More

    ಐದು ಎಕರೆ ಜಮೀನು ಮಂಜೂರು ಮಾಡಿ

    ವಿಜಯಪುರ: ದೇವಸ್ಥಾನಕ್ಕೆ ಐದು ಎಕರೆ ಜಮೀನು ಮಂಜೂರು ಮಾಡಲು ಆಗ್ರಹಿಸಿ ರಿಂಗ್ ರಸ್ತೆಯ ಅಮೋಘಸಿದ್ಧೇಶ್ವರ ಪಾದಗಟ್ಟಿ ದೇವಸ್ಥಾನ ಟ್ರಸ್ಟ್‌ನಿಂದ ಬುಧವಾರ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಅವರಿಗೆ ಮನವಿ ಸಲ್ಲಿಸಲಾಯಿತು.
    ದೇವಸ್ಥಾನದ ಪೂಜಾರಿ ನೀಲಪ್ಪ ಪೂಜಾರಿ ಮಾತನಾಡಿ, ಅಮೋಘಸಿದ್ಧೇಶ್ವರ ದೇವಸ್ಥಾನಕ್ಕೆ ಅನಾದಿ ಕಾಲದಿಂದ ಪೂಜೆ ಪುನಸ್ಕಾರ ಮಾಡುತ್ತ ಬಂದಿರುತ್ತೇವೆ. ರಸ್ತೆ ಅಗಲೀಕರಣ ಹಾಗೂ ಕಲ್ಲಿನ ಕ್ವಾರಿಯಿಂದ ದೇವಸ್ಥಾನಕ್ಕೆ ಜಾಗವಿಲ್ಲದಂತಾಗಿದೆ. ಸದರಿ ದೇವಸ್ಥಾನಕ್ಕೆ ದಿನದಿನಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ವರ್ಷ ಂಡರಪುರಕ್ಕೆ ಯಾತ್ರೆ ಹೋಗುವ ಸಮಯದಲ್ಲಿ ದೇವಸ್ಥಾನದಲ್ಲಿ ಭಕ್ತರು ವಸತಿ ಹೂಡುತ್ತಾರೆ. ಹೀಗಾಗಿ ಸ್ಥಳಾವಕಾಶದ ತೊಂದರೆಯಾಗುತ್ತಿದ್ದು ಭಕ್ತಾದಿಗಳಿಗೆಗಾಗಿ ಜಮೀನು ನೀಡಬೇಕೆಂದರು.
    ಭೂತನಾಳ ಗ್ರಾಮದ ಸಿ.ಸ.ನಂ.170// ಬರುವ 29ಎಕರೆ 18 ಗುಂಟೆ ಸರ್ಕಾರಿ ಜಮೀನಿನಲ್ಲಿ 5 ಏಕರೆ ಜಮೀನವನ್ನು ಸದರಿ ದೇವಸ್ಥಾನ ಟ್ರಸ್ಟ (ರಿ) ಕಮೀಟಿಯವರಿಗೆ ನೀಡಿದರೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿದರು.
    ಮುಖಂಡರಾದ ನೀಲಪ್ಪ ಪೂಜಾರಿ, ಅದ್ಯಾಸಾಹೇಬ ಬಾಗಾಯತ, ಎಚ್.ಎಲ್. ಮಾಲಗಾಂವಿ, ಎಸ್.ವೈ. ಜ್ಯೋತಿ, ಡಾ. ಸಂಗಮೇಶ ತಳೇವಾಡ (ಪಾಟೀಲ), ಬಿ.ಬಿ. ತಳೇವಾಡ, ಬಿ.ಕೆ. ಬಿರಾದಾರ ಮತ್ತಿತರರಿದ್ದರು.

    ಐದು ಎಕರೆ ಜಮೀನು ಮಂಜೂರು ಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts