More

    ವಿಜಯವಾಣಿ ರಾಜ್ ಉತ್ಸವ: ಡಾ.ರಾಜ್ ಎಂಬ ಯೋಗಪುರುಷ

    ನಟನೆಯಲ್ಲಿ ಅಣ್ಣಾವು ಎಷ್ಟು ಪಕ್ವವಾಗಿದ್ದರೋ ಅವರ ಜೀವನಶೈಲಿಯೂ ಅಷ್ಟೇ ಅಚ್ಚುಕಟ್ಟು. ಅವರ ಆಹಾರ ಪದ್ಧತಿಯೂ ವಿಶೇಷತೆಯಿಂದ ಕೂಡಿರುತ್ತಿತ್ತು. ಮಾಂಸಾಹಾರ ಪ್ರಿಯರಾಗಿದ್ದರೂ, ಅದಕ್ಕೆ ತಕ್ಕಂತೆ ದೈಹಿಕ ಕಸರತ್ತು ಅವರ ನಿತ್ಯದ ರೂಢಿಯಾಗಿತ್ತು. ಯೋಗಾಭ್ಯಾಸವನ್ನು ಕರಗತ ಮಾಡಿಕೊಂಡಿದ್ದರು. ಆ ಕಾರಣಕ್ಕೆ ಕೊನೆಯವರೆಗೂ ಫಿಟ್ನೆಸ್ ಅನ್ನು ಕಾಯ್ದುಕೊಂಡಿದ್ದರು. ಇಂದು ಅವರ ಜನ್ಮದಿನ.

    ಆ ಪ್ರಯುಕ್ತ ರಾಜ್ ಯೋಗಪುರುಷನಾದ ಕಥೆ ಇಲ್ಲಿದೆ…ಹೀರೋಗಳ ದೇಹಾಕೃತಿ ಚಿತ್ರದಿಂದ ಚಿತ್ರಕ್ಕೆ ಬದಲಾಗುತ್ತಲೇ ಇರುತ್ತದೆ. ಆದರೆ, ರಾಜಕುಮಾರ್ ಮಾತ್ರ ಆರಂಭದಿಂದ ಕೊನೆಯವರೆಗೂ ತಮ್ಮ ದೇಹಾಕೃತಿಯನ್ನು ಕಟ್ಟುನಿಟ್ಟಾಗಿ ನಿರ್ವಹಣೆ ಮಾಡಿಕೊಂಡು ಬಂದಿದ್ದರು. ಅದಕ್ಕೆ ವ್ಯಾಯಾಮದ ಜತೆಗೆ ಯೋಗ ಸಹ ಒಂದು ಕಾರಣ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅವರು ದೈಹಿಕ ಮತ್ತು ಮಾನಸಿಕವಾಗಿ ಅಷ್ಟು ಗಟ್ಟಿಯಾಗಿದ್ದಿದ್ದಿಕ್ಕೆ ಕಾರಣವೇ ಯೋಗ. ಹಲವು ವರ್ಷಗಳ ಕಾಲ ಪ್ರತಿನಿತ್ಯ ಕಠಿಣ ಯೋಗಾಭ್ಯಾಸ ಮಾಡಿದ್ದರಿಂದಲೇ ಅವರು 108 ದಿವಸಗಳ ಕಾಲ ವನವಾಸದಲ್ಲಿದ್ದರೂ, ಅಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದರೂ, ಅವೆಲ್ಲದರಿಂದ ಧೈರ್ಯವಾಗಿ ಹೊರಬಂದರು.

    ರಾಜಕುಮಾರ್ ಯೋಗಾಭ್ಯಾಸ ಮೊರೆಹೋಗಿದ್ದು ತಮ್ಮ 50ನೇ ವರ್ಷದ ನಂತರ. 70ರ ದಶಕದ ಕೊನೆಯಲ್ಲಿ ಅವರಿಗೆ ಯೋಗಗುರು ಎಚ್.ಎಸ್. ನಾಯ್ಕರ್ ಪರಿಚಯವಾಯಿತು. ಅವರಿಂದ ಯೋಗ ಕಲಿತ ರಾಜಕುಮಾರ್, ಅದನ್ನು ತಮ್ಮ ದಿನನಿತ್ಯದ ಭಾಗವನ್ನಾಗಿ ಸಿಕೊಂಡರು. ಬೆಳಗ್ಗೆ ಬೇಗ ಎದ್ದು, ಯೋಗ ಮಾಡಿ, ಆ ನಂತರ ದಿನಚರಿಯನ್ನು ಮುಂದುವರಿ ಸುತ್ತಿದ್ದರು. ಯೋಗ ಕಲಿಯುವುದಕ್ಕಿಂತ ಮುನ್ನ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತಂತೆ. ಬೆನ್ನುನೋವು ಅವರನ್ನು ಕಾಡುತ್ತಿತ್ತಂತೆ. ಕ್ರಮೇಣ ನಿರಂತರ ಯೋಗಾಭ್ಯಾಸದಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಬಲಿಷ್ಠರಾಗಿದ್ದಾರೆ ರಾಜಕುಮಾರ್. ಅಷ್ಟೇ ಅಲ್ಲ, ಯೋಗದಿಂದಲೇ ಅವರು ಸಾಕಷ್ಟು ಶಕ್ತಿಯನ್ನೂ ಸಂಪಾದಿಸಿದ್ದರು ಎಂದು ಹೇಳಲಾಗುತ್ತದೆ.

    ಎಲ್ಲರಿಗೂ ಗೊತ್ತಿರುವಂತೆ ಯೋಗದ ವಿಷಯಕ್ಕೆ ಬಂದರೆ, ರಾಜಕುಮಾರ್ ಗುರುವಾಗಿದ್ದವರು ನಾಯ್ಕರ್. ಆದರೆ, ರಾಜಕುಮಾರ್ ಅವರೇ ತಮ್ಮ ಗುರು ಎಂದು ನಾಯ್ಕರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ನಾನು ಅವರ ಗುರುವಲ್ಲ. ಬದಲಿಗೆ ಅವರೇ ನನ್ನ ಗುರು. ಬರೀ ಈ ಜನ್ಮದಲ್ಲಷ್ಟೇ ಅಲ್ಲ, ಹಿಂದಿನ ಜನ್ಮಗಳಲ್ಲೂ ನನ್ನ ಗುರು ಅವರೇ. ನಾನು ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದು 60ರ ದಶಕದಲ್ಲಿ. ಅವರ ದೇಹ ರ್ಸ³ಸುತ್ತಿದ್ದಂತೆಯೇ ಅವರು ಸಾಮಾನ್ಯ ಮನುಷ್ಯರಲ್ಲ, ಹಿಂದಿನ ಜನ್ಮದಲ್ಲಿ ಅವರು ಯೋಗಿಯಾಗಿದ್ದರು ಎಂಬುದು ನನಗೆ ಅರ್ಥವಾಗಿತ್ತು’ ಎಂದು ಹೇಳಿಕೊಂಡಿದ್ದರು.

    ಯೋಗದ ಬಗ್ಗೆ ರಾಜಕುಮಾರ್ ಅವರಿಗಿದ್ದ ಆಸಕ್ತಿ ಮತ್ತು ಅವರೊಬ್ಬ ಅದ್ಭುತ ಯೋಗಪಟುವಾಗಿದ್ದರು ಎಂದು ಜನಸಾಮಾನ್ಯರಿಗೆ ಗೊತ್ತಾಗಿದ್ದು ‘ಕಾಮನಬಿಲ್ಲು’ ಚಿತ್ರದಿಂದ. ಚಿ. ದತ್ತರಾಜ್ ನಿರ್ದೇಶನದ ಈ ಚಿತ್ರದ ಆರಂಭದಲ್ಲಿ ರಾಜಕುಮಾರ್ ಯೋಗ ಮಾಡುವ ದೃಶ್ಯಗಳಿವೆ. ಈ ಚಿತ್ರದ ನಂತರ ರಾಜಕುಮಾರ್ ಮತ್ತು ಅವರ ಯೋಗದ ನಂಟು ಇನ್ನಷ್ಟು ಜನಪ್ರಿಯವಾಯಿತು.

    ಡಾ.ರಾಜಕುಮಾರ್​ ಕನ್ನಡದ ಕಣ್ಮಣಿ ಆಗಿದ್ದು ಈ ಕಾರಣಕ್ಕೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts