More

    ಔಷಧ ಅಕ್ರಮ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

    ವಿಜಯಪುರ: ಅವಧಿ ಮೀರಲಿದ್ದ ಕೆಮ್ಮಿನ ಔಷಧಿಯ (ಕಾಫ್‌ಸಿರಪ್) ದಿನಾಂಕ ತಿದ್ದಿ ಅಕ್ರಮವಾಗಿ ಮಾರಾಟಕ್ಕೆ ಮುಂದಾದ ಇಬ್ಬರನ್ನು ವಿಜಯಪುರ ಅಪರಾಧ ವಿಭಾಗದ ವಿಶೇಷ ಪೊಲೀಸರು ಬಂಧಿಸಿ ಅವರಿಂದ 4,16,696 ಲಕ್ಷ ರೂ. ಮೌಲ್ಯದ ಔಷಧಿಯನ್ನು ವಶಪಡಿಸಿಕೊಂಡಿದ್ದಾರೆ.

    ಮಹ್ಮದ್ ಸಾಧಿಕ್ ಸಿಖಂದರ ಭತಗುಣಕಿ (35), ಮಹ್ಮದ್ ಮೈನುದ್ದೀನ್ ಕೊತ್ತಲ ಬಂಧಿತರು. ನಗರದ ಪುಲಕೇಶಿ ನಗರದ ನಿರ್ಜನ ಪ್ರದೇಶದಲ್ಲಿ ಅವಧಿ ಮೀರಿದ ಔಷಧಿ ಮಾರಾಟದ ಖಚಿತ ಮಾಹಿತಿ ಮೇರೆಗೆ ಅಪರಾಧ ವಿಭಾಗದ ಸಿಪಿಐ ಸುರೇಶ ಬೆಂಡೆಗುಂಬಳ ನೇತೃತ್ವದ ತಂಡ ದಾಳಿ ನಡೆಸಿತು. ಆರೋಪಿಗಳು ಸ್ಯಾನಿಟೈಸರ್ ಬಳಸಿ ಕಾಫ್‌ಸಿರಪ್ ಬಾಟಲಿನ ಮೇಲಿನ ಅವಧಿ ದಿನಾಂಕವನ್ನು ಅಳಿಸಿ ಅಕ್ರಮವಾಗಿ ಔಷಧ ಮಾರಾಟ ಮಾಡುವುದು ಕಂಡುಬಂದಿದೆ ಎಂದು ಎಸ್‌ಪಿ ಅನುಪಮ್ ಅಗರವಾಲ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts