More

    ನಾಳೆ ರಸ್ತೆ ತಡೆದು ಪ್ರತಿಭಟನೆ

    ವಿಜಯಪುರ: ಕೇಂದ್ರ ಸರ್ಕಾರದ ದೌರ್ಜನ್ಯ ಹಾಗೂ ದಬ್ಬಾಳಿಕೆ ವಿರೋಧಿಸಿ ಮತ್ತು ಕರಾಳ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಕಿಸಾನ್ ಸಂಯುಕ್ತ ಮೋರ್ಚಾದ ಅಖಿಲ ಭಾರತ ಸಮಿತಿ ಕರೆ ಮೇರೆಗೆ ಫೆ.6 ರಂದು ರಸ್ತೆ ತಡೆ ಹಮ್ಮಿಕೊಂಡಿರುವುದಾಗಿ ರೈತ ಮುಖಂಡ ಭೀಮಶಿ ಕಲಾದಗಿ ಹೇಳಿದರು.

    ಸಿಂದಗಿ ಬೈಪಾಸ್ ಬಳಿಯ ಸೇವಾಲಾಲ್ ವೃತ್ತದಲ್ಲಿ ಅಂದು ಮಧ್ಯಾಹ್ನ 12 ರಿಂದ 3ರವರೆಗೆ ರಸ್ತೆ ತಡೆ ನಡೆಸುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಜ. 26 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕಿಸಾನ್ ಸಂಯುಕ್ತ ಸಮಿತಿಯಿಂದ ಶಾಂತಿಯುತ ರ‌್ಯಾಲಿ ನಡೆದಿತ್ತು. ಕೆಲವು ಕಡೆ ಅಹಿತಕರ ಘಟನೆ ಕಂಡು ಬಂದವು. ಆಗ ಎರಡು ತಿಂಗಳಿಂದ ರೈತರ ಹೋರಾಟದ ಕುರಿತು ಮೌನ ವಹಿಸಿದ್ದ ಮಾಧ್ಯಮಗಳು ಅರಚಾಡತೊಡಗಿದವು. ನಂತರ, ಗಲಭೆ ಮಾಡಿರುವ ದುಷ್ಕರ್ಮಿಗಳ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಾಕ್ಷಿ ಸಮೇತ ಬಹಿರಂಗವಾದ ಹಿನ್ನೆಲೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸಿವೆ ಎಂದರು.

    ಹೋರಾಟ ಹತ್ತಿಕ್ಕುವ ಯತ್ನ: ರೈತರ ಹೋರಾಟದಿಂದ ಭಯಗ್ರಸ್ಥವಾದ ಸರ್ಕಾರ ಹೋರಾಟ ಹತ್ತಿಕ್ಕುವ ಯತ್ನ ನಡೆಸಿದೆ. ಸತ್ಯವರದಿ ಮಾಡಿರುವ ಪತ್ರಕರ್ತರನ್ನು ಬಂಧಿಸಿದೆ. ಇದರಿಂದ ರೈತರ ಹೋರಾಟವನ್ನು ಬಗ್ಗು ಬಡಿಯಲು ಸಾಧ್ಯವಿಲ್ಲ. ಈ ಹೋರಾಟವು ರೈತರ ಅಳಿವು ಉಳಿವಿನ ಹೋರಾಟವಾಗಿದ್ದು, ಖಾಸಗಿ ಕಂಪನಿಗಳ ದುರಾಸೆ ವಿರುದ್ಧವಾಗಿದೆ ಎಂದರು.

    ರೈತ ಕೃಷಿ ಕಾರ್ಮಿಕ ಸಂಘಟನೆ ಮುಖಂಡ ಬಿ.ಭಗವಾನ್‌ರೆಡ್ಡಿ, ಪ್ರಕಾಶ್ ಹಿಟ್ನಳ್ಳಿ, ಅರವಿಂದ ಕುಲಕರ್ಣಿ, ಶಕ್ತಿಕುಮಾರ ಉಕುಮನಾಳ, ಸುಜಾತಾ ಶಿಂಧೆ, ಬಾಳು ಜೇವೂರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts