More

    ಸೋಲೇ ಗೆಲುವಿನ ಮೆಟ್ಟಿಲು

    ವಿಜಯಪುರ: ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸಿದಾಗ ಮಾತ್ರ ಭವಿಷ್ಯದಲ್ಲಿ ಸದೃಢರಾಗಲು ಸಾಧ್ಯ. ಸೋಲೇ ಗೆಲುವಿನ ಮೆಟ್ಟಿಲು ಎಂದು ಪೊಲೀಸ್ ಅಧಿಕಾರಿ ರವೀಂದ್ರ ನಾಯ್ಕೋಡಿ ಹೇಳಿದರು.
    ನಗರದ ಆಕ್ಸರ್ಡ್ ಐಐಟಿ ಒಲಂಪಿಯಾಡ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಸೋಲು ಗೆಲುವಿನ ಮೆಟ್ಟಿಲು. ಅದರಿಂದ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗುತ್ತದೆ. ಸೋಲುಗಳಿಂದ ಪಾಠ ಕಲಿತು ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
    ಪೊಲೀಸ್ ಅಧಿಕಾರಿ ಮಹಾಂತೇಶ ದ್ಯಾಮನ್ನವರ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಅತೀ ಮುಖ್ಯವಾಗಿದೆ. ಕ್ರೀಡೆಯನ್ನು ಜೀವನದಲ್ಲಿ ರೂಢಿಸಿಕೊಂಡರೆ ಸಕಲ ರೋಗಗಳಿಂದ ಮುಕ್ತಿ ಹೊಂದಿ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಸದೃಢರಾಗಬಹುದು ಎಂದು ತಿಳಿಸಿದರು.
    ಅಧ್ಯಕ್ಷತೆ ವಹಿಸಿದ್ದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಚೇರ‌್ಮನ್ ಬಸವರಾಜ ಕೌಲಗಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ, ಆದರೆ ಗೆಲ್ಲುವವರೆಗೆ ನೀವು ಛಲ ಬಿಡಬಾರದು ಎಂದು ಹೇಳಿದರು.
    ಆಕ್ಸರ್ಡ್ ಶಿಕ್ಷಣ ಸಂಸ್ಥೆ ಚೇರ‌್ಮನ್ ಸಂಗಮೇಶ ಬಬಲೇಶ್ವರ, ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಎಚ್.ಎಂ. ಮುಜಾವರ, ನಿರ್ದೇಶಕರಾದ ರಾಜಶೇಖರ ಕೌಲಗಿ, ದಯಾನಂದ ಕೆಲೂರ, ಮಂಜುನಾಥ ಕೌಲಗಿ, ಶಾಲೆ ಮುಖ್ಯಶಿಕ್ಷಕ ಜೆ.ಎಂ. ಇನಾಮದಾರ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts