More

    ಕರೊನಾ ನಿಯಂತ್ರಣಕ್ಕೆ ಸರ್ವರೂ ಶ್ರಮಿಸೋಣ

    ವಿಜಯಪುರ: ಕರೊನಾ ಮಹಾಮಾರಿ ಇಡೀ ಜಗತ್ತಿಗೆ ಆವರಿಸಿದ್ದು, ಜನ ತಲ್ಲಣಗೊಂಡಿದ್ದಾರೆ. ರಾಜ್ಯದಲ್ಲಿ ಕೆಪಿಸಿಸಿ ನಿರ್ದೇಶನದ ಮೇರೆಗೆ ಆರೋಗ್ಯ ಹಸ್ತ ಕಾರ್ಯಕ್ರಮ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಅವರಿಗೆ ಸಹಾಯ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರೀಫ್ ಹೇಳಿದರು.
    ನಗರದ ವಾರ್ಡ್ ನಂ.9, 21 ಹಾಗೂ ವಾರ್ಡ್ ನಂ.29ರಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
    ಕರೊನಾ ಮಹಾಮಾರಿ ತಡೆಯಲು ಸರ್ವರೂ ಶ್ರಮಿಸೋಣ. ರೋಗದ ಬಗ್ಗೆ ಜಾಗೃತಿ ಮೂಡಿಸೋಣ. ಸಾಧ್ಯವಾದಷ್ಟು ಪರಸ್ಪರ ಅಂತರ ಕಾಯ್ದುಕೊಳ್ಳೋಣ. ಆ ಮೂಲಕ ಸರ್ವರೂ ಆರೋಗ್ಯವಂತರಾಗಿ ಬಾಳೋಣ ಎಂದರು.
    ಕರೊನಾ ಮಹಾಮಾರಿ ಮಾನವ ಜಗತ್ತಿಗೆ ಒಂದು ಕಂಟಕವಾಗಿದೆ. ಹಾಗಂತ ತೀರ ಭಯಪಡಬೇಕಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಮುನ್ನೆಚ್ಚರಿಕೆ ವಹಿಸಿದರೆ ಸಾಕು. ರೋಗದ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ಧೈರ್ಯ ಕಳೆದುಕೊಳ್ಳಬಾರದು ಎಂದರು.
    ಕೇಂದ್ರ ಸರ್ಕಾರ ಕರೊನಾ ನಿಯಂತ್ರಿಸುವಲ್ಲಿ ವಿಫಲವಾಗಿದೆ. ರಾಜ್ಯ ಸರ್ಕಾರವಂತೂ ಜನರ ಹಿತ ಮರೆತಿದೆ. ಪರಿಣಾಮ ದಿನೇ ದಿನೆ ಕರೊನಾ ಸೋಂಕು ಹೆಚ್ಚುತ್ತಲೇ ಇದೆ. ಹೀಗಾಗಿ ಕಾಂಗ್ರೆಸ್ ಜನರ ಮನೆ ಬಾಗಿಲಿಗೆ ತೆರಳಿ ಜಾಗೃತಿ ಮೂಡಿಸಲು ಮುಂದಾಗಿದೆ ಎಂದರು.
    ಮುಖಂಡ ಮಹ್ಮದ್‌ರಫೀಕ್ ಟಪಾಲ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರಕ್ಕೆ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕಾಂಗ್ರೆಸ್ ಪಕ್ಷ ಜನರ ಸಹಾಯಕ್ಕಾಗಿ ಧಾವಿಸಿ ಲಾಕ್‌ಡೌನ್ ಸಮಯದಲ್ಲಿ ಆಹಾರ ವಿತರಣೆಯಿಂದ ಹಿಡಿದು ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜನರ ಆರೋಗ್ಯ ಕಾಪಾಡುವಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಾ ಬಂದಿದೆ. ನಮಗೆ ಜನರ ಹಿತ ಮುಖ್ಯ ಎಂದರು.
    ಮುಖಂಡರಾದ ಅಬ್ದುಲ್ ರಜಾಕ್ ಹೋರ್ತಿ, ಸಜ್ಜಾದೆಪೀರಾ ಮುಶ್ರೀಫ್, ಸುನೀತಾ ಐಹೊಳೆ, ಚಾಂದಸಾಬ ಗಡಗಲಾವ, ಜಮೀರ್‌ಅಹ್ಮದ್ ಬಕ್ಷಿ, ಆರತಿ ಶಹಾಪೂರ, ಅಬ್ದುಲ್‌ಖಾದರ್ ಖಾದೀಮ್, ಮೈನುದ್ದೀನ ಬೀಳಗಿ, ಜಮೀರ್‌ಅಹ್ಮದ್ ಬಾಂಗಿ, ಇದ್ರೂಷ್ ಬಕ್ಷಿ, ಶರಣಪ್ಪ ಯಕ್ಕುಂಡಿ, ವಸಂತ ಹೊನಮೊಡೆ, ಶಬ್ಬೀರ ಜಾಗೀರದಾರ, ಜಯಶ್ರೀ ಭಾರತೆ, ದಾವಲಸಾಬ ಬಾಗವಾನ, ರವೀಂದ್ರ ಜಾಧವ, ಧನರಾಜ ಎ., ಸವಿತಾ ಧನರಾಜ, ನಾಸೀರ ನಾಗರಬಾವಡಿ, ತಾಜುದ್ದೀನ ಖಲೀಪ, ಹೈದರ್ ನಧಾಪ್, ಅಸೀಮಾ ಕಾಲೇಬಾಗ, ಮಂಜುಳಾ ಜಾಧವ, ಶಮೀಮ ಅಕ್ಕಲಕೋಟ ಮತ್ತಿತರರಿದ್ದರು.

    ಕರೊನಾ ನಿಯಂತ್ರಣಕ್ಕೆ ಸರ್ವರೂ ಶ್ರಮಿಸೋಣ
    ಕರೊನಾ ನಿಯಂತ್ರಣಕ್ಕೆ ಸರ್ವರೂ ಶ್ರಮಿಸೋಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts