More

    ದಿ.ಕೆ.ಎಚ್.ಪಾಟೀಲರ ಕೊಡುಗೆ ಅನನ್ಯ

    ವಿಜಯಪುರ: ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸಹಕಾರಿ ರಂಗದ ದಿಗ್ಗಜ ಹಾಗೂ ಮಾಜಿ ಸಚಿವ ದಿ.ಕೆ.ಎಚ್.ಪಾಟೀಲ ಹುಲಕೋಟಿ ಅವರ ಜಯಂತ್ಯುತ್ಸವವನ್ನು ಬುಧವಾರ ಆಚರಿಸಲಾಯಿತು.

    ಈ ವೇಳೆ ಮಾಜಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಗದಗ ಕೋ-ಆಪರೇಟಿವ್ ಕಾಟನ್ ಸೇಲ್ಸ್ ಸೊಸಾಯಿಟಿ ಎಂಬ ಹೆಸರಿನಲ್ಲಿ ಸಹಕಾರಿ ವಲಯದಲ್ಲಿ ಉತ್ಪಾದನೆ ಚಟುವಟಿಕೆಗೆ ನಾಂದಿ ಹಾಡಿ, ಜನ ಸಾಮಾನ್ಯರ ಪಾಲುಗಾರಿಕೆಯ ಉದ್ದಿಮೆಶೀಲತೆಯನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಕೆ.ಎಚ್.ಪಾಟೀಲ ಅವರಿಗೆ ಸಲ್ಲುತ್ತದೆ. ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಸಹಕಾರಿ ರಂಗದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವಲ್ಲಿ ಅವರ ಶ್ರಮ ಅನನ್ಯವಾಗಿದೆ. ಅವರ ಸವಿನೆನಪಿನಲ್ಲಿ ಕಾರ್ಖಾನೆಯಲ್ಲಿ ಪ್ರತಿ ವರ್ಷ ಜಯಂತ್ಯುತ್ಸವ ಆಚರಿಸಲಾಗುತ್ತದೆ ಎಂದರು.

    ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ನಿರ್ದೇಶಕರಾದ ಟಿ.ವಿ.ಅಮಲಝರಿ, ವಿ.ಎಚ್.ಬಿದರಿ, ಜಿ.ಕೆ.ಕೋನಪ್ಪನವರ, ರಮೇಶ ಜಕರಡ್ಡಿ, ರಾಮಣ್ಣ ಶೇಬಾನಿ, ಸಿದ್ದಣ್ಣ ದೇಸಾಯಿ, ಎಸ್.ಟಿ.ಪಾಟೀಲ, ಜಗದೀಶ ಶಿರಾಳಶೆಟ್ಟಿ, ಹಣಮಂತ ಕಡಪಟ್ಟಿ, ಆರ್.ವೈ.ಹರಿಜನ, ಚನ್ನಪ್ಪ ಜಮಖಂಡಿ ಹಾಗೂ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಎಚ್.ವೈ.ಗದ್ದನಕೇರಿ, ಟಿ.ಆರ್.ಪಚ್ಚನ್ನವರ, ಶಿವನಗೌಡ ಪಾಟೀಲ, ರಮೇಶ ಪಡಗಾನೂರ ಮತ್ತು ಸುತ್ತಲಿನ ರೈತ ಬಾಂಧವರು, ಷೇರು ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಕಾರ್ಮಿಕರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts