ನಿಯಲ್ಲಿ ಗೆಲುವು ಸಾಧಿಸಿದ ಆಟಗಾರರ ಸಂಭ್ರಮ ಮೇಳೈಸಿತ್ತು. ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿಯ ಉದ್ಯೋಗಿಗಳು ವಿವಿಧ ಆಟಗಳಲ್ಲಿ ಭಾಗಿಯಾಗಿ ಗಮನ ಸೆಳೆದರು. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ, ಭಾಗವಹಿಸುವಿಕೆ ಬಹುಮುಖ್ಯ ಎಂಬುದನ್ನು ತೋರಿಸಿಕೊಟ್ಟರು. ಸಹೋದ್ಯೋಗಿಗಳು ಕೂಗಿ, ಚಪ್ಪಾಳೆ ತಟ್ಟುವ ಮೂಲಕ ಸ್ಪರ್ಧಿಗಳನ್ನು ಹುರಿದುಂಬಿದ ದೃಶ್ಯ ಸಾಮಾನ್ಯವಾಗಿತ್ತು. ಮನರಂಜನೆ ಕ್ರೀಡೆಗಳು ಆಕರ್ಷಣೆಯಾಗಿದ್ದವು.

    ವಿಜಯವಾಣಿ ಪ್ರೀಮಿಯರ್ ಲೀಗ್‌ಗೆ ಅದ್ದೂರಿ ತೆರೆ: ಹಿಗ್ಗಿ ಕುಣಿದ ಚಾಂಪಿಯನ್‌ಗಳು

    ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ಪ್ರತಿ ವರ್ಷ ಕ್ರೀಡಾಕೂಟ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ. ಪ್ರತಿ ವರ್ಷ ಇಂಥ ಕ್ರೀಡಾಕೂಟಕ್ಕೆ ಬರುವುದಕ್ಕೆ ನನಿಗೆ ಇಷ್ಟ. ಮುಂದಿನ ವರ್ಷ ಖೋಖೋ ಪಂದ್ಯ ನಡೆದರೆ ಖಂಡಿತವಾಗಿ ನಾನು ಪಾಲ್ಗೊಳ್ಳುತ್ತೇನೆ. ಹೆಚ್ಚು ಕ್ರೀಡೆಯಲ್ಲಿ ತೊಡಗಿದರೆ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಬಹುದು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು.
    ಸಂಗೀತಾ ಶೃಂಗೇರಿ. ನಟಿ

    ವಿಜಯವಾಣಿ ಪ್ರೀಮಿಯರ್ ಲೀಗ್‌ಗೆ ಅದ್ದೂರಿ ತೆರೆ: ಹಿಗ್ಗಿ ಕುಣಿದ ಚಾಂಪಿಯನ್‌ಗಳು

    ಎಲ್ಲರ ಸಹಕಾರದಿಂದಲೂ ಅತ್ಯಂತ ಯಶಸ್ಸಿಯಾಗಿ ವಿಪಿಎಲ್ ಲೀಗ್ ಮುಗಿಯಿತು. ಮೂರು ದಿನಗಳ ಕಾಲ ಅತ್ಯಂತ ರೋಚಕವಾಗಿ ಪಂದ್ಯಗಳು ನಡೆದವು. ನಾವೆಲ್ಲರೂ ಉತ್ಸಾಹದಿಂದ ಭಾಗಿಯಾಗಿ ಸಂಭ್ರಮಿಸಿದೆವು. ಕ್ರಿಕೆಟ್ ಮತ್ತು ಬ್ಯಾಡ್ಮಿಂಟನ್ ಸೇರಿ ಇತರ ಮನರಂಜನೆ ಆಟಗಳು ಆಡುವುದಕ್ಕೆ ಮೈದಾನ ನೀಡಿದ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಬೆಂ.ವಿವಿ ಸೇರಿ ಇತರಿಗೆ ಕೃತಜ್ಞತೆ ಸಲ್ಲಿಸಲಾಗುವುದು.
    ಕೆ.ಎನ್.ಚನ್ನೇಗೌಡ, ವಿಜಯವಾಣಿ ಸಂಪಾದಕ

    ನಾನು ರಾಜಕೀಯ ಬರಲು ಮತ್ತು ಸಾರ್ವಜನಿಕರಿಗೆ ಪರಿಚಯವಾಗಲು ನನ್ನ ಪತಿ ಕಾರಣ. ಪ್ರತಿ ಹಂತದಲ್ಲೂ ನನ್ನನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದ್ದಾರೆ. ರಾಜಕೀಯವಾಗಿ ಈ ಮಟ್ಟಕ್ಕೆ ಬೆಳೆಯಲು ನನ್ನ ಪತಿಯೇ ಕಾರಣ. ಅವರಿಗೆ ನಾನು ಆಭಾರಿಯಾಗಿದ್ದೇನೆ. ವಿಆರ್‌ಎಲ್ ಮೀಡಿಯಾ ಪ್ರತಿ ವರ್ಷ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಒಗ್ಗೂಡಿಸಿ ವಿಪಿಎಲ್ ಆಯೋಜನೆ ಮಾಡುತ್ತಿರುವುದು ವಿಶೇಷವಾದದ್ದು. ಸೋಲು-ಗೆಲವು ಸಾಮಾನ್ಯ.ಆದರೆ,ಭಾಗವಹಿಸುವಿಕೆ ಮುಖ್ಯ. ರಾಜಕೀಯದಲ್ಲಿ ಇದ್ದರೂ ಅಥವಾ ಇಲ್ಲದಿದ್ದರೂ ನಾನು ನಿಮಗೆ ಸದಾ ಜೊತೆಯಲ್ಲಿ ಇರುವೆ.
    -ಗಂಗಾಂಬಿಕೆ ಮಲ್ಲಿಕಾರ್ಜುನ್, ಬಿಬಿಎಂಪಿ ಮಾಜಿ ಮೇಯರ್

    ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ವರ್ಷಕ್ಕೊಮ್ಮೆ ಸಿಬ್ಬಂದಿಗಾಗಿ ಕ್ರೀಡೆ ಆಯೋಜನೆ ಮಾಡುತ್ತಿರುವುದು ಅಭಿನಂದನೀಯ. ಪಂದ್ಯದಲ್ಲಿ ಸೋತಿರುವ ಸ್ಪರ್ಧಿಗಳು ಧೃತಿಗೆಡದೆ ಮುಂದಿನ ವರ್ಷ ನಡೆಯುವ ಟೂರ್ನಿಯಲ್ಲಿ ಗೆಲುವು ಸಾಧಿಸಿ. ಕೃಷ್ಣರಾವ್ ಪಾರ್ಕ್‌ನಲ್ಲಿ ಸಿದ್ಧಗಂಗಾಮಠದ ಶ್ರೀ ಶಿವಕುಮಾರ್ ಸ್ವಾಮೀಜಿ ಹೆಸರಿನಲ್ಲಿ ಸ್ಥಾಪಿಸಿರುವ ಬ್ಯಾಡ್ಮಿಂಟನ್ ಕ್ರೀಡಾಂಗಣ ಕ್ರೀಡಾಪಟುಗಳಿಗೆ ಸಮರ್ಪಕವಾಗಿ ಸದ್ಬಳಕೆವಾಗುತ್ತಿರವುದು ಖುಷಿ ತಂದಿದೆ. ಬಡ ವರ್ಗದ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಇತರರಿಗೆ ಕಡಿಮೆ ಶುಲ್ಕ ಕಟ್ಟಿಸಿಕೊಂಡು ಬ್ಯಾಡ್ಮಿಂಟನ್ ಆಟ ಆಡುವುದಕ್ಕೆ ಅವಕಾಶ ನೀಡಲಾಗುತ್ತದೆ.
    ಮಲ್ಲಿಕಾರ್ಜುನ್. ರಾಜಕೀಯ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts