More

    ಮಕ್ಕಳು ಪುಸ್ತಕದತ್ತ ಒಲವು ತೋರಲಿ

    ವಿಜಯಪುರ: ಮಕ್ಕಳನ್ನು ಮೊಬೈಲ್‌ನಿಂದ ದೂರವಿಟ್ಟು, ಪುಸಕ್ತದ ಕಡೆಗೆ ಒಲವು ತೋರುವಂತೆ ಮಾಡಬೇಕು. ಆಗ ಮಾತ್ರ ಮಕ್ಕಳು ಸಾಧನೆ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
    ನಗರದ ಆಕ್ಸಫರ್ಡ್ ಐಐಟಿ ಓಲಂಪಿಯಾಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಮ್ಮನ ಮಡಿಲು ಎಂಬ ಧ್ಯೇಯವಾಕ್ಯದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಶಾಲೆ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
    ಕರ್ನಾಟಕ ಜಲಸಂಪನ್ಮೂಲ ಸಚಿವಾಲಯದ ಮಾಜಿ ಸಲಹೆಗಾರ ಪ್ರೊ. ಅರವಿಂದ ಗಲಗಲಿ ಮಾತನಾಡಿ, ಮಕ್ಕಳನ್ನು ಆಡಂಬರದಿಂದ ಬೆಳೆಸದೇ ಹಸಿವು, ಬಡತನ, ನೋವು- ನಲಿವುಗಳ ಅರಿವು ಮೂಡಿಸಬೇಕು. ಆಗ ಮಾತ್ರ ಮಕ್ಕಳು ಪರಿಪಕ್ವವಾಗಿ ಬೆಳೆದು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳುವ ಕಲೆ ಕಲಿತುಕೊಳ್ಳುತ್ತಾರೆ ಎಂದರು.
    ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಚೇರ್ಮನ್ ಬಸವರಾಜ ಕೌಲಗಿ ಮಾತನಾಡಿ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಕ್ಕಳು ಮಾಡುತ್ತಿರುವ ಸಾಧನೆ ನೋಡಿದಾಗ ಆಕ್ಸಫರ್ಡ್ ಶಾಲೆ ಗುಣಮಟ್ಟ ಎಂಥದ್ದು ಎಂದು ತಿಳಿಯುತ್ತದೆ ಎಂದರು.
    ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ ಮಾತನಾಡಿ, ಮಕ್ಕಳು ಯಾವ ಕ್ಷೇತ್ರದಲ್ಲಿ ಆಸಕ್ತಿ ತೋರಿಸುತ್ತಾರೋ ಅಂಥ ವಾತಾವರಣ ಕಲ್ಪಿಸಬೇಕು. ಆಗ ಮಾತ್ರ ಅವರು ಸಮಾಜಕ್ಕೆ, ದೇಶಕ್ಕೆ ಮಾದರಿಯಾಗುತ್ತಾರೆ ಎಂದರು.
    ಶಾಲೆ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಧ್ಯಕ್ಷತೆ ವಹಿಸಿ, ಜಗತ್ತಿನಲ್ಲಿ ಏನನ್ನೂ ಬಯಸದೇ ತಮ್ಮಲ್ಲಿನ ವಿದ್ಯೆ ಕೊಡುವಂಥ ವ್ಯಕ್ತಿಗಳೆಂದರೆ ತಾಯಿ ಮತ್ತು ಗುರು. ಅವರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದರು.
    ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ರಾಜಶೇಖರ ಕೌಲಗಿ, ಮಂಜುನಾಥ ಕೌಲಗಿ, ದಯಾನಂದ ಕೆಲೂರ ಹಾಗೂ ಆಕ್ಸರ್ಡ್ ಶಾಲೆ ಪ್ರಾಚಾರ್ಯ ಜೆ.ಎಂ. ಇನಾಮದಾರ್, ಅನುಸೂಯಾ ಅಮರಣ್ಣವರ ಹಾಗೂ ಆಡಳಿತಾಧಿಕಾರಿ ಜಿ.ಎಂ. ಕಟ್ಟಿ, ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
    ಲಕ್ಷ್ಮಿ ಬಾಗೇವಾಡಿ ಹಾಗೂ ರಾಜಶ್ರೀ ಕಟ್ಟಿ ನಿರೂಪಿಸಿದರು. ಸಕೀಫ್‌ಅಹ್ಮದ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts