More

    ಪರಿಹಾರ ಪ್ಯಾಕೇಜ್ ಘೋಷಣೆಗೆ ಆಗ್ರಹ

    ವಿಜಯಪುರ: ಲಾಕ್‌ಡೌನ್ ಹಿನ್ನೆಲೆ ಸಮರ್ಪಕ ಪರಿಹಾರ ಪ್ಯಾಕೇಜ್ ಘೋಷಣೆಗೆ ಆಗ್ರಹಿಸಿ ಎಡಪಂಥಿಯ ಹಾಗೂ ಪ್ರಜಾಸತ್ತಾತ್ಮಕ ಪಕ್ಷಗಳ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತ ಕಚೇರಿ, ಶಾಸಕರ ನಿವಾಸ ಮತ್ತು ಉಸ್ತುವಾರಿ ಮಂತ್ರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರ

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷೃದ ಪರಿಣಾಮ ಕರೊನಾ ವ್ಯಾಪಕವಾಗಿ ಹರಡಿತು. ತಜ್ಞರು ಮುನ್ನೆಚ್ಚರಿಕೆ ನೀಡಿದರೂ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿಲ್ಲ. ಕೇವಲ ಚುನಾವಣೆ, ಜಾತ್ರೆ ಎಂದೆಲ್ಲ ಕಾಲಹರಣ ಮಾಡಿದವು. ಪರಿಣಾಮ ಕರೊನಾದಿಂದ ಸಾಕಷ್ಟು ಜನ ಸಾವು ನೋವಿಗೆ ತುತ್ತಾಗಬೇಕಾಯಿತು. ಇಂದಿನ ಎಲ್ಲ ದುಸ್ಥಿತಿಗಳಿಗೆ ಸರ್ಕಾರವೇ ಕಾರಣ ಎಂದು ಪ್ರತಿಭಟನಾಕಾರರು ಆಪಾದಿಸಿದರು.

    ಸಿಪಿಐ(ಎಂ) ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಜನರ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಮತ್ತೊಂದೆಡೆ ಬೆಲೆ ಏರಿಕೆ ನೀತಿಯಿಂದ ಮತ್ತಷ್ಟು ಬದುಕು ದುಸ್ತರವಾಗಿದೆ. ಕೃಷಿಕರು, ಕೂಲಿ ಕಾರ್ಮಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಜನಸಾಮಾನ್ಯರ ಪರ ಆಡಳಿತ ನಡೆಸದೆ ಬಂಡವಾಳ ಶಾಹಿ ಪರ ಆಡಳಿತ ನಡೆಸುತ್ತಿವೆ ಎಂದು ಆರೋಪಿಸಿದರು.

    ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನ್‌ರೆಡ್ಡಿ ಮಾತನಾಡಿ, ಕರೊನಾ ಕಾಲಘಟ್ಟದಲ್ಲಿ ಆರೋಗ್ಯ ಸೇವೆ ಕಲ್ಪಿಸಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ತೊಡಗಿರುವುದು ಕಂಡು ಬಂದಿದೆ. ಬೆಡ್, ಲಸಿಕೆ ಹಾಗೂ ಆಮ್ಲಜನಕವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದು ಕಂಡು ಬಂತು. ದುಡಿಯುವ ವರ್ಗದ ಜನ ಜೀವ ಕಳೆದುಕೊಳ್ಳಬೇಕಾಯಿತು. ಸರ್ಕಾರ ಜನರ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದ ಅಗ್ಗದ ಪ್ರಚಾರ ಪಡೆಯಲು ಕೇವಲ 1,423 ಕೋಟಿ ರೂ. ಪರಿಹಾರದ ಎರಡು ಅಸಮರ್ಪಕ ಪ್ಯಾಕೇಜ್‌ಗಳನ್ನು ಘೋಷಿಸಿದ್ದು ಬಿಟ್ಟರೆ ಬೇರೇನೂ ಪರಿಹಾರ ನೀಡಲಿಲ್ಲ ಎಂದರು.

    ಮುಖಂಡ ಸಿದ್ದಲಿಂಗ ಬಾಗೇವಾಡಿ, ಭರತ್‌ಕುಮಾರ ಎಚ್.ಟಿ., ಮಲ್ಲಿಕಾರ್ಜುನ್ ಎಚ್.ಟಿ., ಲಕ್ಷ್ಮಣ ಹಂದ್ರಾಳ, ಸುರೇಖಾ ರಜಪೂತ, ಸಂಗಪ್ಪ ಕಪಾಲಿ, ಮಹಾದೇವ ಲಿಗಾಡೆ, ಸುನೀಲ ಸಿದ್ರಾಮಶೆಟ್ಟಿ, ಕಾವೇರಿ ಬಿ.ಆರ್., ಈರಣ್ಣ ಬೆಳುಂಡಗಿ, ಸೋನುಬಾಯಿ ಬ್ಯಾಳಿ, ರಾಜು ರಣದೀವೆ, ಆಕಾಶ ರಾಮತೀರ್ಥ, ಅಮೀತ ಬೀಳಗಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts