More

    ಸ್ಯಾನಿಟೈಸರ್ ಸ್ಪ್ರೇ ಬೂತ್‌ಗಳ ಸ್ಥಾಪನೆ

    ವಿಜಯಪುರ: ಕರೊನಾ ನಿಯಂತ್ರಣಕ್ಕಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿರುವ ಜಿಲ್ಲಾಡಳಿತ ಇದೀಗ ಸಾರ್ವಜನಿಕರ ಬಳಕೆಗಾಗಿ ಸ್ಯಾನಿಟೈಸರ್ ಸ್ಪ್ರೇ ಬೂತ್‌ಗಳನ್ನು ಸ್ಥಾಪಿಸಿ ಮೆಚ್ಚುಗೆ ಪಡೆದಿದೆ.
    ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಆವರಣ ಹಾಗೂ ಕಿರಾಣಾ ಬಜಾರದಲ್ಲಿ ಇಂಥದ್ದೊಂದು ಬೂತ್ ಸ್ಥಾಪಿಸಲಾಗಿದೆ. ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಸರ್ಕಾರೇತರ ಸಂಘ, ಸಂಸ್ಥೆಗಳ ನೆರವಿನೊಂದಿಗೆ ಜನಸಂದಣಿ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗಾಗಿ ಬಂದಿರುವ ಜನರ ಹಿತದೃಷ್ಟಿಯಿಂದ ಈ ಬೂತ್ ಸ್ಥಾಪಿಸಲಾಗಿದೆ.
    ಗುರುವಾರ ಉದ್ಘಾಟನೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ.ರವಿಶಂಕರ್ ಅವರು, ಸಾರ್ವಜನಿಕರ, ರೈತರ, ಗ್ರಾಹಕರ ಹಾಗೂ ವ್ಯಾಪಾರಸ್ಥರ ಅನುಕೂಲಕ್ಕಾಗಿ ಜಿಲ್ಲಾಡಳಿತ ಇಂತಹ ಸ್ಯಾನಿಟೈಜರ್ ಸ್ಪ್ರೇ ಬೂತ್‌ಗಳನ್ನು ಸ್ಥಾಪಿಸಿರುವುದು ಅತ್ಯಂತ ಹರ್ಷದಾಯಕ ವಿಷಯ. ಜಿಲ್ಲಾಡಳಿತ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಹಲವು ಪರಿಣಾಮಕಾರಿ ಕ್ರಮಗಳು ಪ್ರಶಂಸಾರ್ಹವಾಗಿವೆ. ಸಾರ್ವಜನಿಕರು ಕೂಡ ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.
    ಸಾಮಾಜಿಕ ಅಂತರ, ಸ್ಯಾನಿಟೈಜರ್‌ಗಳ ಬಳಕೆ, ಮಾಸ್ಕ್‌ಗಳ ಬಳಕೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ಜಿಲ್ಲಾಡಳಿತ, ಮಹಾನಗರ ಪಾಲಿಕೆ ವಿವಿಧ ಸಂಘ ಸಂಸ್ಥೆಗಳು ಇಂತಹ ಮಹತ್ಕಾರ್ಯ ಮಾಡುತ್ತಿರುವುದು ಪ್ರಶಂಸಾರ್ಹವಾಗಿದೆ ಎಂದು ಹೇಳಿದರು.
    ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತವಾಗಿರುವ ಇಂತಹ ಸ್ಯಾನಿಟೈಜರ್ ಸ್ಪ್ರೇ ಬೂತ್‌ಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ ಮತ್ತು ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ಥಾಪಿಸುವಂತೆ ಅವರು ಸೂಚಿಸಿದರು. ಅದರಂತೆ ಶೀಘ್ರದಲ್ಲಿಯೇ ಈ ಎರಡು ಸ್ಥಳಗಳಲ್ಲಿ ಸ್ಯಾನಿಟೈಜರ್ ಸ್ಪ್ರೇ ಬೂತ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಮನವರಿಕೆ ಮಾಡಿದರು.
    ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ್ ಅಗರವಾಲ್, ಜಿಪಂ ಸಿಇಒ ಗೋವಿಂದ ರೆಡ್ಡಿ, ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ಎಪಿಎಂಸಿ ಉಪ ಕಾರ್ಯದರ್ಶಿ ಕುಮಾರಸ್ವಾಮಿ, ಸಹಾಯಕ ನಿರ್ದೇಶಕ ಚಬನೂರ ಸೇರಿದಂತೆ ಮತ್ತಿತರರಿದ್ದರು.

    ಸ್ಯಾನಿಟೈಸರ್ ಸ್ಪ್ರೇ ಬೂತ್‌ಗಳ ಸ್ಥಾಪನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts