More

    ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮದರ್ಶನ ಅಂಕಣ: ಭಗವದ್ ಸಾಮೀಪ್ಯವೇ ಶ್ರೇಷ್ಠ

    ರಾಕ್ಷಸರ ಭಕ್ತಿಗೆ ಒಲಿದಷ್ಟು ಸುಲಭದಲ್ಲಿ ದೇವತಾಶಕ್ತಿಗಳು ಸಾತ್ವಿಕ ಭಕ್ತರಿಗೊಲಿದ ನಿದರ್ಶನಗಳು ಕಡಿಮೆ. ಆದರೆ ರಾಕ್ಷಸ ಸ್ವಭಾವವೆಂದರೆ ತಾನು ಶಾಶ್ವತನಾಗಿರಬೇಕು, ಅಜೇಯನಾಗಿರಬೇಕು ಎಂದು ಬೇಡುತ್ತಾರೆಯೇ ಹೊರತು ಲೋಕಕಲ್ಯಾಣವಾಗಲಿ ಎಂದಲ್ಲ. ಅದೇ ಸಾತ್ವಿಕರು ಲೋಕಕಲ್ಯಾಣದ ಚಿಂತನೆಯಲ್ಲಿರುತ್ತಾರೆ.

    ಬಾಲ್ಯದಲ್ಲಿದ್ದಾಗ ಯಕ್ಷಗಾನ ಪ್ರಸಂಗಗಳನ್ನು ನೋಡುವುದು ನನಗೆ ಆಸಕ್ತಿಯ ಹವ್ಯಾಸವಾಗಿತ್ತು. ಯಕ್ಷಗಾನಗಳಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮದರ್ಶನ ಅಂಕಣ: ಭಗವದ್ ಸಾಮೀಪ್ಯವೇ ಶ್ರೇಷ್ಠಬರುವ ಕಥೆಗಳಲ್ಲಿ ‘ತ್ರಿಜನ್ಮ ಮೋಕ್ಷ’ ಪ್ರಸಿದ್ಧವಾದದ್ದು. ಆ ಕಥೆಯಲ್ಲಿ ದುಷ್ಟ ಅಸುರರ ಸಂಹಾರಕ್ಕಾಗಿ ಅವತಾರ ತಳೆಯುವ ಭಗವಂತನು ಸಾಮಾನ್ಯ, ಸಾತ್ವಿಕ ಭಕ್ತರನ್ನು ಯಾವ ರೀತಿಯಾಗಿ ಕಾಣುತ್ತಾನೊ ಹಾಗೆಯೇ ಅಸುರರ ಸಂಹಾರಕಾಲದಲ್ಲಿಯೂ ಭಕ್ತಿ, ಶ್ರದ್ಧೆಯನ್ನು ಮನ್ನಿಸಿ ಅವರವರ ವ್ಯಕ್ತಿತ್ವಕ್ಕೆ ಅನುಗುಣವಾಗಿ ಅವಮಾನಗೊಳಿಸದೆ ಅವರ ಹೆಸರು, ಕೀರ್ತಿಗಳನ್ನು ಶಾಶ್ವತವಾಗಿ ಇರುವಂತೆ ಮಾಡಿದುದು ವೇದ್ಯವಾಗುತ್ತದೆ.

    ‘ತ್ರಿಜನ್ಮ ಮೋಕ್ಷ’ ಎಂಬ ಕಥೆಯನ್ನೊಳಗೊಂಡ ಪ್ರಸಂಗ. ಶ್ರೀಮನ್ಮಹಾವಿಷ್ಣು ವೈಕುಂಠದಲ್ಲಿ ಪವಡಿಸಿದ್ದಾಗ ಬ್ರಹ್ಮನ ಮಾನಸಪುತ್ರರಾದ ಸನತ್ಕುಮಾರರು ಭೇಟಿಗಾಗಿ ಆಗಮಿಸಿದರು. ಈ ಋಷಿಗಳು ಹೆಚ್ಚು ವಯಸ್ಸಿನವರಾಗಿದ್ದರೂ ತಪಃಶಕ್ತಿಯ ಕಾರಣದಿಂದ ಕುಮಾರರಂತೆ ಕಾಣಿಸುತ್ತಿದ್ದರು. ಅವರು ಮುಖ್ಯದ್ವಾರ ಸಮೀಪಿಸಿದಾಗ, ದ್ವಾರಪಾಲಕರಾದ ಜಯ ಮತ್ತು ವಿಜಯರು ತಡೆದರು. ತಮ್ಮ ಸ್ವಾಮಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು, ಈಗ ದೇವನನ್ನು ನೋಡಲು ಸಾಧ್ಯವಿಲ್ಲ ಎಂದರು. ಇದರಿಂದ ಕೋಪಗೊಂಡ ಮುನಿಗಳು ತ್ರಿಲೋಕಗಳ ಸ್ಥಿತಿಕರ್ತನಾದ ವಿಷ್ಣು ಯಾವಾಗಲೂ ತನ್ನ ಭಕ್ತರಿಗೆ ಲಭ್ಯವಿರಲೇ ಬೇಕು ಎಂದು ಹೇಳುತ್ತ, ದ್ವಾರಪಾಲಕರಾದ ಜಯ ಮತ್ತು ವಿಜಯರು ದೈವತ್ವ ತ್ಯಜಿಸಿ, ಮನುಷ್ಯಜನ್ಮ ಪಡೆದು ಸಾಮಾನ್ಯ ಮಾನವರಂತೆ ಬಾಳಬೇಕು ಎಂದು ಶಾಪ ನೀಡಿದರು.

    ಆಗ ಜಯ-ವಿಜಯರು ತಾವು ಕರ್ತವ್ಯಪಾಲನೆ ಮಾಡಿದರೂ ಶಾಪಗ್ರಸ್ತರಾದುದಕ್ಕೆ ಪಶ್ಚಾತ್ತಾಪದಿಂದ ಕ್ಷಮೆಯಾಚಿಸಲು ಶ್ರೀಮನ್ನಾರಾಯಣನು ಬಂದು, ‘ಮುನಿಗಳೇ ಅವರಿಬ್ಬರೂ ವೈಕುಂಠದ ದ್ವಾರಪಾಲಕರು. ಅವರು ನಿಮ್ಮನ್ನು ತಡೆದದ್ದು ತಪ್ಪು. ಸೇವಕರು ಮಾಡಿದ ತಪ್ಪಿಗೆ ಯಜಮಾನನು ಹೊಣೆಗಾರನಾಗುವುದರಿಂದ ನಾನೇ ಅಪರಾಧಿ’ ಎಂದು ಹೇಳಲು, ಮುನಿಗಳಿಗೆ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿ ನಮಸ್ಕರಿಸಿ ತೆರಳಿದರು. ಶಾಪದಿಂದ ದುಃಖತಪ್ತರಾದ ಜಯ-ವಿಜಯರು ಶ್ರೀಹರಿಯಲ್ಲಿ, ‘ಶಾಪದಿಂದ ನಮ್ಮನ್ನು ಮುಕ್ತಗೊಳಿಸು ಸ್ವಾಮಿ, ನಿನ್ನನ್ನು ಅಗಲಿ ಇರುವುದು ಸಾಧ್ಯವಿಲ್ಲ’ ಎಂದು ಬೇಡಿದರು. ಅದಕ್ಕೆ ಶ್ರೀಹರಿಯು, ‘ಅದು ಸಾಧ್ಯವಿಲ್ಲ. ಮಹಾತಪಸ್ವಿಗಳು ನೀಡಿದ ಶಾಪ ಎಂದೂ ಸುಳ್ಳಾಗಲಾರದು. ಆದರೆ ಒಂದು ಪರಿಹಾರ ನೀಡುತ್ತೇನೆ, ನೀವು ನನ್ನ ಭಕ್ತರಾಗಿ ಭೂಮಿಯಲ್ಲಿ ಏಳು ಜನ್ಮವೆತ್ತುತ್ತೀರಿ ಅಥವಾ ನನ್ನ ಶತ್ರುಗಳಾಗಿ ಮೂರು ಜನ್ಮವೆತ್ತಿ ವೈಕುಂಠಕ್ಕೆ ಹಿಂದಿರುಗುತ್ತೀರಿ’ ಎನ್ನಲು, ‘ನಿನ್ನ ಶತ್ರುಗಳಾದರೂ ಸರಿ ಮೂರು ಜನ್ಮವೇ ಸಾಕು ಪ್ರಭು, ನಿನ್ನನ್ನು ಅಗಲಿ ಹೆಚ್ಚು ಸಮಯದೂರ ಇರಲು ಸಾಧ್ಯವಿಲ್ಲ. ಆದರೆ ನಮ್ಮ ಅಂತ್ಯ ಮಾತ್ರ ನಿನ್ನಿಂದಲೇ ಆಗಬೇಕು’ ಎಂದು ಕೇಳಿಕೊಂಡರು.

    ಅವರು ಶತ್ರುಗಳಾಗಿ ಮೋಕ್ಷವನ್ನು ಕೇಳುವುದಕ್ಕೆ ಇನ್ನೊಂದು ಕಾರಣವೂ ಇದೆ. ಭಕ್ತನಾದರೆ ಪ್ರಾರ್ಥನೆ, ಪೂಜೆ, ಸ್ತುತಿ ಮಾಡುತ್ತ ಇರುತ್ತಾರೆ. ಆದರೆ ಶತ್ರುಗಳಾದರೆ ನಿರಂತರವಾಗಿ ದ್ವೇಷ, ಕ್ರೋಧದಿಂದ ಶತ್ರುವನ್ನು ನೆನೆಯುತ್ತಿರುತ್ತಾರೆ. ಹೀಗೆ ಜಯ-ವಿಜಯರು ಭೂಲೋಕದಲ್ಲಿ ಮೊದಲು ದಿತಿದೇವಿ ಹಾಗೂ ಕಶ್ಯಪ ಋಷಿಗಳ ಮಕ್ಕಳಾಗಿ ಹಿರಣ್ಯಾಕ್ಷ ಹಾಗೂ ಹಿರಣ್ಯಕಶ್ಯಪು ಎಂಬ ಹೆಸರಿನಿಂದ ಮಹಾದೈತ್ಯರಾಗಿ ಜನಿಸಿದರು. ಇವರು ವಿಷ್ಣುವಿನ ಹೆಸರು ಕೇಳಿದಾಕ್ಷಣ ಉರಿದುಹೋಗುತ್ತಿದರು. ಹಿರಣ್ಯಕಶ್ಯಪುವಿನ ಮಗನಾದ ಪ್ರಹ್ಲಾದನು ವಿಷ್ಣುವಿನ ಪರಮಭಕ್ತ. ವಿದ್ಯಾಭ್ಯಾಸಕ್ಕಾಗಿ ಗುರುಗಳ ಬಳಿ ಇದ್ದಾಗ ‘ಹಿರಣ್ಯಕಶ್ಯಪುವೇ ಸರ್ವಶಕ್ತ. ಆದುದರಿಂದ ಅವನ ನಾಮಸ್ಮರಣೆಯನ್ನೇ ಮಾಡಬೇಕು’ಎಂದು ಹೇಳಿದರೂ ವಿಷ್ಣುವನ್ನೇ ಸ್ಮರಿಸುತ್ತಿದ್ದ. ಕುಪಿತನಾದ ಅಸುರನು ಮಗನಾದ ಪ್ರಹ್ಲಾದನನ್ನು ಹಲವು ರೀತಿಯಿಂದ ಕೊಲ್ಲಲು ಪ್ರಯತ್ನಪಟ್ಟರೂ ಆಗುವುದಿಲ್ಲ. ಆಗ ಶ್ರೀಹರಿಯು ನರಸಿಂಹಾವತಾರದಿಂದ ಹಿರಣ್ಯಕಶ್ಯಪುವನ್ನು ಸಂಹರಿಸಿದ. ವರಾಹ ಅವತಾರದಿಂದ ಹಿರಣ್ಯಾಕ್ಷನನ್ನು ವಧಿಸಿದ.

    ಜಯ-ವಿಜಯರು ತ್ರೇತಾಯುಗದಲ್ಲಿ ಎರಡನೇ ಜನ್ಮವಾಗಿ ರಾವಣ-ಕುಂಭಕರ್ಣರಾಗಿ ಜನಿಸಿದರು. ತನ್ನ ಸಹೋದರರು ಮತ್ತು ಮಕ್ಕಳನ್ನು ಕಳೆದುಕೊಂಡರೂ ರಾಮನ ನಾಶದ ವಿಚಾರವೇ ರಾವಣನ ಮನಸ್ಸನ್ನು ವ್ಯಾಪಿಸಿತ್ತು. ನಿರಂತರವಾಗಿ ರಾಮನನ್ನೇ ಚಿಂತಿಸುವ ಈ ಪರಿ ಭಕ್ತಿಯ ಇನ್ನೊಂದು ಮುಖವಲ್ಲವೇ? ಶ್ರೀಹರಿ ರಾಮಾವತಾರವೆತ್ತಿ ರಾವಣ, ಕುಂಭಕರ್ಣರನ್ನೂ ಸಂಹರಿಸಿದ. ನಂತರ ಜಯ-ವಿಜಯರು ದ್ವಾಪರಯುಗದಲ್ಲಿ ಶಿಶುಪಾಲ ಮತ್ತು ದಂತವಕ್ರರಾಗಿ ಜನಿಸಿ ಶ್ರೀಹರಿಯ ಕೃಷ್ಣಾವತಾರದಲ್ಲಿ, ಶ್ರೀಕೃಷ್ಣನಿಂದಲೇ ಹತರಾಗುತ್ತಾರೆ. ಹೀಗೆ ಮೂರು ಜನ್ಮಗಳಲ್ಲೂ ಶ್ರೀಹರಿಯ ವೈರಿಗಳಾಗಿ ಜನಿಸಿ, ಶ್ರೀಹರಿಯಿಂದಲೇ ಅಂತ್ಯವನ್ನು ಕಂಡು, ವೈಕುಂಠಕ್ಕೆ ದ್ವಾರಪಾಲಕರಾಗಿ ಹಿಂತಿರುಗಿದರು. ಅಂದರೆ ಸಾತ್ವಿಕ ಭಕ್ತರಾಗುವ ಬದಲು ದುಷ್ಟರಂತೆ ಅವತರಿಸಿ ತಮ್ಮನ್ನು ನಾಶಪಡಿಸಲು ಭಗವಂತನೇ ಅವತಾರಗಳನ್ನೆತ್ತುವಂತೆ ಮಾಡಿದರು.

    ‘ದೇವೀ ಮಹಾತ್ಮೆ’ಯಲ್ಲೂ ಇದೇ ರೀತಿಯ ವಿಶೇಷತೆ ಕಾಣಬಹುದು. ವಿದ್ಯುನ್ಮಾಲಿ ಮತ್ತು ಮಾಲಿನಿ ಪುತ್ರಪ್ರಾಪ್ತಿಗಾಗಿ ಮಾಡಿದ ಕಠೋರ ತಪಸ್ಸಿನಿಂದ ಹೊಮ್ಮುವ ಶಾಖ ಋಷಿಯೊಬ್ಬನ ತಪಸ್ಸಿಗೆ ಭಂಗ ತರುತ್ತದೆ. ಇದರಿಂದ ಕೋಪಾವಿಷ್ಟನಾದ ಋಷಿಯು ಮಹಿಷಿಯ ರೂಪದಲ್ಲಿ ತಪಸ್ಸನ್ನಾಚರಿಸುತ್ತಿದ್ದ ಮಾಲಿನಿಗೆ ‘ನಿನ್ನ ಹೊಟ್ಟೆಯಲ್ಲಿ ಮಹಿಷವೇ (ಕೋಣ) ಜನ್ಮತಾಳಲಿ’ ಎಂದು ಶಪಿಸಿದ. ಇದರ ಫಲವೇ ಮಹಿಷಾಸುರನ ಜನನ.

    ಮಹಿಷನು ತಪಸ್ಸನ್ನಾಚರಿಸಿ ಸಿಂಹವನ್ನು ಪಳಗಿಸಬಲ್ಲ ಹೆಣ್ಣಿನ ಹೊರತಾಗಿ ಬೇರಾರಿಂದಲೂ ಸಾವು ಬಾರದಂತಹ ವಿಶೇಷ ವರ ಪಡೆದ. ದೇವಾದಿ ದೇವತೆಗಳನ್ನು ಸೋಲಿಸಿದ. ದೇವತೆಗಳು ಯಥಾಪ್ರಕಾರ ತ್ರಿಮೂರ್ತಿಗಳ ಮೊರೆ ಹೋದರು. ಆಗ ದೇವತೆಗಳು ತಮ್ಮೆಲ್ಲರ ಶಕ್ತಿಯನ್ನು ಸೇರಿಸಿ ದೇವಿಯನ್ನು ಸೃಷ್ಟಿಸಿ, ಆ ದೇವಿಗೆ ಶಿವನು ತ್ರಿಶೂಲವನ್ನು, ವಿಷ್ಣು ಚಕ್ರವನ್ನು, ಇಂದ್ರನು ವಜ್ರಾಯುಧವನ್ನು ನೀಡಿದರು. ಮಹಿಷಾಸುರ ಮತ್ತು ದೇವಿ ನಡುವೆ ಒಂಬತ್ತು ದಿನಗಳ ಘೊರ ಯುದ್ಧವಾಯಿತು. ಸಿಂಹವಾಹಿನಿಯಾಗಿ ಪ್ರಕಟಗೊಳ್ಳುವ ಆದಿಮಾಯೆ ಮಹಿಷಾಸುರನನ್ನು ಕೊನೆಗಾಣಿಸಿದಳು. ಆದರೆ ಮಹಿಷಾಸುರ ದುಷ್ಟನಾದರೂ ಭಗವದ್ಭಕ್ತನಾದ್ದರಿಂದ ಅವನ ಹೆಸರು ಉಳಿಸಿ ಮಹಿಷಾಸುರಮರ್ದಿನಿಯಾಗಿ ಭಕ್ತರ ಹೃದಯದಲ್ಲಿ ನೆಲೆಸಿದ್ದಾಳೆ. ಎಲ್ಲ ಪೂಜಾರ್ಹ ಮಂದಿರಗಳ ಮೂರ್ತಿಗಳಲ್ಲೂ ದೇವಿಯ ಜೊತೆಗೆ ಮಹಿಷನಿಗೂ ಪೂಜೆಯಾಗುತ್ತದೆ.

    ಪ್ರಹ್ಲಾದನ ಮೊಮ್ಮಗ ಬಲಿಚಕ್ರವರ್ತಿ ಇಂದ್ರನ ಮೇಲೆ ಯುದ್ಧಮಾಡಿ ಸ್ವರ್ಗರಾಜ್ಯವನ್ನು ವಶಪಡಿಸಿಕೊಂಡು ನರ್ಮದಾ ತೀರದಲ್ಲಿ ಅಶ್ವಮೇಧ ಯಾಗ ಮಾಡತೊಡಗಿದ. ಇದನ್ನು ಕಂಡು ಹೆದರಿದ ಬ್ರಹ್ಮಾದಿಗಳ ಮೊರೆಯನ್ನು ಕೇಳಿ ವಿಷ್ಣು ಆದಿತಿದೇವಿಯಲ್ಲಿ ವಾಮನರೂಪದಿಂದ ಅವತರಿಸಿ ಬಲಿಚಕ್ರವರ್ತಿಯ ಬಳಿಗೆ ಬಂದು ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿದ. ದಾನಶೂರನಾದ ಬಲಿ ವಿಷ್ಣುವಿನ ಮಾಯೆಯನ್ನು ತಿಳಿಯದೆ ದಾನ ನೀಡಲು ಒಪ್ಪಿದ. ವಾಮನನು ಭೂಮ್ಯಂತರಿಕ್ಷಗಳನ್ನು ಎರಡು ಹೆಜ್ಜೆಗಳಲ್ಲಿ ಅಳೆದು ಮತ್ತೊಂದು ಹೆಜ್ಜೆಯನ್ನು ಎಲ್ಲಿಡಲೆಂದು ಕೇಳಿದಾಗ ವಚನಭ್ರಷ್ಟನಾಗದ ಬಲಿ ತನ್ನ ತಲೆಯ ಮೇಲೆ ಇಡಬೇಕೆಂದು ಹೇಳಿದ. ಅದರಂತೆ ವಿಷ್ಣು ಮೂರನೆಯ ಹೆಜ್ಜೆಯನ್ನು ಬಲಿಯ ತಲೆಯ ಮೇಲಿಟ್ಟು ಆತನನ್ನು ಪಾತಾಳಕ್ಕೆ ತುಳಿದನು.

    ಹೀಗೆ ಬಲಿ ಪಾತಾಳದೊಳಕ್ಕೆ ಇಳಿಯುತ್ತಿರುವಾಗ ತನಗೆ ಮೋಕ್ಷ ಯಾವಾಗ ಎಂದು ಕೇಳಿದನೆಂದೂ ಆಗ ವಿಷ್ಣು ‘ಭೂಮಿಯ ಮೇಲೆ ಜನರ ಸುಳಿವಿಲ್ಲದಿದ್ದಾಗ ನಿನಗೆ ಮೋಕ್ಷ ದೊರೆಯುತ್ತದೆ’ ಎಂದೂ ಹೇಳಿದನೆಂದೂ ಜನಪದ ನಂಬಿಕೆ. ಅದರಂತೆ ಬಲಿ ಪ್ರತಿವರ್ಷ ನರಕಚತುರ್ದಶಿಯ ದಿನ ಪಾತಾಳದಿಂದ ಹೊರಬಂದು ತುಂಬೆಗಿಡಕ್ಕೆ ಏಣಿ ಹಾಕಿಕೊಂಡು ಭೂಮಿಯ ಮೇಲೆ ಜನರಿರುವರೊ ಇಲ್ಲವೋ ಎಂದು ನೋಡುತ್ತಾನಂತೆ. ಭೂಮಿಯಲ್ಲಿ ಜನರಿರುವುದನ್ನು ಆತನಿಗೆ ತೋರಿಸುವುದಕ್ಕಾಗಿಯೇ ಆ ದಿನ ಮಾನವರು ಕೂಗುಹಾಕುತ್ತ ಹೊಲದ ನಾಲ್ಕು ಮೂಲೆಗಳಿಗೂ ಬೂದಿಯನ್ನು ಬಿಡುವುದು ಈಗಲೂ ಕೆಲವು ಕಡೆ ರೂಢಿಯಲ್ಲಿದೆ. ಅದರಿಂದಲೇ ಬಲಿಪಾಡ್ಯಮಿ ಜೊತೆಗೇ ನರಕ ಚತುರ್ದಶಿಯನ್ನೂ ಅಚರಿಸಲಾಗುತ್ತದೆ.

    ಸಮುದ್ರ ಮಥನದ ಸಂದರ್ಭವೂ ಹೀಗೇ. ಸ್ವರ್ಗಲೋಕದ ವೈದ್ಯನಾದ ಧನ್ವಂತರಿ ಅಮೃತವುಳ್ಳ ಕೊಡದೊಂದಿಗೆ ಹೊರಬಂದ. ಆಗ ಅಮೃತಕ್ಕಾಗಿ ದೇವತೆಗಳು ಹಾಗೂ ಅಸುರರ ನಡುವೆ ಯುದ್ಧ ನಡೆಯಿತು. ಕೊನೆಗೆ ಅಸುರರ ಕೈಗೆ ಅಮೃತ ಸಿಕ್ಕಿತು. ಭಯಭೀತರಾದ ದೇವತೆಗಳು ವಿಷ್ಣುವಿನ ಮೊರೆಹೋದರು. ವಿಷ್ಣು ಮೋಹಿನಿ ಅವತಾರ ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದ. ಆದರೆ ರಾಹು ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ಸೂರ್ಯ ಹಾಗೂ ಚಂದ್ರ ಇದನ್ನು ಗಮನಿಸಿ, ಮೋಹಿನಿಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳಗಿಳಿಯುವ ಮುನ್ನ, ಮೋಹಿನಿ ಸುದರ್ಶನ ಚಕ್ರದಿಂದ ರಾಹುವಿನ ತಲೆ ಉರುಳಿಸಿದಳು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಆದ್ದರಿಂದ ದುಷ್ಟನಾದರೂ ದೇವಕೃಪೆಗೆ ಪಾತ್ರನಾಗಿದ್ದರಿಂದ ಅವನು ನವಗ್ರಹರಲ್ಲೊಬ್ಬನಾಗಿ ಪೂಜನೀಯನಾದ. ವಸ್ತುತಃ ಏಳು ಗ್ರಹಗಳಾದರೂ ಜ್ಯೋತಿಷ್ಯದ ಲೆಕ್ಕಾಚಾರಕ್ಕೆ ಛಾಯಾಗ್ರಹರಾದ ರಾಹು-ಕೇತುಗಳನ್ನು ಸೇರಿಸಿ ನವಗ್ರಹರೆಂದೇ ಪೂಜಿಸಲ್ಪಡುತ್ತಾರೆ.

    ನವರಸಗಳಲ್ಲಿ ವೀರರಸವೂ ಒಂದು. ಶಾಂತರಸಗಳಲ್ಲಿ ಭಕ್ತಿಯ ಸಮರ್ಪಣೆ ನಿವೇದನೆ ಮುಖಾಂತರ ಇರುತ್ತದೆ. ಅದರೆ ರಾಕ್ಷಸ ಭಕ್ತಿ ಭಿನ್ನವಾದುದು. ದಾನವರಿಗೆ ದೇವೇಂದ್ರನ ಮೇಲೆ ಸೇಡುತೀರಿಸಿಕೊಳ್ಳುವ ಸಿಟ್ಟು ಮತ್ತು ಸೆಡವು. ದಾನವರು ಮತ್ತು ದೇವತೆಗಳಿಗೆ ಇಂದ್ರಲೋಕದ ಅಂದರೆ ಸ್ವರ್ಗದ ಅಧಿಕಾರ ಬೇಕು. ಸುಖ, ಭೋಗ ಜೀವನದ ಅತ್ಯುಚ್ಚ ಕಲ್ಪನೆ ಅದು. ದೇವಲೋಕದ ಅಧಿಪತ್ಯಕ್ಕಾಗಿ ಬ್ರಹ್ಮನ ಕುರಿತು ತಪಸ್ಸು ಮಾಡುತ್ತಿದ್ದ ಅಸುರರು ಎಂದೂ ತಪಸ್ಸಿನಲ್ಲಿ ವಿಫಲರಾದಂತಿಲ್ಲ.

    ಈ ರಾಕ್ಷಸರ ಭಕ್ತಿಗೆ ಒಲಿದಷ್ಟು ಸುಲಭದಲ್ಲಿ ದೇವತಾಶಕ್ತಿಗಳು ಸಾತ್ವಿಕ ಭಕ್ತರಿಗೊಲಿದ ನಿದರ್ಶನಗಳು ಕಡಿಮೆ. ಆದರೆ ರಾಕ್ಷಸ ಸ್ವಭಾವವೆಂದರೆ ತಾನು ಶಾಶ್ವತನಾಗಿರಬೇಕು, ಅಜೇಯನಾಗಿರಬೇಕು ಎಂದು ಬೇಡುತ್ತಾರೆಯೇ ಹೊರತು ಲೋಕಕಲ್ಯಾಣವಾಗಲಿ ಎಂದಲ್ಲ. ಅದೇ ಸಾತ್ವಿಕರು ಮತ್ತು ಭಕ್ತಿಪಂಥದ ತಪಸ್ವಿಗಳು ಅಥವಾ ಸಾಧಕರು ಲೋಕಕಲ್ಯಾಣದ ಚಿಂತನೆಯಲ್ಲಿರುತ್ತಾರೆ, ಹಾಗೇ ರಾಕ್ಷಸರು ಒಮ್ಮೆ ವಿಜೃಂಭಿಸಿದರೂ ನಾಶವಾಗುತ್ತಾರೆ. ಭಗವಂತನಿಗೂ ಸಾಕಷ್ಟು ಚಿಂತೆ, ಸಮಸ್ಯೆಗಳನ್ನು ಹಾಕಿ ಆತನಿಂದಲೇ ಅಂತ್ಯ ಕಾಣುತ್ತಾರೆ. ಭಕ್ತರು ಶಾಶ್ವತವಾಗಿದ್ದು ಸದಾ ಸ್ಮರಣೀಯರಾಗುತ್ತಾರೆ.

    ಒಮ್ಮೆ ನಮ್ಮ ಕ್ಷೇತ್ರದಲ್ಲಿ ನಡೆಯುತ್ತಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಒಬ್ಬ ಭಾಷಣಕಾರರು ಧಾರ್ವಿುಕ ಆಚರಣೆಗಳನ್ನು ಮೂಢನಂಬಿಕೆ ಎಂದು ಖಂಡನೆ ಮಾಡಿದರು. ಎಲ್ಲರಿಗೂ ಇವರು ನಾಸ್ತಿಕರಿರಬಹುದು ಎಂದೆನಿಸಿತ್ತು. ಆದರೆ, ಕಾರ್ಯಕ್ರಮಗಳು ಮುಗಿದು ದೇವಸ್ಥಾನ ಮುಂದೆ ಬಂದಾಗ ದೇವರಿಗೆ ಕೈ ಮುಗಿದರಂತೆ. ‘ಧಾರ್ವಿುಕ ಆಚರಣೆಗಳನ್ನು ಮೂಢನಂಬಿಕೆಯೆಂದು ಖಂಡನೆ ಮಾಡಿ ಇಲ್ಲಿ ದೇವರಿಗೆ ಕೈಮುಗಿಯುತ್ತಿದ್ದೀರಲ್ಲ’ ಎಂದು ಒಬ್ಬರು ಪ್ರಶ್ನಿಸಿದಾಗ ಅವರು ‘ದೇವರಿದ್ದರೆ ನನಗೆ ತೊಂದರೆ ಕೊಡುವುದು ಬೇಡ’ ಎನ್ನುವುದಕ್ಕಾಗಿ ನಮಸ್ಕರಿಸಿದ್ದೇನೆ ಎಂದರಂತೆ!

    ನಾಸ್ತಿಕ ಮತ್ತು ಆಸ್ತಿಕರ ಮಧ್ಯೆ ತುಂಬ ಅಂತರವಿದೆ. ಆಸ್ತಿಕರು ತನು, ಮನಗಳಿಂದ ಭಗವಂತನ್ನು ನಂಬಿ ಜೀವನ ನಡೆಸುತ್ತಾರೆ. ನಾಸ್ತಿಕರು ನಂಬಿಕೆ, ಆಚರಣೆಗಳನ್ನು ಒಪ್ಪದಿದ್ದರೂ ಸ್ಥಿರವಾಗಿರಬೇಕು. ಅರ್ಧಮನಸ್ಸಿನಿಂದ ದೇವರನ್ನು ಪ್ರಾರ್ಥಿಸಬಾರದು. ‘ದೇವರಿದ್ದರೆ ನನಗೆ ತೊಂದರೆ ಕೊಡುವುದು ಬೇಡ’ ಎನ್ನುವ ಭಾವನೆ ಇರಬಾರದು. ಈ ಮೇಲಿನ ಉದಾಹರಣೆಗಳನ್ನು ಏಕೆ ಕೊಡುತ್ತಿದ್ದೇನೆಂದರೆ ಭಕ್ತಿ ಎಂದರೆ ಚಂಚಲವಿಲ್ಲದೆ ಇರಬೇಕು. ಹಾಗಿದ್ದರೆ ಮಾತ್ರ ಭಗವಂತ ಒಲಿಯುತ್ತಾನೆ. ನಾಸ್ತಿಕರೂ ತಮ್ಮ ಸಿದ್ಧಾಂತಕ್ಕೆ ಬದ್ಧರಾಗಿ ಧರ್ಮಮಾರ್ಗದಿಂದಿದ್ದರೆ ಸ್ವಾಭಾವಿಕವಾಗಿ ಭಗವಂತನಿಗೆ ಹತ್ತಿರವಾಗುತ್ತಾರೆ.

    ಮೇಲೆ ಹೇಳಿದ ಎಲ್ಲ ದುಷ್ಟರು ವಿಷ್ಣುದ್ವೇಷಿಗಳಾಗಿದ್ದರಲ್ಲದೆ, ಬ್ರಹ್ಮ ಹಾಗೂ ಶಿವನ ಭಕ್ತರಾಗಿದ್ದರು. ಅವರು ಹೇಗಾದರೂ ಮಾಡಿ ಶತ್ರುವನ್ನು ಎದುರಿಸಬೇಕು ಎಂಬ ದೃಢಸಂಕಲ್ಪದಿಂದ ಕರ್ಮವನ್ನಾಚರಿಸಿದರು. ಈ ರೀತಿಯಲ್ಲಿ ನಾಸ್ತಿಕತ್ವ ಇದ್ದರೂ ಆಚಾರ, ವಿಚಾರ, ಚರ್ಯಗಳಲ್ಲಿ ನಿಯಮ, ನಿಷ್ಠೆ, ಧರ್ಮದಿಂದಿದ್ದರೆ ಅವರಿಗೆ ಒಳ್ಳೆಯ ಫಲ ಸಿಗುತ್ತದೆ ಎನ್ನುವುದೇ ಇದರ ಸಂದೇಶ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

    ರಾಕ್ಷಸರ ಭಕ್ತಿಗೆ ಒಲಿದಷ್ಟು ಸುಲಭದಲ್ಲಿ ದೇವತಾಶಕ್ತಿಗಳು ಸಾತ್ವಿಕ ಭಕ್ತರಿಗೊಲಿದ ನಿದರ್ಶನಗಳು ಕಡಿಮೆ. ಆದರೆ ರಾಕ್ಷಸ ಸ್ವಭಾವವೆಂದರೆ ತಾನು ಶಾಶ್ವತನಾಗಿರಬೇಕು, ಅಜೇಯನಾಗಿರಬೇಕು ಎಂದು ಬೇಡುತ್ತಾರೆಯೇ ಹೊರತು ಲೋಕಕಲ್ಯಾಣವಾಗಲಿ ಎಂದಲ್ಲ. ಅದೇ ಸಾತ್ವಿಕರು ಲೋಕಕಲ್ಯಾಣದ ಚಿಂತನೆಯಲ್ಲಿರುತ್ತಾರೆ.

    ಬಾಲ್ಯದಲ್ಲಿದ್ದಾಗ ಯಕ್ಷಗಾನ ಪ್ರಸಂಗಗಳನ್ನು ನೋಡುವುದು ನನಗೆ ಆಸಕ್ತಿಯ ಹವ್ಯಾಸವಾಗಿತ್ತು. ಯಕ್ಷಗಾನಗಳಲ್ಲಿ ಬರುವ ಕಥೆಗಳಲ್ಲಿ ‘ತ್ರಿಜನ್ಮ ಮೋಕ್ಷ’ ಪ್ರಸಿದ್ಧವಾದದ್ದು. ಆ ಕಥೆಯಲ್ಲಿ ದುಷ್ಟ ಅಸುರರ ಸಂಹಾರಕ್ಕಾಗಿ ಅವತಾರ ತಳೆಯುವ ಭಗವಂತನು ಸಾಮಾನ್ಯ, ಸಾತ್ವಿಕ ಭಕ್ತರನ್ನು ಯಾವ ರೀತಿಯಾಗಿ ಕಾಣುತ್ತಾನೊ ಹಾಗೆಯೇ ಅಸುರರ ಸಂಹಾರಕಾಲದಲ್ಲಿಯೂ ಭಕ್ತಿ, ಶ್ರದ್ಧೆಯನ್ನು ಮನ್ನಿಸಿ ಅವರವರ ವ್ಯಕ್ತಿತ್ವಕ್ಕೆ ಅನುಗುಣವಾಗಿ ಅವಮಾನಗೊಳಿಸದೆ ಅವರ ಹೆಸರು, ಕೀರ್ತಿಗಳನ್ನು ಶಾಶ್ವತವಾಗಿ ಇರುವಂತೆ ಮಾಡಿದುದು ವೇದ್ಯವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts