More

    ಶಾಂತಿ ಕದಡುವ ಸಮಾವೇಶಕ್ಕೆ ಬ್ರೇಕ್ ಹಾಕಿ

    ವಿಜಯಪುರ: ಸಮಾಜದಲ್ಲಿ ಶಾಂತಿ ಕದಡುವ ಸಮಾವೇಶಗಳಿಗೆ ನಿರ್ಬಂಧ ಹೇರಲು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಅವರಿಗೆ ಮನವಿ ಸಲ್ಲಿಸಿದರು.

    ಫೆ.24 ರಂದು ಜಿಲ್ಲೆಯಲ್ಲಿ ಸಿಎಎ ವಿರೋಧಿಸಿ ಬೃಹತ್ ಪ್ರತಿಭಟನೆ ಹಾಗೂ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಈ ಸಮಾವೇಶಕ್ಕೆ ಅನುಮತಿ ನೀಡಬಾರದು. ಸದರಿ ಸಮಾವೇಶದಿಂದ ಸಮಾಜದಲ್ಲಿ ಅಶಾಂತಿ ಹರಡಲಿದೆ ಎಂದು ಮನವರಿಕೆ ಮಾಡಿದರು.

    ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ (ಕೂಚಬಾಳ )ಮಾತನಾಡಿ, ಸಿಎಎ ವಿರೋಧಿಸಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳುತ್ತಿರುವ ಸಮಾವೇಶ ಕಾನೂನು ಬಾಹಿರವಾಗಿದೆ. ಸದರಿ ಸಮಾವೇಶಕ್ಕೆ ಎಲ್ಲೂ ಪರವಾನಗಿ ನೀಡಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸೇರಿಕೊಂಡು ಸಮಾಜದ ಸ್ವಾಸ್ಥೃ ಹರಡಲು ಯತ್ನಿಸುತ್ತಿವೆ. ಈಗಾಗಲೇ ಸದರಿ ಸಮಾವೇಶಗಳಿಂದಾಗಿ ರಾಷ್ಟ್ರವಿರೋಧಿ ಹೇಳಿಕೆಗಳು ಹೊರಬೀಳುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಇದೊಂದು ದೇಶಕ್ಕೆ ಮಾರಕವಾಗುವ ಹೋರಾಟ ಎನಿಸಲಿದೆ. ಆದಕಾರಣ ಜಿಲ್ಲಾಡಳಿತ ಪರವಾನಗಿ ನೀಡಕೂಡದು ಎಂದು ಒತ್ತಾಯಿಸಿದರು.

    ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಶಾಂತಿ ಸೌಹಾರ್ದತೆಯ ನೆಲೆಬೀಡಾಗಿರುವ ಜಿಲ್ಲೆಯಲ್ಲಿ ದುಷ್ಟ ಶಕ್ತಿಗಳು ಅಶಾಂತಿಯ ಅಸಹನೆಯ ಬೀಜ ಬಿತ್ತುವಂತಾಗಬಾರದು. ಶಾಂತಿ ಕದಡಬಾರದು. ಆದ್ದರಿಂದ ಜಿಲ್ಲಾಡಳಿತವು ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಸಂವಿಧಾನಕ್ಕೆ ಅಪಚಾರವೆಸಗುವ, ಜನರನ್ನು ಕೆರಳಿಸುವ, ಪ್ರಚೋದನಾತ್ಮಕವಾಗಿ ಮಾತಾಡಿದರೆ ಅವರ ಮೆಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಕೆಡಿಸುವ ಈ ಕೆಲಸಕ್ಕೆ ಜಿಲ್ಲಾಡಳಿತವು ಅನುವು ಮಾಡಿಕೊಡಬಾರದು ಎಂದರು.

    ಚಂದ್ರಶೇಖರ ಕವಟಗಿ ಮಾತನಾಡಿ, ಸಿಎಎ ಬಗ್ಗೆ ಯಾವುದೇ ನ್ಯಾಯಸಮ್ಮತ ಜ್ಞಾನವಿಲ್ಲದ ಜನರು ಜನರನ್ನು ಒಕ್ಕಲೆಬ್ಬಿಸುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿಯದು ಕಡು ವಿರೋಧವಿರುತ್ತದೆ ಎಂದರು.

    ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ರವಿಕಾಂತ ಬಗಲಿ, ವಿಜುಗೌಡ ಪಾಟೀಲ, ಬಾಬು ಶಿರಶ್ಯಾಡ, ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ, ಸುರೇಶ ಬಿರಾದಾರ, ರಾಜು ಮಗಿಮಠ, ಶಿವಾನಂದ ಭುಯ್ಯರ, ಸಿದ್ದು ಮಲ್ಲಿಕಾರ್ಜುನಮಠ, ಉಮೇಶ ವಂದಾಲ, ವಿವೇಕಾನಂದ ಡಬ್ಬಿ, ಬಾಬು ಶಿರಶ್ಯಾಡ, ಪ್ರಮೋದ ಬಡಿಗೇರ, ಕೃಷ್ಣಾ ಗುನ್ನಾಳಕರ, ಸಂಜಯ ಪಾಟೀಲ (ಕನಮಡಿ), ರಾಹುಲ ಜಾಧವ, ಬಸವರಾಜ ಬೈಚಬಾಳ, ವಿಜಯ ಜೋಶಿ, ಜಗದೀಶ ಮುಚ್ಚಂಡಿ, ಎಸ್.ಆರ್. ಯಂಕಪ್ಪಗೋಳ, ಎಚ್.ಕೆ. ಕವಿಶೆಟ್ಟಿ, ಸತೀಶ ಡೋಬಳೆ, ರಾಜೇಶ ತವಸೆ, ಪ್ರಮೋದ ಬಡಿಗೇರ, ವಿಠಲ ನಡುವಿನಕೇರಿ, ಉಮೇಶ ವೀರಕರ, ಸಿದ್ರಾಮಪ್ಪ ಬೆಲ್ಲದ, ಜಿ.ಡಿ. ಅಂಗಡಿ, ವಿನಾಯಕ ಬಬಲೇಶ್ವರ, ಸಂಜು ಸಿಂದಗಿ, ರಾಹು ಔರಂಗಾಬಾದ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts