More

    ಸರಳವಾಗಿ ಕ್ರಿಸ್‌ಮಸ್ ಆಚರಣೆ

    ವಿಜಯಪುರ: ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸರಳವಾಗಿ ಕ್ರಿಸ್‌ಮಸ್ ಆಚರಿಸಲಾಯಿತು.
    ನಗರದ ಗಾಂಧಿಚೌಕ್‌ನಲ್ಲಿರುವ ಸಂತ ಅನ್ನಮ್ಮ ಚರ್ಚ್, ಕೇಂದ್ರ ಬಸ್ ನಿಲ್ದಾಣ ಬಳಿ ಇರುವ ಸಿಎಸ್‌ಐ ಚರ್ಚ್, ಸಕಾರೋಜಾ ಬಳಿ ಇರುವ ಮ್ಯಾಥೂಸ್ ಚರ್ಚ್‌ನಲ್ಲಿ ಕ್ರೈಸ್ತ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಂತ ಅನ್ನಮ್ಮ ಚರ್ಚ್‌ನಲ್ಲಿ ಾದರ್ ಜಾನ್ ಯೇಸುವಿನ ಬಗ್ಗೆ ಸಂದೇಶವನ್ನು ತಿಳಿಸಿದರು.
    ಸಮಾಜದ ಬಾಂಧವರು ತಮ್ಮ ಮನೆಯಲ್ಲಿ ಬಾಲ ಯೇಸುವನ್ನು ಪ್ರತಿಷ್ಠಾಪಿಸಿ ವಿಶೇಷವಾಗಿ ಹಬ್ಬ ಆಚರಿಸಿದರು. ಬೆಳಗ್ಗೆ ಮತ್ತು ರಾತ್ರಿ ಸಾಮೂಹಿಕ ಪ್ರಾರ್ಥನೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು. ಹಬ್ಬದ ಹಿನ್ನೆಲೆಯಲ್ಲಿ ಚರ್ಚ್‌ಗಳನ್ನು ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಚರ್ಚ್ ಆವರಣದಲ್ಲಿ ರೂಪಿಸಿದ ಗೋದಲಿ ಎಲ್ಲರ ಗಮನ ಸೆಳೆಯಿತು.

    ಒಳ್ಳೆಯ ಗುಣಗಳನ್ನು ಸ್ವೀಕರಿಸಿ

    ಶರಣಪಡೆ ಲಿಂಗಾಯತ ಜಾಗರಣ ವೇದಿಕೆ ವತಿಯಿಂದ ವಿಜಯಪುರ ನಗರದ ಮದ್ದಿನ ಖಣಿ ಹತ್ತಿರ ಕ್ರಿಸ್‌ಮಸ್ ಆಚರಿಸಲಾಯಿತು. ಈ ವೇಳೆ ವೇದಿಕೆ ಅಧ್ಯಕ್ಷ ಕೆ.ಆರ್. ಕಡೆಚೂರ ಮಾತನಾಡಿ, ಎಲ್ಲ ಧರ್ಮದ ಬಗ್ಗೆ ಸಹಿಷ್ಣುತೆಯಿಂದ ನಡೆದುಕೊಳ್ಳಬೇಕು. ಎಲ್ಲಾ ಧರ್ಮ ಸ್ಥಾಪಕರ ಒಳ್ಳೆಯ ತತ್ವಗಳನ್ನು ಸ್ವೀಕರಿಸುವ ಗುಣ ಇರಬೇಕು. ಯೇಸುಕ್ರಿಸ್ತ ಬೋಧಿಸಿದ ಔದಾರ್ಯತೆ, ದಯೆ, ಕರುಣೆ, ಅನುಕಂಪ, ಸಹನೆ, ಕ್ಷಮಾಗುಣ, ಸಹೋದರತೆ ಮುಂತಾದ ಸದ್ಗುಣಗಳನ್ನು ನಾವು ಸ್ವೀಕರಿಸಬೇಕು ಎಂದರು. ಮುಖಂಡರಾದ ರಮೇಶ ಸಾವಳಗಿ, ಮನೋಜರೆಡ್ಡಿ, ಮಿನಾಕ್ಷಿ ಶೆಟ್ಟರ್ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts