More

    ಮಹಾಮಾರಿ ತಡೆಗೆ ಲಸಿಕೆಯೊಂದೇ ಪರಿಹಾರ

    ವಿಜಯಪುರ: ಮಹಾಮಾರಿ ಕರೊನಾ ತಡೆಗೆ ಲಸಿಕೆಯೇ ಪರಿಹಾರ. ಹೀಗಾಗಿ ಎಲ್ಲರೂ ಕರೊನಾ ಲಸಿಕೆ ಹಾಕಿಸಿಕೊಳ್ಳಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು. ನಗರದ ವಾರ್ಡ್ ನಂ. 34ರ ಅಡಕಿ ಗಲ್ಲಿಯ ಆಯುರ್ವೇದ ಕಾಲೇಜು ಆವರಣ ಹಾಗೂ ವಾರ್ಡ್ ನಂ.8 ಶಿರಾಳಶೆಟ್ಟಿ ಓಣಿಯ ಜಬರದಸ್ತ್ ಹನುಮಾನ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ಕೋವಿಶೀಲ್ಡ್ ಲಸಿಕೆ ಪಡೆದವರು 42 ದಿನಗಳ ಅವಧಿ ಮುಗಿದಿದ್ದರೆ ಎರಡನೇ ಹಂತದ ಲಸಿಕೆ ಪಡೆಯಬಹುದು. ಅದೇ ರೀತಿ ಕೋವ್ಯಾಕ್ಸಿನ್ ಲಸಿಕೆ ಪಡೆದು 28 ದಿನಗಳ ಅವಧಿ ಮುಗಿಸಿದವರು ಎರಡನೇ ಹಂತದ ಕೋವ್ಯಾಕ್ಸಿನ್ ಲಸಿಕೆ ಪಡೆಯಬೇಕೆಂದರು.

    ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಲಕ್ಷ್ಮಣ ಜಾಧವ, ಪರಶುರಾಮ ರಜಪೂತ, ರಾಹುಲ್ ಜಾಧವ, ಚಂದ್ರು ಚೌಧರಿ, ಭೀಮು ಮಾಶ್ಯಾಳ, ದತ್ತಾ ಗೊಲಾಂಡೆ, ತುಳಸಿರಾಮ ಸೂರ್ಯವಂಶಿ, ಬಾಪೂಜಿ ನಿಕ್ಕಂ, ರಾಜು ಅನಂತಪುರ, ರಾಜಶೇಖರ ಭಜಂತ್ರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts