More

    ಕೋಮು ಗಲಭೆಗೆ ಕಡಿವಾಣ ಹಾಕಿ

    ವಿಜಯಪುರ: ತ್ರಿಪುರಾದಲ್ಲಿ ಅಮಾಯಕರ ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಾಗೂ ಪ್ರವಾದಿ ಪೈಗಂಬರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಸೀಂ ರಿಜ್ವಿ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಮುಸ್ಲಿಂ ಮುತ್‌ಹಿದ ಕೌನ್ಸಿಲ್ ವತಿಯಿಂದ ಬುಧವಾರ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

    ಎಂಎಂಸಿ ಅಧ್ಯಕ್ಷ ಮೌಲಾನಾ ತನ್ವೀರಪೀರಾ ಹಾಸ್ಮೀ ಮಾತನಾಡಿ, ದಿನದಿಂದ ದಿನಕ್ಕೆ ದೀನ ದಲಿತರ ಮೇಲೆ ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗುತ್ತಿರುವುದು ಖಂಡನೀಯ. ರಾಷ್ಟ್ರಪತಿಗಳು ಇಂಥವರ ಮೇಲೆ ಸೂಕ್ತ ಕ್ರಮ ಜರುಗಿಸಿ ಕೋಮು ಗಲಭೆಗೆ ಕಡಿವಾಣ ಹಾಕಬೇಕೆಂದರು.

    ವಸ್ಸೀಂ ರಿಜ್ವಿ ಪದೇ ಪದೆ ಪ್ರವಾದಿ ಪೈಗಂಬರ್ ಬಗ್ಗೆ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಇವರ ಮೇಲೆ ಕ್ರಮವಾಗಬೇಕೆಂದರು.

    ಮೌಲಾನಾ ಮೆಹೆಬೂಬ್‌ರೆಹೆಮಾನ ಮದನಿ, ಮುಪ್ತಿ ಶಫೀವುಲ್ಲಾ, ಮೌಲಾನಾ ಮಹ್ಮದ್ ಯೂಸೂಫ್ ಖಾಜಿ, ನ್ಯಾಯವಾದಿ ಬಿ.ಎ. ಲಾಹೋರಿ, ಎ.ಎ. ನದಾಫ್, ಅಬ್ದುಲ್ ಹಮೀದ್ ಮುಶ್ರೀಫ್, ಮೊಹ್ಮದ್ ರಫೀಕ ಟಪಾಲ್, ಎಂ.ಸಿ. ಮುಲ್ಲಾ, ಫಯಾಜ ಕಲಾದಗಿ, ಶಕೀಲ ಸುತಾರ, ಎಸ್.ಎಸ್. ಖಾದ್ರಿ ಇನಾಮದಾರ, ಅಕ್ರಮ್ ಮಾಶಾಳಕರ, ಇರ್ಪಾನ್ ಶೇಖ, ಬಸವರಾಜ ಬಿ.ಕೆ, ಅಬ್ಬುಬಕರ್ ಭೇಪಾರಿ, ತಾಜುದ್ದೀನ ಖಲೀಪಾ, ಸಮದಾನಿ ಇನಾಮದಾರ, ಅಭೀದ ಸಂಗಂ, ಇಸಾಕ್ ಗುಲಬರ್ಗಾ, ಬಂದೇನವಾಜ್ ಹಾಶ್ಮೀ, ಪಾರುಕ ಸುತಾರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts