More

    ಕೃಷಿ ಮೇಳದ ಆಕರ್ಷಣೆ ‘ಡ್ರೋನ್’

    ವಿಜಯಪುರ: ಕೃಷಿಯಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳ ಬಳಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಕೃಷಿ ಮೇಳದಲ್ಲಿ ‘ಡ್ರೋನ್’ ಆಕರ್ಷಣೆಯ ಸಾಧನವಾಗಿತ್ತು.
    ರಾಯಚೂರು ಕೃಷಿ ತಾಂತ್ರಿಕ ವಿವಿ ವಿದ್ಯಾರ್ಥಿಗಳ ತಂಡ ಔಷಧ ಸಿಂಪರಣೆಗಾಗಿ ವಿಶೇಷ ಡ್ರೋನ್ ಸಾಧನವನ್ನು ಅಭಿವೃದ್ಧಿ ಪಡಿಸಿದೆ. ಸದ್ಯ ಪ್ರಾಯೋಗಿಕವಾಗಿ ಬಳಸಲಾಗುತ್ತಿದ್ದು, ಶೀಘ್ರದಲ್ಲಿ ಅದಕ್ಕೆ ಪರವಾನಗಿ ಸಿಗುವ ಸಾಧ್ಯತೆ ಇದೆ ಎನ್ನುತ್ತಾರೆ ತಂತ್ರಜ್ಞರು.
    ಏನಿದರ ವಿಶೇಷತೆ?
    ಭತ್ತದ ಗದ್ದೆ, ಲಿಂಬೆ ಮೊದಲಾದ ಬೆಳೆಗಳ ಅಂಚಿನವರೆಗೆ ಹೋಗಿ ಔಷಧ ಸಿಂಪಡಣೆ ಮಾಡಲು ಈ ಡ್ರೋನ್ ಸಹಕಾರಿಯಾಗಿದೆ. ಈ ಸಾಧನ ಬಳಕೆಯಿಂದ ಕ್ರಿಮಿನಾಶಕದಿಂದ ದೇಹದ ಮೇಲಾಗುವ ಪರಿಣಾಮ ಸಹ ತಪ್ಪಿಸಬಹುದಾಗಿದೆ. ಅಲ್ಲದೆ, ಅತ್ಯಂತ ಕಡಿಮೆ ಸಮಯ, ಕಡಿಮೆ ಮಾನವಸಂಪನ್ಮೂಲ ಹಾಗೂ ಕಡಿಮೆ ಔಷಧ ಬಳಕೆ ಮೂಲಕ ಹೆಚ್ಚಿನ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗಲಿದೆ.
    ತಂತ್ರಜ್ಞಾನದ ವಿವರ:
    500 ಮೀಟರ್ ಎತ್ತರವರೆಗೆ ಹಾರಾಟ ಸಾಮರ್ಥ್ಯ ಹೊಂದಿರುವ ಡ್ರೋನ್ ಬೆಲೆ 19 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ನಾಲ್ಕು ಬ್ಯಾಟರಿಗಳನ್ನು ಉಪಯೋಗಿಸಿ 4-5 ಎಕರೆವರೆಗೆ ಔಷಧ ಸಿಂಪರಣೆ ಮಾಡಬಹುದು. ಮೊದಲು ಜಮೀನಿನ ಮ್ಯಾಪಿಂಗ್ ಮಾಡಿ ಗಣಕಯಂತ್ರದ ಸಹಾಯದಿಂದ ಸೂಕ್ತ ನಿರ್ದೇಶನ ನೀಡಿದರೆ ಸಾಕು ಅಚ್ಚುಕಟ್ಟಾಗಿ ಔಷಧ ಸಿಂಪರಣೆ ಮಾಡುತ್ತದೆ. ಅಲ್ಲದೆ, ಬೆಳೆ ಇಲ್ಲದ ಕಡೆ ತನ್ನಿಂತಾನೆ ಔಷಧ ಸಿಂಪರಣೆ ಸ್ಥಗಿತಗೊಳಿಸುವುದು ಈ ಸಾಧನದ ವಿಶೇಷತೆಯಾಗಿದೆ. ಮೂರು ಮೀಟರ್ ಅಗಲದ ವಿಂಗ್‌ಗಳಿದ್ದು, ಬೆಳೆ ಸಾಲಿಗನುಗುಣವಾಗಿ ಸರಿಪಡಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಸಹಾಯಕ ಪ್ರಾಧ್ಯಾಪಕ ಮುರುಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts