More

    ಶರಣರ ನಾಡಿನ ಮೃತಿಕೆ, ಜಲ ಅಯೋಧ್ಯೆಗೆ

    ವಿಜಯಪುರ: ರಾಮ ಜನ್ಮ ಭೂಮಿಯ ಶಿಲಾನ್ಯಾಸ ಕಾರ್ಯಕ್ರಮ ಹಿನ್ನೆಲೆ ವಿಜಯಪುರದ ಸಿದ್ಧೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ವಿಶ್ವ ಹಿಂದು ಪರಿಷತ್, ಬಜರಂಗ ದಳ ವತಿಯಿಂದ ಇಲ್ಲಿನ ಕೃಷ್ಣಾ ಹಾಗೂ ಭೀಮಾ ನದಿಯ ಜಲವನ್ನು ಹಾಗೂ ಬಸವನ ಬಾಗೇವಾಡಿಯ ಮೃತಿಕೆ(ಮಣ್ಣು)ಯನ್ನು ಸಂಗ್ರಹಿಸಿ ಗುರುವಾರ ವಿಶೇಷ ಪೂಜೆ ನೆರವೇರಿಸಲಾಯಿತು.
    ದೇಶದ ವಿವಿಧ ಭಾಗಗಳಿಂದ ಪುಣ್ಯಕ್ಷೇತ್ರದ ಮೃತಿಕೆ (ಮಣ್ಣು) ಮತ್ತು ಪುಣ್ಯ ನದಿಗಳ ನೀರನ್ನು ಸಂಗ್ರಹಿಸಿ, ದೇಶಾದ್ಯಂತ ಎಲ್ಲ ಜಿಲ್ಲೆಗಳಿಂದ ಕಳುಹಿಸುತ್ತಿರುವ ಹಿನ್ನೆಲೆ, ಇಲ್ಲಿನ ಬಸವನಬಾಗೇವಾಡಿ ಬಸವೇಶ್ವರ ದೇವಸ್ಥಾನ ಸ್ಥಳದ ಮಣ್ಣು, ನಗರದ ಜ್ಞಾನಯೋಗಾಶ್ರಮದ ಮಣ್ಣು, ತಂಗಡಗಿಯ ನಿಲಾಂಬಿಕೆ ಗುಡಿಯ ಮಣ್ಣು, ಬಸರಕೋಡದ ಪವಾಡ ಮುತ್ಯಾನ ಗುಡಿಯ ಮಣ್ಣು, ನಾಲತವಾಡದ ಶರಣ ವೀರೇಶ್ವರ ಗುಡಿಯ ಮಣ್ಣು, ಸಿಂದಗಿ ತಾಲೂಕಿನ ಭೀಮಾ ನದಿಯ ಜಲ, ಕುಮಸಗಿ ಗ್ರಾಮದ ನರಸಿಂಹ ದತ್ತ ಪಾದುಕೆ ಸ್ಥಳದ ಮಣ್ಣು ಸಂಗ್ರಹಿಸಿ ಅಯೋಧ್ಯೆಯ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕಳುಹಿಸಲಾಯಿತು.

    ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಬಸಯ್ಯ ಹಿರೇಮಠ, ಆರೋಗ್ಯ ಭಾರತಿ ಪ್ರಾಂತ ಪ್ರಮುಖ ಮಹೇಶ ಚವಾಣ್, ಉತ್ತರ ಪ್ರಾಂತ ಪ್ರಮುಖ ಸುನೀಲ ಭೈರವಾಡಗಿ, ಜಿಲ್ಲಾ ಉಪಾಧ್ಯಕ್ಷ ಮುತ್ತು ಶಾಬಾದಿ, ಶೇಖರ ಹರನಾಳ, ಈರಣ್ಣ ಹಳ್ಳಿ, ಪ್ರವೀಣ ಹೌದೆ, ಶಿವಕುಮಾರ ಕೋಟಿಮಠ, ಸಂತೋಷ ಹಿರೇಮಠ, ಗಣೇಶ ಜೇವೂರ ಮತ್ತಿತರರು ಇದ್ದರು.

    ಶರಣರ ನಾಡಿನ ಮೃತಿಕೆ, ಜಲ ಅಯೋಧ್ಯೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts