More

    ಚರಗ ಚೆಲ್ಲಿ ಸಂಭ್ರಮಿಸಿದ ಜನತೆ

    ವಿಜಯಪುರ: ಜಿಲ್ಲೆಯ ವಿವಿಧೆಡೆ ಬುಧವಾರ ಎಳ್ಳ ಅಮಾವಾಸ್ಯೆ ನಿಮಿತ್ತ ರೈತರು ಹೊಲಗಳಲ್ಲಿ ಚರಗ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
    ವಿವಿಧ ಧಾನ್ಯದ ಬೆಳೆಗಳ ಒಕ್ಕಣೆ ಮಾಡುವ ಸಮಯ ಇದಾಗಿದೆ. ಮುಂಗಾರು ಮುಕ್ತಾಯದ ಹಂತ, ಸಮೃದ್ಧಿ ಸಂಕೇತವೆಂದು ಬಣ್ಣಿಸುವ ಈ ಹಬ್ಬವನ್ನು ವಿಶೇಷವಾಗಿ ರೈತಾಪಿ ವರ್ಗದವರು ತಮ್ಮ ಹೊಲಗಳಲ್ಲಿ ಕುಟುಂಬ ಸಹಿತ ವಿಶಿಷ್ಟವಾಗಿ ಆಚರಿಸಿದರು. ಕೆಲ ರೈತರು ಸಾಮೂಹಿಕವಾಗಿ ಬಂಡಿ ಕಟ್ಟಿಕೊಂಡು ಹೊಲಗಳಿಗೆ ಹೋಗಿ ಹಬ್ಬ ಆಚರಿಸಿದರೆ, ಇನ್ನೂ ಕೆಲವರು ಕಾರು, ಬೈಕ್‌ಗಳಲ್ಲಿ ತಮ್ಮ ಹೊಲಗಳಿಗೆ ತೆರಳಿ ಚರಗ ಚೆಲ್ಲಿ ಮನೆಯಿಂದ ತಂದಿದ್ದ ರೊಟ್ಟಿ, ಶೇಂಗಾ ಚಟ್ನಿ, ಇನ್ನಿತರ ಖಾದ್ಯವನ್ನು ಸವಿದು ಸಂಭ್ರಮಿಸಿದರು.

    ಶಾಂತಿನಿಕೇತನ ಶಾಲೆಯಲ್ಲಿ ಸಂಕ್ರಾಂತಿ

    ನಗರದ ಶಾಂತಿನಿಕೇತನ ಶಾಲೆಯಲ್ಲಿ ಸಂಭ್ರಮದ ಸಂಕ್ರಮಣ ಆಚರಿಸಲಾಯಿತು. ಪ್ರಾಚಾರ್ಯ ಚಂದನಗೌಡ ಮಾಲಿಪಾಟೀಲ ಮಾತನಾಡಿ, ‘ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು’ ಎಂಬ ತತ್ವವನ್ನು ಒಳಗೊಂಡ ಮೊದಲ ಹಬ್ಬ ಸಂಕ್ರಮಣ. ಸೂರ್ಯ ಧನುರ ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶ ಮಾಡುವ ಶುಭದಿನವೇ ಮಕರ ಸಂಕ್ರಮಣ. ಇದು ಉತ್ತರಾಯಣ ಪುಣ್ಯಕಾಲ ಪ್ರಾರಂಭವಾಗುವ ದಿನವಾಗಿದೆ. ಕೃಷಿಕ ಸಮುದಾಯ ತಾವು ಉತ್ತಿ ಬಿತ್ತಿ ಬೆಳೆದ ಸಲಿಗೆ ಪೂಜೆ ಸಲ್ಲಿಸುವ ಮೂಲಕ ಭೂ ತಾಯಿಗೆ ಕೃತಜ್ಞತೆಯನ್ನು ಅರ್ಪಿಸುವ ಸುದಿನ ಎಂದು ತಿಳಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಂಸ್ಥೆ ಅಧ್ಯಕ್ಷ ಸುರೇಶ ಬಿರಾದಾರ, ಶರತ ಬಿರಾದಾರ, ಸ್ಮೀತಾ ರಾಠೋಡ, ಜಯಶೀಲಾ ಸಂಕದ, ದೀಪಾ ಬಿರಾದಾರ, ಸಂಜೀವ ಟೆಂಕಲಿ, ಅಬುಬಕರ್ ಬಡೇಗರ್ ಹಾಗೂ ಎಲ್ಲ ಭೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts