More

    ಸೌಹಾರ್ದ ಮಹಾಸಂಕಲ್ಪ ದಿನಾಚರಣೆ

    ವಿಜಯಪುರ: ನಗರದ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ನೇತೃತ್ವದಲ್ಲಿ ಮಹಾತ್ಮ ಗಾಂಧೀಜಿಯವರ 72ನೇ ಹುತಾತ್ಮ ದಿನಾಚರಣೆ ನಿಮಿತ್ತ ಸೌಹಾರ್ದ ಮಹಾಸಂಕಲ್ಪ ದಿನ ಆಚರಿಸಲಾಯಿತು.
    ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಅಹಿಂಸೆಯ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾತ್ಮ ಗಾಂಧೀಜಿಯವರ ತತ್ವಗಳು ಇಂದಿಗೂ ಪ್ರಸ್ತುತ. ರಾಷ್ಟ್ರಕ್ಕೆ ಬ್ರಿಟಿಷರಿಂದ ಸ್ವಾತಂತ್ರೃವನ್ನು ಕೊಡಿಸಿದ ರಾಷ್ಟ್ರಪಿತ. ಜಗತ್ತಿನ ಇತಿಹಾಸದಲ್ಲಿ ಮಹಾತ್ಮ ಗಾಂಧೀಜಿಯವರ ಪಾತ್ರ ಪ್ರಮುಖವಾಗಿದೆ. ಸತ್ಯಾಗ್ರಹದ ಮೂಲಕ ಭಾರತದ ಸ್ವಾತಂತ್ರೃಕ್ಕೆ ಮೌಲ್ಯ ನೀಡಿದವರು. ಸಾಮಾಜಿಕ ಅಸಮಾನತೆ, ಶೋಷಣೆ ಹಾಗೂ ಜಾತಿ ವ್ಯವಸ್ಥೆಯ ವಿರುದ್ಧ ಕೊನೆಯ ಉಸಿರು ಇರುವವರೆಗೂ ಹೋರಾಡಿದವರು. ರಾಜಕೀಯ, ತತ್ವಜ್ಞಾನ, ಆರ್ಥಿಕ, ಸಾಮಾಜಿಕ ಮತ್ತು ಕೈಗಾರಿಕಾ ಕ್ಷೇತ್ರಗಳಿಗೆ ಅವರ ಕೊಡುಗೆ ಅಪಾರ ಎಂದರು.
    ಮುಖಂಡ ಗುರುಸಿಂಗ ತೊನಶ್ಯಾಳ ಮಾತನಾಡಿ, ಗಾಂಧಿ ಮಾರ್ಗದಿಂದ ದೇಶದ ರಾಜಕಾರಣ ನಡೆಯಬೇಕು. ದುರ್ದೈವ ಅವರ ಕನಸುಗಳು ಸಾಕಾರಗೊಳ್ಳಲಿಲ್ಲ. ಮಹಾತ್ಮ ಗಾಂಧಿ ಭಾರತವನ್ನು ವಿಶ್ವಕ್ಕೆ ಪರಿಚಯಿಸಿದವರು. ಅಹಿಂಸಾ ಮಾರ್ಗದಿಂದ ಭಾರತಕ್ಕೆ ಸ್ವಾತಂತ್ರೃ ನೀಡಿ ನುಡಿದಂತೆ ನಡೆದರು. ಗಾಂಧೀಜಿಯವರ ಆದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕೆಂದರು.
    ಮುಖಂಡರಾದ ಬಂದೇನವಾಜ ಬೀಳಗಿ, ಗಿರೀಶ ಕುಲಕರ್ಣಿ, ಬಸವರಾಜ ಆಲಗೂರ, ರಾಜು ಅಂಗಡಿ, ಮಲ್ಲಿಕಾರ್ಜುನ ಮಾಹಿ, ಉದಯ ಮಠ, ಮಲ್ಲಣ್ಣ ಕೊಣ್ಣೂರ, ಬಾಬುರಾವ ಬೀದರ, ಶಿವಬಸಯ್ಯ ಹಿರೇಮಠ, ಶಿವಪ್ಪ ಬಣ್ಣಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts