More

    ಯುಗಾದಿ ಸಂಭ್ರಮ ಕಸಿದ ಮುಷ್ಕರ

    ವಿಜಯಪುರ : 6ನೇ ವೇತನ ಆಯೋಗ ಜಾರಿಗೊಳಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರ ಭಾನುವಾರವೂ ಮುಂದುವರಿದಿದ್ದು, ಆರನೇ ದಿನಕ್ಕೆ ಕಾಲಿಟ್ಟಿದೆ.

    ಯುಗಾದಿ ಸಂಭ್ರಮದಲ್ಲಿದ್ದ ಜನರಿಗೆ ಈ ಬಾರಿ ತಮ್ಮ ಊರುಗಳಿಗೆ ತೆರಳಲು ಕಷ್ಟವಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ಬಂದಿದೆ.

    ಮನೆಗೆ ತೆರಳಿ ಮನವೊಲಿಕೆ
    ಮುಷ್ಕರದಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೆಎಸ್‌ಆರ್‌ಟಿಸಿ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಕುರುಬರ ಅವರು ಖುದ್ದಾಗಿ ಸಾರಿಗೆ ನೌಕರರ ಮನೆಗೆ ಭೇಟಿ ನೀಡಿ ಮನವೊಲಿಸುವ ಕೆಲಸ ಮಾಡಿದರು. ವಿಜಯಪುರ ಅಲ್ಲದೆ ತಾಳಿಕೋಟೆ ಇನ್ನಿತರ ಭಾಗದಲ್ಲಿರುವ ಚಾಲಕ ಹಾಗೂ ನಿರ್ವಾಹಕರನ್ನು ಕರ್ತವ್ಯಕ್ಕೆ ಮರಳಿ ಬರುವಂತೆ ಸೂಚನೆ ನೀಡಿದರು.

    ತಾಳಿಕೋಟೆಯಲ್ಲಿರುವ ಚಾಲಕ ಶಂಕರ ಹಜೇರಿ ಅವರ ಮನೆಗೆ ಭೇಟಿ ನೀಡಿದ ವೇಳೆ ಶಂಕರ್ ಅವರು ಮನೆಯಲ್ಲಿರಲಿಲ್ಲ. ಆಗ ಆತನ ಮಗ ಆಕಾಶ ಹಜೇರಿ ತನ್ನ ತಂದೆಗೆ ಮೊಬೈಲ್ ಕರೆ ಮಾಡಿ, ‘ಮನೆಗೆ ಡಿಸಿ ಅವರು ಬಂದಿದ್ದಾರೆ. ಕೆಲಸಕ್ಕೆ ಹೋಗಬೇಕಂತೆ’ ಎಂದು ಹೇಳಿದ್ದು ವಿಶೇಷವಾಗಿತ್ತು.

    ಪ್ರಯಾಣಿಕರ ಪರದಾಟ
    ಮುಷ್ಕರದ ಹಿನ್ನೆಲೆ ಇತರ ಜಿಲ್ಲೆಗಳಿಗೆ ಪ್ರಯಾಣಿಸುವ ಜನರಿಗೆ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಪರದಾಡುವ ಪರಿಸ್ಥಿತಿ ಉಲ್ಬಣಗೊಂಡಿತ್ತು. ಒಂದೆಡೆ ಯುಗಾದಿ ಹಬ್ಬದ ಸಂಭ್ರಮದಲ್ಲಿರುವ ಜನರು, ಊರುಗಳಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲದೆ ನಿರಾಸೆ ಅನುಭವಿಸುವಂತಾಗಿದೆ. ಬೆಂಗಳೂರು ಇನ್ನಿತರ ಕಡೆಗಳಲ್ಲಿ ತೆರಳುವ ಪ್ರಯಾಣಿಕರಿಗೆ ಸಾರಿಗೆ ಬಸ್‌ಗಳಿಲ್ಲದೆ ಖಾಸಗಿ ಬಸ್‌ಗಳಿಗೆ ದುಪ್ಪಟ್ಟು ಹಣ ನೀಡಿ ತೆರಳುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts