More

    ನೀರಿನ ಮಿತವ್ಯಯ ಸಾಧಿಸಿ-ಅಗತ್ಯಕ್ಕೆ ತಕ್ಕಂತೆ ಬಳಸಿ

    ವಿಜಯಪುರ: ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಸರ್ಕಾರ ಜಲಜೀವನ ಮಿಷನ್ ಜಾರಿಗೆ ತಂದಿದ್ದು, ಇನ್ಮುಂದೆ ಮನೆ ಮನೆಗೆ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಶಾಸಕ ಡಾ.ದೇವಾನಂದ ಚವ್ಹಾಣ್ ಹೇಳಿದರು.

    ತಾಲೂಕಿನ ಶಿವಣಗಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಜಲಜೀವನ ಮಿಷನ್ 2020-21ರಡಿ 166 ಲಕ್ಷ ರೂ. ಮೊತ್ತದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಸರ್ಕಾರದ ಯೋಜನೆಗಳು ಸದುಪಯೋಗವಾಗಬೇಕು. ಪ್ರತಿಯೊಬ್ಬರೂ ಅಗತ್ಯಕ್ಕೆ ತಕ್ಕಂತೆ ನೀರು ಬಳಸಬೇಕು. ನೀರು ಇದೊಂದು ಅಮೂಲ್ಯವಾದ ವಸ್ತುವಾಗಿದೆ. ಅದಕ್ಕಾಗಿ ಮಿತಬಳಕೆ ಅವಶ್ಯ ಎಂದರು.

    ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಯೋಜನೆಯು ದೇಶದ ಪ್ರತಿಯೊಂದು ಮನೆಗೆ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದೆ. ದೇಶದಲ್ಲಿ 2024ರ ಒಳಗಾಗಿ ಮುಗಿಸುವ ಗುರಿ ಹೊಂದಿದ್ದು, ಗುತ್ತಿಗೆದಾರರು ಆದಷ್ಟು ಬೇಗನೆ ಗುಣಮಟ್ಟದ ಕಾಮಗಾರಿ ಕೈಗೊಂಡು ಅನುಕೂಲ ಮಾಡಿಕೊಡಬೇಕು ಎಂದರು.

    ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ರಾಜುಗೌಡ ಪಾಟೀಲ, ಎಂ.ಎ. ಬಗಲಿ, ಅಪ್ಪುಗೌಡ ಬಿರಾದಾರ, ಸೋಮಪ್ಪ ದೇಸಾಯಿ, ಹನುಮಂತ ರೆಡ್ಡಿ, ಶರಣಪ್ಪ ಗೊಗದಡಿ, ಲಾಲು ರಾಠೋಡ, ಕೀರು ರಾಠೋಡ, ಸಲೀಂ ಕರ್ನಾಳ, ಜಾಕೀತ ಕರ್ನಾಳ, ನಾಶೀರ ಮನೋಳಿ, ಸಂತೋಷ ಬಿರಾದಾರ, ಸಿದ್ದು ಪಡಗಾನೂರ, ರಾಮಲಿಂಗ ರೆಡ್ಡಿ, ಮುತ್ತು ಹಿರೇಮಠ, ಶಿವಪದ್ಮ ಕೂಟನೂರ, ಚಿದಾನಂದ ಹಳ್ಳಿ, ರಿಯಾಜಪಟೇಲ ಚಟ್ಟರಕಿ, ರವಿ ಜೇವರಗಿ, ಇಲಿಯಾಸ್ ಪಟೇಲ್ ಬಗಲಿ, ಸುರೇಶ ಗಂಗನಹಳ್ಳಿಮಠ, ದಾವಲ್ ಕೋರಬು, ಮೋನಪ್ಪ ಬಡಿಗೇರ, ಕಾಂತಪ್ಪ ಪೂಜಾರಿ, ರಮೇಶ ಅಗಸರ, ಮೆಹಬೂಬ ಚಟ್ಟರಕಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts