More

    ಸತತ ಪ್ರಯತ್ನವೇ ಸಾಧನೆಯ ಸೂತ್ರ

    ವಿಜಯಪುರ: ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಸತತ ಪ್ರಯತ್ನವೇ ಸಾಧನೆಯ ಸೂತ್ರಗಳು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
    ನಗರದ ಜಿಪಂ ಸಮೀಪ ಸರ್ವ ಶಿಕ್ಷಣ ಅಭಿಯಾನ ಮತ್ತು ಅಗಸ್ತ್ಯಾ ಅಂತಾರಾಷ್ಟ್ರೀಯ ಫೌಂಡೇಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನ ಚಟುವಟಿಕೆ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ವಿದ್ಯಾರ್ಥಿಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಪ್ರತಿಯೊಬ್ಬ ವ್ಯಕ್ತಿ ಒಂದು ಸಂಸ್ಥೆ ಇದ್ದಂತೆ. ನೀವು ಕೂಡ ಸಂಸ್ಥೆಯಂತೆ ಬೆಳೆಯಬೇಕು. ಪ್ರತಿಯೊಬ್ಬ ವ್ಯಕ್ತಿ ತಮ್ಮದೆ ಆದ ಗುರಿಗಳನ್ನು ಹೊಂದಬೇಕು. ಆ ಗುರಿ ಬೆನ್ನತ್ತಿ ಪ್ರಾಮಾಣಿಕ ಪ್ರಯತ್ನದಿಂದ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಬೇಕು ಎಂದರು.
    ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ನವ ಮಾಧ್ಯಮಗಳ ಮತ್ತು ತಂತ್ರಜ್ಞಾನಗಳ ಸದುಪಯೋಗ ಆಗಬೇಕು. ಮೊಬೈಲ್ ಗೀಳಿಗೆ ಬಿದ್ದು ಅತ್ಯಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳಬಾರದು. ಸರಿಯಾದ ಮಾರ್ಗದಲ್ಲಿ ಸಾಗಿ ಸಾಧನೆ ಮಾಡಬೇಕು. ಆತ್ಮವಿಶ್ವಾಸ ತಮ್ಮ ಗುಣಗಳ ಆತ್ಮಾವಲೋಕನದೊಂದಿಗೆ ಗುರಿ ನಿಗದಿಪಡಿಸಿ ಸಕಾರಾತ್ಮಕ ಭಾವನೆಯೊಂದಿಗೆ ಮುಂದುವರೆಯಬೇಕು ಎಂದರು.
    ವಿದ್ಯಾರ್ಥಿಗಳಾದ ಪ್ರೀತಿ, ನಝಾ, ಆದಿತ್ಯ, ಸಮೀರ್ ಮುಂತಾದವರು ಪ್ರಶ್ನೆಗಳ ಮೂಲಕ ತಮ್ಮ ಜ್ಞಾನದಾಹ ತಣಿಸಿಕೊಂಡರು. ಜಿಲ್ಲಾ ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಅಶೋಕ ಲಿಮ್ಕರ ಹಾಗೂ ಇತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವೈಷ್ಣವಿ ಬಸವರಾಜ ಪಾಟೀಲ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts