More

  ಸಿಎಎ ವಿರೋಧಿಸಿ ಡಿಎಸ್‌ಎಸ್ ಪ್ರತಿಭಟನೆ

  ವಿಜಯಪುರ: ಸಂವಿಧಾನ ವಿರೋಧಿ ಎನ್‌ಆರ್‌ಸಿ, ಎನ್‌ಪಿಆರ್ ಹಾಗೂ ಸಿಎಎ ಕಾಯ್ದೆ ವಿರೋಧಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ಪದಾಧಿಕಾರಿಗಳು ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

  ಜಿಲ್ಲಾ ಸಂಚಾಲಕ ವಿನಾಯಕ ಗುಣಸಾಗರ ಮಾತನಾಡಿ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಆರ್ಥಿಕ ಹಿಂಜರಿಕೆ, ನೋಟು ಅಮಾನ್ಯೀಕರಣ, ಮಹಿಳೆಯರ ಮೇಲೆ ಅತ್ಯಾಚಾರ ಮುಂತಾದ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಎನ್‌ಆರ್‌ಸಿ. ಎನ್‌ಪಿಆರ್ ಹಾಗೂ ಸಿಎಎದಂಥ ಸಂವಿಧಾನ ವಿರೋಧಿ ಕಾಯ್ದೆಗಳನ್ನು ಹೂಡಿರುವ ಕುತಂತ್ರವಲ್ಲದೆ ಬೇರೆನು ಅಲ್ಲ. ಒಂದು ಜಾತಿ, ಧರ್ಮವನ್ನು ಹೊರಗಿಟ್ಟು ಕಾನೂನು ರೂಪಿಸುವ ಅವಶ್ಯಕತೆ ಇಲ್ಲ. ಈ ದೇಶದಲ್ಲಿ ಎಲ್ಲ ಧರ್ಮದವರು ಜೀವಿಸುವ ಅವಕಾಶವನ್ನು ಡಾ.ಅಂಬೇಡ್ಕರ್ ಸಂವಿಧಾನದಲ್ಲಿ ನೀಡಿದ್ದಾರೆ. ಸರ್ಕಾರ ನಡೆಸುವವರು ಸಮಾಜದ ಎಲ್ಲರಿಗೂ ಒಳಿತಾಗುವ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವುದು ಒಳ್ಳೆಯದು. ಈ ದೇಶದ ಒಂದು ಧರ್ಮವನ್ನು ಹೊರಗಿಟ್ಟು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದು ಸರಿಯಾದ ಕ್ರಮವಲ್ಲ ಎಂದರು.

  ನಗರ ಸಂಚಾಲಕ ಸಿದ್ದು ರಾಯಣ್ಣ ಮಾತನಾಡಿ, ಮಾನವೀತೆ ದೃಷ್ಟಿಯಿಂದ ಈ ಕಾಯ್ದೆಯಿಂದ ಇತರೆ ದೇಶಗಳಲ್ಲಿ ವಾಸಿಸಲು ಸಾಧ್ಯವಾಗದ ಜನರು ಭಾರತಕ್ಕೆ ಬಂದರೆ ಅಂಥವರಿಗೆ ಆಶ್ರಯ ನೀಡಲು ನಮ್ಮ ಕಾನೂನಿನಲ್ಲಿ ಅವಕಾಶ ಇರುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನದ ವಿರೋಧಿಯಾಗಿದ್ದು, ಇದರಿಂದ ಕೇವಲ ಮುಸ್ಲಿಮರು ಮಾತ್ರವಲ್ಲ ಇತರರು ಅದರ ದುಷ್ಪರಿಣಾಮಕ್ಕೆ ತುತ್ತಾಗಬೇಕಾಗುತ್ತದೆ ಎಂದು ಹೇಳಿದರು.

  ಸಿಎಎ ಕಾಯ್ದೆ ದೇಶದ ಸಂವಿಧಾನದ ಮೂಲತತ್ವಗಳಾದ ಸಮಾನತೆ ವಿರುದ್ಧವಾಗಿದ್ದು, ದೇಶದ ಭದ್ರತೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಛಿದ್ರ ಮಾಡಲಿದೆ. ಕಾರಣ ಎನ್‌ಆರ್‌ಸಿ, ಎನ್‌ಪಿಆರ್ ಹಾಗೂ ಸಿಎಎ ಕಾಯ್ದೆಯನನು ಜಾರಿ ಮಾಡದೇ, ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.

  ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ ಚಲವಾದಿ, ರಾಜ್ಯ ಸಂಚಾಲಕ ರಮೇಶ ಆಸಂಗಿ, ಜಿಲ್ಲಾ ಸಂಚಾಲಕ ರಮೇಶ ಧರಣಾಕರ, ರಾಜು ಪಿರಂಗಿ, ರೇವಣಸಿದ್ದ ಮಸಳಿಕೇರಿ, ರಾಮಚಂದ್ರ ದೊಡಮನಿ, ಸಿದ್ದು ತಳಕೇರಿ, ಸಂಜು ಜಾನಕರ, ಸಂಜು ಬನಸೋಡೆ, ಧರೆಪ್ಪ ಮರದೊಲಿ, ಮಲ್ಲು ಸಿಂಗೆ, ವಿಜಯ ಅರಕೇರಿ, ರಾಜಕುಮಾರ ಸಿಂದಗೇರಿ, ರಾವತ ತಳಕೇರಿ, ಆನಂದ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು. 

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts