More

    ಸ್ಕಾೃನಿಂಗ್ ಸೆಂಟರ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಕಡ್ಡಾಯ

    ವಿಜಯಪುರ: ಭ್ರೂಣಲಿಂಗ ಪತ್ತೆ ತಡೆಯಲು ಸ್ಕಾೃನಿಂಗ್ ಸೆಂಟರ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ವೈದ್ಯರಿಗೆ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಬುಧವಾರ ನಡೆದ ಅಧಿಕಾರಿಗಳ ಹಾಗೂ ವೈದ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಪ್ರತಿಯೊಂದು ಸ್ಕಾೃನಿಂಗ್ ಸೆಂಟರ್‌ಗಳನ್ನು ಪರಿಶೀಲಿಸಿ, ಹೆಣ್ಣು ಭ್ರೂಣ ಹತ್ಯೆ ತಡೆಯಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

    ಅನಧಿಕೃತ ಸ್ಕಾೃನಿಂಗ್ ಸೆಂಟರ್‌ಗಳ ಮೇಲೆ ದಾಳಿ ನಡೆಸಲು ಇಂಡಿ ತಾಲೂಕು ಮಟ್ಟದ ತಂಡ, ವಿಜಯಪುರ ತಾಲೂಕು ಮಟ್ಟದ ತಂಡ ಮತ್ತು ಜಿಲ್ಲಾಮಟ್ಟದ ತಂಡಗಳನ್ನು ರಚಿಸುವಂತೆ ಆದೇಶಿಸಿದರು.

    ಸ್ಕಾೃನಿಂಗ್ ಸೆಂಟರ್ ಸ್ಥಾಪನೆಗೆ ಹೊಸದಾಗಿ ಮತ್ತು ನವೀಕರಣಕ್ಕಾಗಿ ಬಂದ ಅರ್ಜಿಗಳನ್ನು ಕುಟುಂಬ ಕಲ್ಯಾಣ ಅಧಿಕಾರಿಗಳು, ಪರಿಶೀಲನೆ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯರ ಒಳಗೊಂಡ ಸದಸ್ಯರ ತಂಡ ಪರಿಶೀಲನೆ ಮಾಡಬೇಕು ಎಂದರು.

    ಕಾನೂನು ಸಲಹೆಗಾರ ತುಳಸಿರಾಮ್ ಸೂರ್ಯವಂಶಿ, ಸಾಮಾಜಿಕ ಕಾರ್ಯಕರ್ತ ಪೀಟರ್ ಅಲೆಕ್ಸಾಂಡರ್, ಡಿಎಚ್‌ಒ ಡಾ.ರಾಜಕುಮಾರ್ ಯರಗಲ್, ಡಾ.ಪರಶುರಾಮ ದೇವಮಾನೆ, ಡಾ.ವಿದ್ಯಾ ಥೋಬ್ಬಿ , ಡಾ.ಎಂ.ಎಂ.ಪಾಟೀಲ, ಉಜ್ವಲ ಗ್ರಾಮೀಣ ಸಂಸ್ಥೆ ಅಧ್ಯಕ್ಷೆ ಸುನಂದಾ ತೋಳಬಂದಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts