More

    ಕನ್ನಡ ಅಭಿವೃದ್ಧಿ ನಿಗಮ ಸ್ಥಾಪಿಸಿ

    ವಿಜಯಪುರ : ಕನ್ನಡ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಮ್ಮ ಬಣ) ಕಾರ್ಯಕರ್ತರು ಜಿಲ್ಲಾಡಳಿತ ಮೂಲಕ ಮಂಗಳವಾರ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

    ಜಿಲ್ಲಾಧ್ಯಕ್ಷ ಶೇಷರಾವ ಮಾನೆ ಮಾತನಾಡಿ, ಕರ್ನಾಟಕ ಸರ್ಕಾರ ತನ್ನ ರಾಜ್ಯದ ಗಡಿಯಲ್ಲಿರುವ ಬೆಳಗಾವಿ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡಿದ ಮಾದರಿಯಲ್ಲಿ ಮರಾಠಾ ನಿಗಮ ಸ್ಥಾಪನೆ ಮಾಡಲಾಗಿದೆ. ಅದರಂತೆ ಕನ್ನಡಿಗರ ಅಭಿವೃದ್ಧಿಗಾಗಿ ಮಹಾರಾಷ್ಟ್ರದಲ್ಲಿ ಕನ್ನಡ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

    ಮಹಾರಾಷ್ಟ್ರದ ಮುಂಬೈ ಮಹಾನಗರದ ಅಂಬರನಾಥ, ಡೊಂಬಿವಲಿ, ಠಾಣೆ, ವಾರ್ಸಿ, ಬಾಂದ್ರಾನಗರ, ಗೊರೆಗಾಂವ, ಬೋರಿವಲಿ, ಮಲ್ಲಾಡ, ಕೊಲ್ಹಾಪುರ, ಸೊಲ್ಹಾಪುರ ಭಾಗದಲ್ಲಿ ಕರ್ನಾಟಕದ ಕನ್ನಡಿಗರು ವಾಸಿಸುತ್ತಿದ್ದಾರೆ.

    ಕರ್ನಾಟಕದಿಂದ ಗುಳೆ ಹೋಗಿ ಆರ್ಥಿಕ ಭದ್ರತೆಗಾಗಿ ಹಗಲಿರುಳು ದುಡಿದರೂ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.

    ಮಹಾರಾಷ್ಟ್ರದ ಕೊಳಚೆ ಪ್ರದೇಶದಲ್ಲಿ ವಾಸಿಸುವ ಕನ್ನಡಿಗರ ಬದುಕು ಚಿಂತಾಜನಕ ಸ್ಥಿತಿಯಲ್ಲಿದೆ. ಭಾಷಾವಾರು ಸಂಖ್ಯೆ ಆಧಾರದ ಮೇಲೆ ಸ್ಥಾಪಿತವಾಗಬೇಕಿದ್ದ ಕನ್ನಡ ಅಭಿವೃದ್ಧಿ ನಿಗಮವು ಇಂದಿಗೂ ಸ್ಥಾಪಿತಗೊಳ್ಳದೆ ಇರುವುದು ಸಂವಿಧಾನ ಬದ್ಧ ಹಕ್ಕನ್ನು ಕಸಿದುಕೊಂಡಂತಾಗಿದೆ. ಅಲ್ಲಿನ ಸರ್ಕಾರ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿರುವುದು ಸಂವಿಧಾನ ಬದ್ಧ ಅಪರಾಧವಾಗಿದೆ. ತೀವ್ರಗತಿಯಲ್ಲಿ ಮಹಾರಾಷ್ಟ್ರ ಸರ್ಕಾರವು ಕನ್ನಡಿಗರ ಸಮೀಕ್ಷೆ ಮಾಡಿ ಕೂಡಲೇ ಅವರ ಹಕ್ಕನ್ನು ಅವರಿಗೆ ದೊರಕಿಸಬೇಕು ಎಂದು ಆಗ್ರಹಿಸಿದರು.

    ಕರವೇ ಜಿಲ್ಲಾ ಗೌರವಾಧ್ಯಕ್ಷ ವಸಂತರಾವ ಕೊರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬನ್ನಟ್ಟಿ, ಜಿಲ್ಲಾ ಸಂಚಾಲಕ ಗುರುರಾಜ ಪಂಚಾಳ, ಮುಖಂಡರಾದ ಭೀಮಾಶಂಕರಯ್ಯ ವಿರಕ್ತಮಠ, ವಸಂತರಾವ ಕುಲಕರ್ಣಿ, ಎಂ.ಪಿ. ಸುಲ್ತಾನಪುರ, ಭೀಮಪ್ಪ ಬಶೆಟ್ಟಿ, ಯುಸ್ು ಗುಲಬರ್ಗಾ, ಹಣಮಂತ ಲಕ್ಷಾನಟ್ಟಿ, ಸಲೀಂ ಮಮದಾಪುರ, ಬಾಬು ಲಮಾಣಿ, ಅಶೋಕ ನಂದ್ಯಾಳ, ಎಂ.ಎಸ್. ಜಹಾಗೀರದಾರ, ಲಾಲಸಾಬ ಚಟ್ಟರಕಿ, ಆನಂದ ಸಾಗರ, ಪ್ರಕಾಶ ನಡುವಿನಕೇರಿ, ಜೆ.ಎಸ್. ಜಹಾಗೀರದಾರ, ಪ್ರೇಮಾ ದೊಡ್ಡಮನಿ ಮತ್ತಿತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts