More

    ಹಣದಿಂದ ವಿದ್ಯೆ ಅಳೆಯಲು ಸಾಧ್ಯವಿಲ್ಲ

    ವಿಜಯಪುರ: ವಿದ್ಯೆಯನ್ನು ಹಣದಲ್ಲಿ ಅಳೆಯಲು ಸಾಧ್ಯವಿಲ್ಲ, ಹಾಗಾಗಿ ಕೌನ್ ಬನೇಗಾ ವಿದ್ಯಾಪತಿ ಮತ್ತು ಕೌನ್ ಬನೇಗಾ ಅಲ್ಲಾಮಾ ನಾಮಾಂಕಿತದೊಂದಿಗೆ ಜಿಲ್ಲೆಯಲ್ಲಿ ಶಿಕ್ಷಣದ ಮಟ್ಟವನ್ನು ಉತ್ತೇಜಿಸಲು ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
    ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರದಲ್ಲಿ 2019-20ನೇ ಸಾಲಿನ ಉರ್ದು ಮಾಧ್ಯಮದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕೌನ್ ಬನೇಗಾ ಅಲ್ಲಾಮಾ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ವಿದ್ಯಾರ್ಥಿಗಳಲ್ಲಿ ಕಲಿಕೆ ಬಗ್ಗೆ ಆಸಕ್ತಿ ಹುಟ್ಟಿಸುವುದರ ಜತೆಗೆ ಅವರಲ್ಲಿ ವಿಷಯದ ಪಾಂಡಿತ್ಯವನ್ನು ಬೆಳೆಸುವುದು ಕೌನ್ ಬನೇಗಾ ಅಲ್ಲಾಮಾ ಕಾರ್ಯಕ್ರಮದ ಉದ್ದೇಶವಾಗಿದೆ. ಎಪಿಜೆ ಅಬ್ದುಲ್ ಕಲಾಂ ಬಡತನದಲ್ಲಿ ಹುಟ್ಟಿದ ಅವರು ಶಿಕ್ಷಕರ ಸಹಾಯದಿಂದ ಉನ್ನತ ಮಟ್ಟಕೆ ಬೆಳೆದರು. ಅವರಲ್ಲಿರುವ ಬಡತನದ ಜ್ವಾಲೆ ಅವರನ್ನು ಸಾಧಿಸುವ ಛಲಗಾರನನ್ನಾಗಿ ಮಾಡಿತು. ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
    ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಪ್ರಸನ್ನಕುಮಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಹೆಚ್ಚು ಮಕ್ಕಳು ಅಲ್ಪಸಂಖ್ಯಾತರಾಗಿದ್ದಾರೆ. ಅಂತಹ ಮಕ್ಕಳನ್ನು ಪುನಃ ಶಾಲೆಯತ್ತ ಆಕರ್ಷಿಸಲು ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
    ವಿದ್ಯಾರ್ಥಿಗಳು ನಿರ್ಧಿಷ್ಟ ಗುರಿಯನ್ನು ಇಟ್ಟುಕೊಂಡು ನಿರಂತರ ಓದುವುದನ್ನು ರೂಢಿಸಿಕೊಂಡು ಉತ್ತಮ ಯಶಸ್ಸನ್ನು ತಮ್ಮದಾಗಿಸಿಕೊಳ್ಳಬೇಕು. ಶಾಲೆಗೆ ಬರುವ ಮಕ್ಕಳಲ್ಲಿ ಗಂಡು ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದ್ದು, ಅಂತಹ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದರು.
    ಕೌನ್ ಬನೇಗಾ ಅಲ್ಲಾಮಾ ಕಾರ್ಯಕ್ರಮದ ಹಾಟ್‌ಸೀಟ್‌ನಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಸನ್ನಕುಮಾರ ಜಂಟಿಯಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.
    ಸಾರ್ವಜನಿಕ ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ಆರ್ೀ ಎಚ್ ಬಿರಾದಾರ, ಹಿರಿಯ ಪತ್ರಕರ್ತ ರಫಿ ಭಂಡಾರಿ, ಅಂತಾರಾಷ್ಟ್ರೀಯ ಕವಿ ಸುಲೇಮಾನ ಕುಮಾರ, ಕೌನ್ ಬನೇಗಾ ವಿದ್ಯಾಪತಿ ಮತ್ತು ಕೌನ್ ಬನೇಗಾ ಅಲ್ಲಾಮಾ ಸಂಯೋಜಕರಾದ ಮಂಜುನಾಥ ಗುಳೇದಗುಡ್ಡ, ಡಿ.ಜೆ ಚಾಳೀಕರ್, ಎಸ್.ಎ.ಅಳಗಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
    ಕೌನ್ ಬನೇಗಾ ಅಲ್ಲಾಮಾ ಕಾರ್ಯಕ್ರಮದದಲ್ಲಿ ಇಂಡಿಯ ಸೆಮ್ಸ್ ಶಾಲೆ ವಿದ್ಯಾರ್ಥಿನಿ ಮುಸ್ಕಾನ್ ಕಲೀಲ್ ಅಹಮ್ಮದ ಅತ್ತಾರ ಮತ್ತು ೌಜಿಯಾ ಅತ್ತಾರ ಪ್ರಥಮ, ಆಲಮೇಲ ತಾಲೂಕಿನ ಇಕ್ರಾ ಉರ್ದು ಶಾಲೆಯ ವಿದ್ಯಾರ್ಥಿನಿ ಸಮೀರಾ ಸೌದಾಗರ್ ಮತ್ತು ಶಗುಪ್ತಾ ಮರ್ತೂರ ದ್ವಿತೀಯ, ನಿಡಗುಂದಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಆಯಿಶಾ ನಿಡಗುಂದಿ ಮತ್ತು ತಬಸುಮ್ ಎಂ.ಬೆಣಿ ತೃತೀಯ ಸ್ಥಾನ ಪಡೆದುಕೊಂಡರು. ವಿಜಯಪುರ ನಗರ ಮತ್ತು ಗ್ರಾಮೀಣ ವಲಯದ ಪ್ರೌಢ ಶಾಲೆ, ಸಿಂದಗಿ, ಇಂಡಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ಚಡಚಣ ಎಲ್ಲಾ ತಾಲೂಕಿನಿಂದ ಇಬ್ಬರು ವಿದ್ಯಾರ್ಥಿಗಳಂತೆ ಒಟ್ಟು 14 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಬಹುಮಾನ 11 ಸಾವಿರ ರೂ., ದ್ವಿತೀಯ ಬಹುಮಾನ 7 ಸಾವಿರ ರೂ. ಮತ್ತು ತೃತೀಯ ಬಹುಮಾನ 5 ಸಾವಿರ ರೂ. ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts