More

    ರೈತರ ಬೆಂಬಲಕ್ಕೆ ನಿಂತ ಸಂಘಟನೆಗಳು

    ವಿಜಯಪುರ: ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೈ ಬಿಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಸೋಮವಾರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದವು.
    ರೈತ ಕೃಷಿ ಕಾರ್ಮಿಕರ ಸಂಘಟನೆ ರಾಜ್ಯ ಉಪಾಧ್ಯಕ್ಷ ಬಿ. ಭಗವಾನ್ ರೆಡ್ಡಿ ಮಾತನಾಡಿ, ಇಡೀ ಜಗತ್ತು ಕರೊನಾದಿಂದ ತತ್ತರಿಸುತ್ತಿದೆ. ಲಾಕ್‌ಡೌನ್‌ನಿಂದ ಇನ್ನೂ ಹೊರಬರದ ಜನರು ಹಸಿವು, ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಆರ್ಥಿಕ ದಿವಾಳಿ ಆಗಿದೆ. ಇಂತಹ ಸನ್ನಿವೇಶದಲ್ಲಿ ರೈತರಿಗೆ ಮಾರಕವಾಗುವ ಕಾಯ್ದೆಗಳಿಗೆ ತಿದ್ದುಪಡಿ ತರುವ ಕೆಲಸಕ್ಕೆ ಸರ್ಕಾರ ಕೈ ಹಾಕಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಅಖಂಡ ಕರ್ನಾಟಕ ರೈತ ಸಂಘದ ಮುಖಂಡ ಅರವಿಂದ ಕುಲಕರ್ಣಿ, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ, ಭೀಮ್ ಆರ್ಮಿ ಸಂಘಟನೆ ಮುಖಂಡೆ ಸುಮಿತ್ರಾ ಹೊಸಮನಿ, ದಲಿತ ಸಂಘರ್ಷ ಸಮಿತಿ, ಪ್ರಗತಿಪರ ಸಂಘಟನೆಗಳ ವೇದಿಕೆ, ಎಐಯುಟಿಯುಸಿ, ಸಿಐಟಿಯು, ಹಮಾಲರ ಸಂಘ, ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್, ಜನವಾದಿ ಮಹಿಳಾ ಸಂಘಟನೆ, ಆಶಾ ಸಂಘಟನೆ ಹಾಸ್ಟೆಲ್ ಕಾರ್ಯಕರ್ತೆಯರ ಸಂಘಟನೆ, ನಿವೇಶನ ರಹಿತರ ಹೋರಾಟ ಸಮತಿ, ನಮ್ಮ ಚಾಲಕರ ಟ್ರೇಡ್ ಯೂನಿಯನ್ ಸೇರಿ ಹಲವಾರು ಸಂಘಟನೆಗಳು ಹೋರಾಟದಲ್ಲಿ ಪಾಲ್ಗೊಂಡಿದ್ದವು.

    ಕರವೇ ಕಾರ್ಯಕರ್ತರ ಪ್ರತಿಭಟನೆ

    ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ (1961)ಗೆ ತಿದ್ದುಪಡಿ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಸೇರಿ ರಾಜ್ಯ ಸರ್ಕಾರ ವಿವಿಧ ರೈತ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ ಎಂದು ಆರೋಪಿಸಿ ವಿವಿಧ ಕನ್ನಡಪರ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೋಮವಾರ ಸರಣಿ ಪ್ರತಿಭಟನೆ ನಡೆಸಿದರು.

    ಕರವೇ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಮಾತನಾಡಿದರು. ಮಹಾದೇವ ರಾವಜಿ, ದಸ್ತಗೀರ ಸಾಲೋಟಗಿ, ಯಾಜ ಕಲಾದಗಿ, ದಯಾನಂದ ಸಾವಳಗಿ, ರಜಾಕ ಕಾಖಂಡಕಿ, ಗಿರೀಶ ಕುಲಕರ್ಣಿ, ಮನೋಹರ ತಾಜೋವ, ಸುಲ್ತಾನ್ಸಾಬ್ ಅಗಸಿಮನಿ, ವಿಶ್ವನಾಥ ತಡಲಗಿ, ಹಾಜಿಮಲ್ಲಂಗ ಬಡೇಗರ, ಎಲ್.ಎಂ. ಬಿರಾದಾರ, ಪಿದಾ ಕಲಾದಗಿ, ತಾಜುದ್ದೀನ ಖಲೀಪಾ ಪಾಲ್ಗೊಂಡಿದ್ದರು.

    ಜೆಡಿಎಸ್‌ನಿಂದ ರಾಜ್ಯಪಾಲರಿಗೆ ಮನವಿ

    ಭೂ ಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆದುಕೊಳ್ಳುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಜಿಲ್ಲಾಡಳಿತದ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

    ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಕರ್ನಾಟಕ ಭೂ ಸುಧಾರಣೆ ನೆಪದಲ್ಲಿ ರಾಜ್ಯಸರ್ಕಾರ ಭೂ ಮಾಫಿಯಾಕ್ಕೆ ಅನುಕೂಲ ಮಾಡುವುದಕ್ಕೆ ಮುಂದಾಗಿದೆ ಎಂದರು. ಎಸ್.ಎಸ್. ಖಾದ್ರಿ ಇನಾಮದಾರ. ಯಾಕುಬ್ ಕೊಪರ, ಎಂ.ಕೆ. ಬಾಗಾಯತ, ಅರವಿಂದ ಹಂಗರಗಿ, ರಾಜು ಹಿಪ್ಪರಗಿ, ಅಜೀಜ್ ಕತ್ನಾಳ, ವಿನಾಯಕ ಶಹಾಪೇಟ, ಸಾಜೀದ ರಿಸಾಲದಾರ, ಇಜಾಜಅಹ್ಮದ್ ಮುಕಬಿಲ್, ಚಂದ್ರಕಾಂತ ತಾರನಾಳ, ಎಸ್.ಸಿ. ಮುಲ್ಲಾ, ದಸ್ತಗಿರ ಸಾಲೋಟಗಿ, ಬಸು ಕೊಪ್ಪ ಶಿವ ಕುಂಬಾರ, ಸುಶೀಲಕುಮಾರ, ಸುಭಾಸ ನಾವಲೆ, ಅನ್ವರ ಮಕಾನದಾರ ಮತ್ತಿತರರು ಪಾಲ್ಗೊಂಡಿದ್ದರು.

    ಎತ್ತಿನ ಬಂಡಿ ಮೂಲಕ ಪ್ರತಿಭಟನೆ

    ಸರ್ಕಾರದ ನೀತಿ ಖಂಡಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಗಾಂಧಿಚೌಕ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಎತ್ತಿನ ಬಂಡಿ ಮೂಲಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
    ಸಂಘಟನೆ ಜಿಲ್ಲಾಧ್ಯಕ್ಷ ಶಕ್ತಿಕುಮಾರ ಉಕುಮನಾಳ ಮಾತನಾಡಿದರು.

    ಮುಖಂಡರಾದ ರಾಹುಲ ಕುಬಕಡ್ಡಿ, ಚಂದ್ರಗೌಡ ಪಾಟೀಲ, ಬಾಳಾಸಾಹೇಬ ಇಂಡಿ, ಜಿತೇಂದ್ರ ಕಾಂಬಳೆ, ಸಿದ್ದಣ್ಣ ಹಿಟ್ನಳ್ಳಿ, ಎಸ್.ಎಸ್. ಪಾಟೀಲ, ಚಂದ್ರಶೇಖರ ಕುಮಟಳ್ಳಿ, ಗಂಗಾಧರ ಪಾಟೀಲ, ಶಿವು ಕಂಬಾರ, ಲಕ್ಷ್ಮ್ಮಣ ಹಿರೇಮಠ, ಮಹೇಶ ಆಲೂರ, ಅಂಬಣ್ಣ ನಾಟೀಕಾರ, ಸಾಹೇಬಗೌಡ ಬಿರಾದಾರ, ಡಾ.ಎಂ.ಆರ್. ಗುರಿಕಾರ, ಮಹಾದೇವಿ ತಳಕೇರಿ, ಆಶಾ ಬಾಗವಾನ, ರಮೇಶ ವಾಲೀಕಾರ ಮತ್ತಿತರರಿದ್ದರು.

    ಕಾಂಗ್ರೆಸ್ ಕಾರ್ಯಕರ್ತರಿಂದ ಆಕ್ರೋಶ

    ಎಪಿಎಂಸಿ ಹಾಗೂ ಭೂ ಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ಮಸೂದೆಗಳನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಕಾಂಗ್ರೆಸ್ ಮುಖಂಡ ಅಬ್ದುಲ ಹಮೀದ ಮುಶ್ರೀಫ್ ಮಾತನಾಡಿ, ದೇವರಾಜ ಅರಸು ಅವರು ಬಡ ರೈತರಿಗಾಗಿ ‘ಉಳುವವನೇ ಭೂ ಒಡೆಯ’ ಎಂದು ಘೋಷಿಸಿ ಬಡ ಅನ್ನದಾತನಿಗೆ ಆಸರೆ ಮಾಡಿ ಕೊಟ್ಟಿದ್ದರು. ಆದರೆ, ಬಿಜೆಪಿ ಸರ್ಕಾರ ಬಡ ರೈತರ ಹೊಟ್ಟೆ ಮೇಲೆ ಕಾಲಿಡಲು ಹೊರಟಿರುವುದು ದುರಾದೃಷ್ಠಕರವಾಗಿದೆ ಎಂದರು.

    ಮುಖಂಡರಾದ ಬಿ.ಎಸ್. ಪಾಟೀಲ(ಯಾಳಗಿ), ಅಬ್ದುಲಖಾದರ ಖಾದೀಂ, ವಿದ್ಯಾರಾಣಿ ತುಂಗಳ, ಡಿ.ಎಚ್. ಕಲಾಲ, ಚಾಂದಸಾಬ ಗಡಗಲಾವ, ಮಹಮ್ಮದರಫೀಕ್ ಟಪಾಲ, ಸಿದ್ದನಗೌಡ ಪಾಟೀಲ, ಜಮೀರ್ ಅಹ್ಮದ ಬಕ್ಷಿ, ಆರತಿ ಶಹಾಪುರ, ಶಾಹಜಾನ ದುಂಡಸಿ, ಚಂದ್ರಶೇಖರ ದೇವರಡ್ಡಿ, ವಿಜಯಕುಮಾರ ಘಾಟಗೆ, ಶಬ್ಬೀರ್ ಜಾಗೀರದಾರ, ವಸಂತ ಹೊನಮೊಡೆ, ಹಾಜಿಲಾಲ ದಳವಾಯಿ, ಇಲಿಯಾಸ್ ಸಿದ್ದಕಿ, ಮಂಜುಳಾ ಜಾಧವ ಇತರರು ಪಾಲ್ಗೊಂಡಿದ್ದರು.

    ರೈತರ ಬೆಂಬಲಕ್ಕೆ ನಿಂತ ಸಂಘಟನೆಗಳು
    ರೈತರ ಬೆಂಬಲಕ್ಕೆ ನಿಂತ ಸಂಘಟನೆಗಳು
    
    
    ರೈತರ ಬೆಂಬಲಕ್ಕೆ ನಿಂತ ಸಂಘಟನೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts