More

    ಸರಳ ಅಕ್ಷತಾರ್ಪಣೆ-ಬೋಗಿ ಕಾರ್ಯಕ್ರಮ

    ವಿಜಯಪುರ: ಇಲ್ಲಿನ ಶ್ರೀ ಸಿದ್ಧೇಶ್ವರ ದೇವಸ್ಥಾನ ಮುಂದೆ ಜಾತ್ರಾ ಮಹೋತ್ಸವ ಅಂಗವಾಗಿ ಸಿದ್ಧರಾಮನ ಯೋಗ ದಂಡದೊಂದಿಗೆ ಬುಧವಾರ ಮಧ್ಯಾಹ್ನ 12.30ಕ್ಕೆ ಕುಂಬಾರ ಗುಂಡಮ್ಮಳ ಅಕ್ಷತಾರ್ಪಣೆ ಬೋಗಿ ಕಾರ್ಯಕ್ರಮ ಮತ್ತು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಚರಿತ್ರೆ ಓದುವ ಕಾರ್ಯಕ್ರಮ ಸರಳವಾಗಿ ನಡೆಯಿತು.

    ಮಾಂಗಲ್ಯಧಾರಣೆ ಅಕ್ಷತಾರೋಪಣ ಕಾರ್ಯಕ್ರಮವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪತ್ನಿಯೊಂದಿಗೆ ನೆರವೇರಿಸಿದರು. ಭಕ್ತರು ಮದುವೆಗೆ ಬಂದಂತೆ ಹೊಸ ಉಡುಗೆ ಉಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಕ್ಷತೆಯ ಕಾರ್ಯಕ್ರಮದ ವಿಧಿ ವಿಧಾನದ ಕಾರ್ಯಕ್ರಮವನ್ನು ವೇದಮೂರ್ತಿ ಮುರಗಯ್ಯ, ಸಂಗನಬಸಯ್ಯ ಗಚ್ಚಿನಮಠ, ಸಂಗಯ್ಯ ಹಿರೇಮಠ, ಮಲ್ಲಯ್ಯ ಪೂಜಾರಿ ಅವರು ಪೂಜೆ ನೆರವೇರಿಸಿದರು.

    ಸಂಸ್ಥೆ ಚೇರ್ಮನ್ ಬಸಯ್ಯ ಹಿರೇಮಠ, ಕಾರ್ಯದರ್ಶಿ ಸದಾನಂದ ದೇಸಾಯಿ, ಬಿ.ಎಸ್. ಸುಗೂರ, ಎಸ್.ಸಿ. ಉಪ್ಪಿನ, ಸದಾಶಿವ ಗುಡ್ಡೋಡಗಿ, ಎಸ್.ಎಚ್.ನಾಡಗೌಡ, ಎಂ.ಎಂ.ಸಜ್ಜನ, ಎಂ.ಎನ್.ಗೋಲಾಯಿ, ನಾಗಪ್ಪ ಗುಗ್ಗರಿ, ಬಸವರಾಜ ಗಣಿ, ಶಿವಾನಂದ ನೀಲಾ, ಶ್ರೀಮಂತ ಜಂಬಗಿ, ಎಂ.ಎಸ್. ಕರಡಿ, ಗುರು ಗಚ್ಚಿನಮಠ, ಮಹಾದೇವ ಹತ್ತಿಕಾಳ, ಬಾಗಪ್ಪ ಕನ್ನೊಳ್ಳಿ, ಈರಣ್ಣ ಪಾಟೀಲ, ಬಸವರಾಜ ಗೊಳಸಂಗಿ, ಲಕ್ಷ್ಮಣ ಜಾಧವ, ಮಹಾಂತೇಶ ಹಂಡಗಿ, ವಿಶ್ವನಾಥ ಭೋರಗಿ, ಎಸ್.ವಿ.ಹಕ್ಕಾಪಕ್ಕಿ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಚಂದು ಹುಂಡೆಕಾರ, ವಿಶ್ವನಾಥ ನೀಲಾ, ವಿಜಯಕುಮಾರ ಡೋಣಿ, ಅನೀಲ ಸಬರದ, ಸಾಯಿಬಣ್ಣ ಎಸ್.ಭೋವಿ ಮುಂತಾದ ಪ್ರಮುಖರು ಹಾಗೂ ಭಕ್ತಾದಿಗಳು ಹಾಜರಿದ್ದರು. ಜ.14ರಂದು ಮಧ್ಯಾಹ್ನ 12.30ಕ್ಕೆ ನಂದಿಧ್ವಜಗಳಿಗೆ ಪೂಜೆ ಹಾಗೂ ಹೋಮ-ಹವನ ಕಾರ್ಯಕ್ರಮ ಜರುಗಲಿದೆ ಎಂದು ಜಾತ್ರಾ ಸಮಿತಿ ಗೌರವಾಧ್ಯಕ್ಷ ರಾಘವ ಅಣ್ಣಿಗೇರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts