More

    ನಾರಿ ನಿನಗೊಂದು ಸ್ಯಾರಿ ಶಿರಸಿ ಸ್ಪರ್ಧಾ ವಿಜೇತರ ಆಯ್ಕೆ

    ಶಿರಸಿ: ಕನ್ನಡದ ನಂ1 ದಿನಪತ್ರಿಕೆ ವಿಜಯವಾಣಿ' ಆಯೋಜಿಸಿದ್ದನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ವಿಜೇತರ ಆಯ್ಕೆ ಪ್ರಕ್ರಿಯು ಶುಕ್ರವಾರ ನಗರದ ನೆಮ್ಮದಿ ಕುಟೀರದಲ್ಲಿ ನಡೆಯಿತು.
    ಸ್ಪರ್ಧಾರ್ಥಿಗಳು ಭರ್ತಿ ಮಾಡಿದ ಉತ್ತರದ ಚೀಟಿಗಳಲ್ಲಿ ಐದು ಚೀಟಿಗಳನ್ನು ಕಾರ್ಯಕ್ರಮಕ್ಕೆ ಆಗಮಿಸಿದ ವಿವಿಧ ಕ್ಷೇತ್ರಗಳ ಗಣ್ಯ ಮಹಿಳೆಯರು ಆಯ್ಕೆ ಮಾಡಿದರು. ಆಯ್ಕೆ ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಯಿತು.
    ಆಯ್ಕೆ ಪ್ರಕ್ರಿಯೆ ನಡೆಸಿ ಮಾತನಾಡಿದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಷಾ ಹೆಗಡೆ, ವಿಜಯವಾಣಿ ' ದಿನಪತ್ರಿಕೆಯು ಸಮಾಜಮುಖಿ ವರದಿಗಳನ್ನು ಬಿತ್ತರಿಸುವ ಮೂಲಕ ನಾಡಿನ ನಂ 1ದಿನಪತ್ರಿಕೆಯಾಗಿ ಹೊರಹೊಮ್ಮಿದೆ.ನಾರಿ ನಿನಗೊಂದು ಸ್ಯಾರಿ’ ಯಂತಹ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಓದುವ ಹವ್ಯಾಸ ಬೆಳೆಸುತ್ತಿದೆ.ಮುಂದಿನ ದಿನಗಳಲ್ಲಿ ವಿಜಯವಾಣಿ' ಪತ್ರಿಕೆ ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಯಲಿ ಎಂದು ಹಾರೈಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿರಸಿ ಉಪಾಧ್ಯಕ್ಷೆ ಗೌರಿ ನಾಯ್ಕ ಮಾತನಾಡಿ, ಸೀರೆ ನಮ್ಮ ಹಿಂದು ಧರ್ಮದ ಸಾಂಪ್ರದಾಯಿಕ ಕೊಡುಗೆಯಾಗಿದೆ. ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನುವಿಜಯವಾಣಿ’ ದಿನ ಪತ್ರಿಕೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ಶಿರಸಿ ಮಾಸ್ಟರ್ ಶಿಲ್ಪಾ ನಾಯ್ಕ ಮಾತನಾಡಿ, ವಿಜಯವಾಣಿ ಪತ್ರಿಕೆಯು ಇಂತಹ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಯಾಗಿದೆ ಎಂದರು.
    ನಗರದ ಗಣೇಶ ನೇತ್ರಾಲಯದ ಮಾಧುರಿ ಶಿವರಾಂ ಮಾತನಾಡಿ, ನಾರಿ ನಿನಗೊಂದು ಸ್ಯಾರಿ' ಸ್ಪರ್ಧೆಯ ಮೂಲಕ ಮಹಿಳೆಯರು ತಮ್ಮಲ್ಲಿರುವ ಜ್ಞಾನವನ್ನು ಹೊರಹಾಕಿದ್ದಾರೆ. ಸೀರೆಯ ಮಹತ್ವನ್ನು ಪತ್ರಿಕೆ ನಾಡಿಗೆ ತಿಳಿಸುವ ವಿಶಿಷ್ಟ ಕಾರ್ಯಕ್ರಮ ಮಾಡಿದೆ. ಭಾರತೀಯ ಸಂಸ್ಕೃತಿ ಯಲ್ಲಿ ಸೀರೆಗೆ ಮಹತ್ತರವಾದ ಸ್ಥಾನವಿದೆ ಎಂದರು. ವಕೀಲೆ ಹಾಗೂ ಲೇಡಿ ಲೈಕ್ಸ್ ಚಾರಿಟೆಬಲ್ ಟ್ರಸ್ಟ್ ನ ಅಧಕ್ಷೆ ಅರ್ಚನಾ ಜಯಪ್ರಕಾಶ್ ಮಾತನಾಡಿ, ತುಂಬಾ ಒಳ್ಳೆಯ ಉದ್ದೇಶ ದಿಂದವಿಜಯವಾಣಿ’ ಪತ್ರಿಕೆ ಇಂತಹ ಸ್ಪರ್ಧೆಯನ್ನು ಆಯೋಜಿಸಿದೆ. ತುಂಬಾ ಸಂತಸದ ಸಂಗತಿ ಯಾಗಿದೆ ಎಂದರು. ವಿಜಯವಾಣಿ ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಶಂಕರ ಜಾವೂರ, ಪ್ರಸಾರಾಂಗ ಪ್ರತಿನಿಧಿ ಆತ್ಮಾನಂದ ಮಡಿವಾಳರ, ಶಿರಸಿ ವರದಿಗಾರ ಶಿವಪ್ರಸಾದ ಹಿರೇಕೈ ಇದ್ದರು.

    ಉತ್ತಮ ಸ್ಪಂದನೆ
    ಆಗಸ್ಟ್ 1ರಿಂದ ಸೆಪ್ಟೆಂಬರ್ 15ರವರೆಗೆ ಜರುಗಿದ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗುವ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಲಾಯಿತು. ಓದುಗರು ಪ್ರತಿ ದಿನ ಉತ್ತರಗಳನ್ನು ಭರ್ತಿ ಮಾಡಿ ವಿಜಯವಾಣಿ ಕಚೇರಿಗೆ ತಲುಪಿಸಿದ್ದರು. ಒಟ್ಟಾರೆ 1 ತಿಂಗಳ ಸ್ಪರ್ಧೆಯಲ್ಲಿ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಿಂದ 2 ಸಾವಿರಕ್ಕೂ ಅಽಕ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಶುಕ್ರವಾರ ಶಿರಸಿ ಕ್ಷೇತ್ರದ ಐವರು ಅದೃಷ್ಟಶಾಲಿಗಳ ಆಯ್ಕೆ ನಡೆದಿದ್ದು, ಶೀಘ್ರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಇತರ 5 ವಿಧಾನಸಭಾ ಕ್ಷೇತ್ರಗಳ ವಿಜೇತರ ಆಯ್ಕೆ ಪ್ರಕ್ರಿಯೆ ಹಾಗೂ ಬಹುಮಾನ ವಿತರಣೆ ನಡೆಯಲಿದೆ.

    ವಿಜೇತರಿವರುಸುಪ್ರೀತಾ ಸುಬ್ರಾಯ ಭಟ್ ಹುಳಗೋಳ ಶಿರಸಿ
    ಶರಾವತಿ ವಿ.ಹೆಗಡೆ ಶಿರಸಿ
    ಮಂಜುಳಾ ವಿ.ಪ್ರಭು ಶಿರಸಿ
    ಇಂದಿರಾ ಲಕ್ಷ್ಮಣ ನಾಯ್ಕ ಸಿದ್ದಾಪುರ
    ರೇವತಿ ಎಸ್. ಹೊಸೂರು ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts