More

    ಲೋಹಿಯಾ ವಿಚಾರಗಳು ಅನುಕರಣೀಯ

    ವಿಜಯಪುರ: ತರ್ಕಬದ್ಧ ವಿಚಾರಗಳು, ದೀನ-ದಲಿತರ ಸೇವೆ, ನಾಗರಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ, ಚಳವಳಿಯಲ್ಲಿ ಭಾಗಿ, ಅನ್ಯಾಯದ ವಿರುದ್ಧ ಪ್ರತಿಭಟನೆ, ರಾಷ್ಟ್ರೀಯ ನಾಯಕರೊಂದಿಗೆ ವಸ್ತುನಿಷ್ಠ ಕಾರ್ಯಕಲಾಪ ಹೀಗೆ ಹಲವು ವಿಚಾರ ಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡ ವ್ಯಕ್ತಿ ರಾಮಮನೋಹರ ಲೋಹಿಯಾ ಎಂದು ಪ್ರೊ.ಓಂಕಾರ ಕಾಕಡೆ ಹೇಳಿದರು.

    ನಗರದ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಸಭಾಭವನದಲ್ಲಿ ಎ.ಎಸ್.ಹಿಪ್ಪರಗಿ ಪ್ರತಿಷ್ಠಾನದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ರಾಮಮನೋಹರ ಲೋಹಿಯಾ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ.ಎಂ.ಎಸ್.ಮದಭಾವಿ ಮಾತನಾಡಿ, ಸಮಾಜವಾದಿ ಚಿಂತನೆಯುಳ್ಳ ರಾಮಮನೋಹರ ಲೋಹಿಯಾ ಹೋರಾಟದ ಬದುಕನ್ನು ವಿವರಿಸಿದರು.

    ದತ್ತಿ ದಾಸೋಹಿ ಸಿ.ಚನ್ನಬಸವಣ್ಣ ಮಾತನಾಡಿ, ಲೋಹಿಯಾ ಅವರ ವಿಚಾರಧಾರೆಗಳನ್ನು ಅನುಸರಿಸಬೇಕು ಎಂದರು. ವಿ.ಸಿ.ನಾಗಠಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎನ್.ಹೇರಲಗಿ, ಎಸ್.ಜಿ.ನಾಡಗೌಡ, ಎಂ.ಜಿ.ಯಾದವಾಡ, ಎಸ್.ಕೆ.ಬಿರಾದಾರ, ಶಶಿಧರ ಸಾತಿಹಾಳ, ಚೇತನಾ ಸಂಕೊಂಡ, ವಿಶ್ವನಾಥ ಬೀಳಗಿ, ಮನು ಪತ್ತಾರ, ಜಂಬುನಾಥ ಕಂಚ್ಯಾಣಿ, ಎಸ್.ಪಿ.ಶೇಗುಣಸಿ, ವಿಠಲ ತೇಲಿ, ಶಕುಂತಲಾ ದೊಡಮನಿ, ದಾಕ್ಷಾಯಿಣಿ ಬಿರಾದಾರ, ಶಾರದಾ ಐಹೊಳ್ಳಿ, ದೊಡ್ಡಣ್ಣ ಬಜಂತ್ರಿ, ಬಿ.ಕೆ. ಗೋಟ್ಯಾಳ, ನಿರ್ಮಲಾ ಸುಂಟಾಣ ಮತ್ತು ದಾನಪ್ಪ ಹಳ್ಳಿ ಇದ್ದರು.

    ಬಿ.ಆರ್.ಬನಸೋಡೆ ಮತ್ತು ಕರಿಷ್ಮಾ ಪ್ರಾರ್ಥಿಸಿದರು. ಡಾ.ವಿ.ಡಿ.ಐಹೊಳ್ಳಿ ಸ್ವಾಗತಿಸಿದರು. ಪ್ರೊ.ಎ.ಬಿ.ಬೂದಿಹಾಳ ನಿರೂಪಿಸಿದರು. ಪ್ರೊ.ಎಸ್.ಬಿ.ದೊಡಮನಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts