More

    ದೇಸಿತಳಿ ಗೋವುಗಳ ರಕ್ಷಣೆ ಆಗಲಿ

    ವಿಜಯಪುರ: ನಗರದ ಶಿಖಾರಖಾನೆಯಲ್ಲಿರುವ ಪಶು ವೈದ್ಯಕೀಯ ಪಾಲನೆ ಇಲಾಖೆ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಪಾಲಿಕ್ಲಿನಿಕ್ ಕಟ್ಟಡ ಹಾಗೂ ಪಶು ವೈದ್ಯಕೀಯ ಪ್ರಯೋಗಾಲಯದ ಕಾಮಗಾರಿಗೆ ಬುಧವಾರ ಶಾಸಕ ಬಸನಗೌಡ ಪಾಟೀಲ ಭೂಮಿ ಪೂಜೆ ನೆರವೇರಿಸಿದರು.
    ಈ ವೇಳೆ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ಹೊರತುಪಡಿಸಿದರೆ ಉತ್ತರ ಕರ್ನಾಟಕದಲ್ಲೇ ಮೊದಲ ಬಾರಿಗೆ ವಿಜಯಪುರ ನಗರದಲ್ಲಿ ಪಶು ವೈದ್ಯಕೀಯ ಪಾಲಿಕ್ಲಿನಿಕ್, ಪಶು ವೈದ್ಯಕೀಯ ಪ್ರಯೋಗಾಲಯ ನಿರ್ಮಾಣಗೊಳ್ಳುತ್ತಿದೆ. ಸುಮಾರು 2.11 ಕೋಟಿ ರೂ. ವೆಚ್ಚದಲ್ಲಿ ಪಾಲಿಕ್ಲಿನಿಕ್ ಕಟ್ಟಡ ಹಾಗೂ 58 ಲಕ್ಷ ರೂ. ವೆಚ್ಚದಲ್ಲಿ ಪ್ರಯೋಗಾಲಯ ನಿರ್ಮಾಣ ಮಾಡಲಾಗುತ್ತಿದೆ. ಈ ಭಾಗದ ರೈತರ ಪಶುಗಳ ಆರೋಗ್ಯ ದೃಷ್ಟಿಯಿಂದ ಸಾಕಷ್ಟು ಅನಕೂಲವಾಗಲಿದೆ ಎಂದರು.
    ದೇಸಿತಳಿ ಆಕಳುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಹಿಂದೆ ನಮ್ಮ ದೇಶದಲ್ಲಿ 70ಕ್ಕಿಂತಲೂ ಹೆಚ್ಚು ದೇಸಿತಳಿಗಳಿದ್ದವು. ಆದರೆ ಇಂದು 30 ರಿಂದ 32 ತಳಿಗಳಷ್ಟೆ ಉಳಿದುಕೊಂಡಿವೆ. ಪಂಜಾಬ್‌ನ ಸಾಯಿವಾಲಾ, ಗುಜರಾತ್‌ನ ಗೀರ್, ರಾಜಸ್ತಾನದ ಕಾಂಕ್ರೇಜ್, ಆಂಧ್ರದ ಒಂಗಲ್, ಕಿಲಾರಿ, ಹಳ್ಳಿಕಾರ, ಕೃಷ್ಣ, ದೇವಣಿ ಇವೆಲ್ಲ ತಳಿಗಳ ರಕ್ಷಣೆ ನಾವು ಮಾಡಬೇಕಾಗಿದೆ. ವಿಜಯಪುರ ಸಾಕಷ್ಟು ಪಶು ಸಂಪತ್ತನ್ನು ಹೊಂದಿದ ಜಿಲ್ಲೆಯಾಗಿದ್ದು, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸರ್ಕಾರದಿಂದ ಬರುವ ಯೋಜನೆಗಳನ್ನು ರೈತರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

    ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯರಾದ ವಿಕ್ರಮ್ ಗಾಯಕವಾಡ, ಮನೋಹರ ಕಾಂಬ್ಳೆ, ಶರಣು ಕಾಖಂಡಕಿ, ಬಾಬು ಶಿರಶಾಡ, ಪಶುಪಾಲನಾ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ.ಪ್ರಾಣೇಶ ಜಾಗೀರದಾರ, ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಅಭಿಯಂತರ ಮೆಣಸಗಿ, ಪಾಲಿಕ್ಲಿನಿಕ್ ಉಪನಿರ್ದೆಶಕ ಡಾ.ಎಸ್.ಸಿ.ಚೌಧರಿ, ಮುಖ್ಯಪಶು ವೈದ್ಯಾಧಿಕಾರಿ ಡಾ.ಎಂ.ಸಿ ಅರಕೇರಿ, ಡಾ.ನಾಲಾ ಸೇರಿದಂತೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

    ದೇಸಿತಳಿ ಗೋವುಗಳ ರಕ್ಷಣೆ ಆಗಲಿ
    ದೇಸಿತಳಿ ಗೋವುಗಳ ರಕ್ಷಣೆ ಆಗಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts