More

    ಗಣಕಯಂತ್ರದ ಪಾತ್ರ ಬಹುಮುಖ್ಯ

    ವಿಜಯಪುರ: ಆಧುನಿಕ ಯುಗದಲ್ಲಿ ಗಣಕಯಂತ್ರದ ಪಾತ್ರ ಬಹುಮುಖ್ಯವಾಗಿದ್ದು, ಜಗತ್ತು ಅಂಗೈಯಲ್ಲಿ ಎಂಬಂತೆ ಎಲ್ಲವನ್ನು ವ್ಯವಸ್ಥೆ ನಿರ್ಮಾಣವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
    ಇಲ್ಲಿನ ತೊರವಿ ರಸ್ತೆಯಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಡಾ. .ಗು. ಹಳಕಟ್ಟಿ ಸ್ನಾತಕೋತ್ತರ ಕೇಂದ್ರದಲ್ಲಿ ಗಿರಿಜನ ಉಪಯೋಜನೆ (ಟಿಎಸ್‌ಪಿ) ಅಡಿಯಲ್ಲಿ ನಿರ್ಮಿಸಿದ ವಿದ್ಯಾರ್ಥಿ ವಸತಿ ನಿಲಯದ ನೂತನ ಕಟ್ಟಡ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಅನ್ನು ಸೋಮವಾರ ವಿತರಿಸಿ ಅವರು ಮಾತನಾಡಿದರು.
    ವಿದ್ಯಾರ್ಥಿಗಳು ಸರ್ಕಾರ ನೀಡಿರುವಂತಹ ಲ್ಯಾಪ್‌ಟಾಪ್‌ಗಳನ್ನು ತಮ್ಮ ಉತ್ತಮ ವಿದ್ಯಾರ್ಜನೆಗಾಗಿ ಬಳಸಿಕೊಂಡು, ರಾಷ್ಟ್ರದಲ್ಲಿ ಉತ್ತಮ ಸಾಧಕರಾಗಿ ಹೊರಹೊಮ್ಮಬೇಕು. ರಾಜ್ಯದಲ್ಲಿ ಎಲ್ಲ ವಿಶ್ವವಿದ್ಯಾಲಯಗಳು ಅಭಿವೃದ್ಧಿಯಾಗಬೇಕಾಗಿದೆ ಅಂದಾಗ ಮಾತ್ರ ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದಂತಾಗುತ್ತದೆ ಎಂದರು.
    ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ, ಹಣಕಾಸು ಅಧಿಕಾರಿ ಪ್ರೊ. ಡಿ.ಎನ್. ಪಾಟೀಲ, ಕುಲಸಚಿವ ಪ್ರೊ. ಬಸವರಾಜ ಪದ್ಮಶಾಲಿ, ಮೌಲ್ಯಮಾಪನ ಕುಲಸಚಿವ ಪ್ರೊ. ಎಸ್.ಎಂ. ಹುರಕಡ್ಲಿ, ನಿರ್ದೇಶಕ ಡಾ. ಪರಶುರಾಮ ಬನ್ನಿಗಿಡದ, ಅಭಿಯಂತರ ಬಿ.ಬಿ.ಪಾಟೀಲ, ಗುತ್ತಿಗೆದಾರ ಗುರು ಕೌಲಗಿ ಸೇರಿದಂತೆ ಸಿಂಡಿಕೇಟ್ ಸದಸ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಅವಶ್ಯವಿದ್ದು ಆದಷ್ಟು ಶೀಘ್ರ ವೈದ್ಯಕೀಯ ಕಾಲೇಜು ತರಲು ಪ್ರಯತ್ನಿಸಲಾಗುವುದು. ವಿಜಯಪುರ ನಗರದಲ್ಲಿ ಸುಮಾರು 30 ಕಡೆ ಓಪನ್ ಜಿಮ್‌ಗಳನ್ನು ಮಾಡಲಾಗಿದ್ದು, ಈ ವಿಶ್ವವಿದ್ಯಾಲಯದಲ್ಲಿಯೂ ಶಾಸಕರ ಅನುದಾನದಲ್ಲಿ ಓಪನ್ ಜಿಮ್ ಮಾಡಲಾಗುವುದು.
    ಬಸನಗೌಡ ಪಾಟೀಲ ಯತ್ನಾಳ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts