More

    ಸಮಾಜದ ಸಮಗ್ರ ಅಭಿವೃದ್ಧಿ ನಮ್ಮ ಗುರಿ

    ವಿಜಯಪುರ: ರಾಜ್ಯದಲ್ಲಿ ಪಂಚಮಸಾಲಿ ಸಮಾಜವೂ ಜನಸಂಖ್ಯೆ ದೃಷ್ಟಿಯಿಂದ ಬಲಾಢ್ಯವಿದ್ದರೂ ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿದೆ. ಸಮಾಜದ ಸಮಗ್ರ ಅಭಿವೃದ್ಧಿ ನಮ್ಮ ಗುರಿ ಆಗಿದೆ ಎಂದು ಅಖಿಲ ಭಾರತ ಪಂಚಮಸಾಲಿ ಮಹಾಸಭಾ ರಾಜ್ಯಾಧ್ಯಕ್ಷ ಸೋಮಶೇಖರ ಆಲ್ಯಾಳ ಹೇಳಿದರು.

    ನಗರದ ಅನಂತಲಕ್ಷ್ಮಿ ಮಂಗಲ ಕಾರ್ಯಾಲಯದಲ್ಲಿ ಸೋಮವಾರ ನಡೆದ ಪಂಚಮಸಾಲಿ ಮಹಾಸಭಾ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

    ಕೃಷಿಯನ್ನೇ ಕುಲ ಕಸುಬು ಮಾಡಿಕೊಂಡು ಬದುಕುತ್ತಿರುವ ನಮ್ಮ ಸಮುದಾಯದಲ್ಲಿ ಶೇ.90ರಷ್ಟು ಆರ್ಥಿಕವಾಗಿ ಬಡವರಿದ್ದಾರೆ. ಯುವಕರು ಮೀಸಲಾತಿ ಇಲ್ಲದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ನಾಡಿನ ಹಲವು ಪ್ರಜ್ಞಾವಂತರ, ಹಿರಿಯರ ಸಲಹೆ, ಸೂಚನೆ, ಮಾರ್ಗದರ್ಶನ ಪಡೆದು ಪಂಚಮಸಾಲಿ ಮಹಾಸಭಾವನ್ನು ಹುಟ್ಟು ಹಾಕಲಾಗಿದೆ. ಜನಪರ ಕಾಳಜಿ, ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಹೋರಾಡಲು ಗ್ರಾಮಮಟ್ಟದಿಂದ ರಾಜ್ಯಮಟ್ಟದವರೆಗೆ ಸಂಘಟನೆಯನ್ನು ಬಲಪಡಿಸಲಾಗುತ್ತಿದ್ದು ಸಮಾಜದ ಬಾಂಧವರು ಸಹಕರಿಸಬೇಕೆಂದು ತಿಳಿಸಿದರು.

    ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಸುವರ್ಣಲತಾ ಗದಿಗೆಪ್ಪಗೌಡರ ಮಾತನಾಡಿ, ಸಮಾಜದ ಮಹಿಳೆಯರ, ಮಕ್ಕಳ ಏಳಿಗೆಗಾಗಿ ಶ್ರಮಿಸಲು ಸಂಘಟನೆ ವಿನೂತನ ಯೋಜನೆಗಳೊಂದಿಗೆ ಹೋರಾಟ ನಡೆಸಲು ಮುಂದಾಗಿದ್ದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

    ಮಹಾಸಭಾದ ರಾಜ್ಯ ಮಹಿಳಾ ಕಾರ್ಯದರ್ಶಿ ಲತಾ ಬಿರಾದಾರ ಮಾತನಾಡಿ, ರಾಜ್ಯದಲ್ಲಿ ಮಠ-ಮಾನ್ಯಗಳು, ಸಂಘ-ಸಂಸ್ಥೆಗಳು ತಮ್ಮದೇ ಆದಂತಹ ನಿಟ್ಟಿನಲ್ಲಿ ಒಳ್ಳೆಯ ಕಾರ್ಯ ನಿರ್ವಹಿಸುತ್ತಿದ್ದು, ಮಹಾಸಭೆಯು ಎಲ್ಲರ ಸಹಕಾರದೊಂದಿಗೆ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಲಿದೆ. ಎಲ್ಲರೂ ಕೈಜೋಡಿಸಬೇಕೆಂದರು.

    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಆರ್. ಎಸ್. ಬಿರಾದಾರ ಮಾತನಾಡಿದರು. ರಾಜ್ಯ ಸಲಹಾ ಸಮಿತಿ ಸದಸ್ಯ ಸಂಜಯ್ ಅವಟಿ, ಬಿ.ಜಿ.ಬಿರಾದಾರ, ಚನ್ನಬಸವನಗೌಡ ಪಾಟೀಲ, ಸಂಗಮೇಶ ಚಿಂಚೋಳಿ, ಸಿದ್ದನಗೌಡ ಪಾಟೀಲ, ಮಹಾನಂದಾ ಶಿಳಿನ(ಗುಡದಿನ್ನಿ), ಪೂರ್ಣಿಮಾ ಕಕಮರಿ, ದಾನೇಶ ಅವಟಿ, ನೀಲಾಂಬಿಕಾ ಪಾಟೀಲ, ಎಸ್.ಎಸ್. ನಿಡೋಣಿ, ನಿಂಗಪ್ಪ ಸಂಗಾಪುರ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts