More

    ಕೆಡುಕಿನ ವಿರುದ್ಧ ಒಳಿತಿನ ವಿಜಯವೇ ನವರಾತ್ರಿ; ವಿಜಯವಾಣಿ ಕ್ಲಬ್​ನಲ್ಲಿ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್​..

    ಬೆಂಗಳೂರು: ದಸರಾ ಹಿನ್ನೆಲೆಯಲ್ಲಿ ಇಂದು ವಿಜಯವಾಣಿ ದಸರಾ ಮೆರುಗು ಎಂಬ ವಿಚಾರವಾಗಿ ಕ್ಲಬ್​ಹೌಸ್ ಸಂವಾದ ಹಮ್ಮಿಕೊಂಡಿದ್ದು, ಅದೀಗಾಗಲೇ ಆರಂಭಗೊಂಡಿದೆ. ನಿವೃತ್ತ ಪ್ರಾಧ್ಯಾಪಕ, ಪ್ರೊ. ಎನ್.ಎಸ್​. ರಂಗರಾಜು, ಕೆಎಸ್​ಒಯುನ ಪ್ರಾಚೀನ ಮತ್ತು ಪುರಾತತ್ವ ಅಧ್ಯಯನ ವಿಭಾಗ ಮುಖ್ಯಸ್ಥರಾದ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್​ ಮತ್ತು ಮೈಸೂರಿನ ಕಥೆಗಳು ಖ್ಯಾತಿಯ ಧರ್ಮೇಂದ್ರ ಕುಮಾರ್ ದಸರಾ ಸಂಪ್ರದಾಯ, ಪರಂಪರೆ, ಆಚರಣೆ ವಿಧಾನ ಕುರಿತು ಮಾತನಾಡುತ್ತಿದ್ದಾರೆ.

    ಮೊದಲಿಗೆ ಮಾತನ್ನು ಆರಂಭಿಸಿರುವ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್​, ನವರಾತ್ರಿ ಹಿನ್ನೆಲೆಯನ್ನು ವಿವರಿಸುತ್ತಿದ್ದಾರೆ. ಸಮಸ್ತ ಕಷ್ಟಗಳನ್ನು ಹೋಗಲಾಡಿಸುವ ತಾಯಿ, ಕಾಪಾಡುವ ಶಕ್ತಿ ದೇವಿ ಎಂಬುದು ದುರ್ಗಾಸೂಕ್ತದಲ್ಲಿ ಉಲ್ಲೇಖವಾಗಿದೆ. ಹರಪ್ಪ-ಮೊಹೆಂಜೊದಾರೋದಲ್ಲಿ ಮಾತೃದೇವತೆಗಳ ಪೂಜೆಗಳ ಸುಳಿವುಗಳು ಸಿಕ್ಕಿವೆ. ಮಾತ್ರವಲ್ಲ ರಾಮಾಯಣ-ಮಹಾಭಾರತದಲ್ಲೂ ದುರ್ಗಾಪೂಜೆಯ ಉಲ್ಲೇಖಗಳಿವೆ ಎಂದು ಅವರು ವಿವರಿಸಿದ್ದಾರೆ.

    ಇದನ್ನೂ ಓದಿ: ಮೂತ್ರ ವಿಸರ್ಜನೆಗೆ ಹೋಗಿ ಪ್ರಾಣ ಕಳೆದುಕೊಂಡ ಯುವಕ; ಕ್ಷಣಮಾತ್ರದಲ್ಲಿ ಸ್ಥಳದಲ್ಲೇ ಸಾವು!

    ಮಹಾಭಾರತದಲ್ಲಿ ಪಾಂಡವರು ಆಯುಧವನ್ನು ಮರಳಿ ಪಡೆದ ದಿನವೇ ಆಯುಧಪೂಜೆ ಎಂದಿರುವ ಶೆಲ್ವಪಿಳ್ಳೈ ಅಯ್ಯಂಗಾರ್​ ಅವರು, ನಮ್ಮ ಮನಸಲ್ಲಿನ ಕೆಟ್ಟ ಯೋಚನೆಯೇ ಒಂಥರಾ ರಕ್ತಬೀಜಾಸುರ. ಅಂಥ ಕೆಟ್ಟದ್ದರ ವಿರುದ್ಧ ಇರುವುದೇ ದೇವೀಶಕ್ತಿ. ಮಾತ್ರವಲ್ಲ ಮನಸನ್ನು ನಿಯಂತ್ರಣದಲ್ಲಿ ಇರಿಸುವುದು ಹಾಗೂ ಕೆಟ್ಟದ್ದರ ವಿರುದ್ಧ ಒಳಿತಿನ ವಿಜಯವೇ ನವರಾತ್ರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಈ ಸಂವಾದದಲ್ಲಿ ನೀವೂ ಭಾಗವಹಿಸಬಹುದು. ಇವರೆಲ್ಲರ ಮಾತುಗಳನ್ನು ಕೇಳಬಹುದು, ಇವರೊಂದಿಗೆ ಮಾತನ್ನೂ ಆಡಬಹುದು. ಈ ಸಂವಾದಕ್ಕೆ ಸೇರಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..

    https://www.clubhouse.com/event/M5jGZ7pq

     

    ಕೆಡುಕಿನ ವಿರುದ್ಧ ಒಳಿತಿನ ವಿಜಯವೇ ನವರಾತ್ರಿ; ವಿಜಯವಾಣಿ ಕ್ಲಬ್​ನಲ್ಲಿ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts