More

    ರಾಜಕೀಯಕ್ಕೆ ಗಣೇಶೋತ್ಸವ ಬಳಸಬೇಡಿ

    ವಿಜಯಪುರ: ಧಾರ್ಮಿಕ ಆಚರಣೆಗಳನ್ನು ವೈಯಕ್ತಿಕ ರಾಜಕಾರಣಕ್ಕೆ ಬಳಸಿಕೊಳ್ಳಬಾರದು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.
    ನಗರದ ಅದೃಷ್ಟಲಕ್ಷ್ಮಿ ದೇವಸ್ಥಾನ ಸಭಾಂಗಣದಲ್ಲಿ ಮಂಗಳವಾರ ನಡೆದ ಗಜಾನನ ಮಹಾಮಂಡಳ ಸಭೆಯಲ್ಲಿ ಅವರು ಮಾತನಾಡಿ, ನಾನು ಎಂದಿಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕರಣ ಮಾಡಲು ಹೋಗಿಲ್ಲ, ಹೋಗುವುದೂ ಇಲ್ಲ ಎಂದರು.ಗಜಾನನ ಮಹಾಮಂಡಳ ಅರ್ಥಪೂರ್ಣವಾಗಿ ಉತ್ಸವ ಆಯೋಜಿಸುತ್ತ ಬಂದಿದೆ. ಶಿಸ್ತುಬದ್ಧವಾಗಿ ಮೆರವಣಿಗೆ ಮಾಡುವ ಗಜಾನನ ಉತ್ಸವ ಮಂಡಳಿಗಳಿಗೆ ಬಹುಮಾನ, ಪುಣೆಯ ಗಣಪತಿ ಹಬ್ಬದ ದರ್ಶನ ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿಯೂ ಅನೇಕ ಅರ್ಥಪೂರ್ಣ ಕಾರ್ಯ ಕೈಗೊಳ್ಳಲಾಗುವುದು ಎಂದರು.

    ಕರೊನಾದಿಂದ ಎರಡು ವರ್ಷಗಳ ಕಾಲ ಗಜಾನನೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಆದರೆ, ಈ ಬಾರಿ ವಿಜೃಂಭಣೆಯಿಂದ ಆಚರಿಸೋಣ. ಯಾವುದೇ ಕಾರಣಕ್ಕೆ ಗಣೇಶ ಉತ್ಸವದಲ್ಲಿ ರಾಜಕೀಯ ಬೆರೆಸುವುದು ಬೇಡ ಎಂದರು.

    ನಾನು ಶಾಸಕ ಆಗುವ ಮುಂಚೆಯೇ ನಗರದ ಸಾಕಷ್ಟು ಮಂಡಳಿಗಳಿಗೆ ಸಹಾಯಧನ ಕೊಡುತ್ತ ಬಂದಿದ್ದೇನೆ. ಆದರೆ ಈಗ ಚುನಾವಣೆ ಬಂದಿದೆ ಎಂದು ಅರಿತು ಮಂಡಳಿಗಳಿಗೆ ದುಡ್ಡು ಕೊಟ್ಟು ಅವರನ್ನು ದಾರಿ ತಪ್ಪಿಸುವ ಸಲುವಾಗಿ ಕೆಲವು ವ್ಯಕ್ತಿಗಳು ನಿಮ್ಮ ಬಳಿ ಬರಲಿದ್ದಾರೆ. ಅಂಥವರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

    ಬುರಾಣಪುರ ಆರೂಢಾಶ್ರಮದ ಯೋಗೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ, ವಿಡಿಎ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ, ಪ್ರಭಾಕರ ಭೋಸ್ಲೆ, ವಿಜಯಕುಮಾರ ಕೋವಳ್ಳಿ, ಸತೀಶ ಪಾಟೀಲ, ಮಹೇಶ ಜಾಧವ, ಜಗದೀಶ ಮುಚ್ಚಂಡಿ, ಈರಣ್ಣ ಪಟ್ಟಣಶೆಟ್ಟಿ, ಸನ್ನಿ ಗವಿಮಠ, ಕಾಂತು ಶಿಂಧೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts