More

    ರೈತರು ತ್ವರಿತವಾಗಿ ನೋಂದಣಿ ಮಾಡಿಸಿ

    ವಿಜಯಪುರ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಬೆಳೆ ಸಾಲ ಸೌಲಭ್ಯ ಪಡೆಯಲು ಈವರೆಗೆ ನೋಂದಣಿ ಮಾಡದೆ ಇರುವ ರೈತರು ತಕ್ಷಣ ತಮ್ಮ ಸೇವಾ ವಲಯದ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
    ಯೋಜನೆಯಡಿ ಈವರೆಗೆ ಜಿಲ್ಲೆಯ 2,38,854 ರೈತರು ನೋಂದಣಿ ಮಾಡಿದ್ದಾರೆ. ಆದರೆ, ಕೆಲವರು ಕಿಸಾನ ಕ್ರೆಡಿಟ್‌ಕಾರ್ಡ್ ಪಡೆದಿಲ್ಲ. ಅಂಥವರು ಹತ್ತಿರ ಬ್ಯಾಂಕ್‌ಶಾಖೆಯನ್ನು ಸಂಪರ್ಕಿಸಿ ತಕ್ಷಣ ಬೆಳೆಸಾಲ ಸೌಲಭ್ಯ ಪಡೆಯಲು ಜಿಲ್ಲಾಧಿಕಾರಿ ತಿಳಿಸಿದರು.
    ಜಿಲ್ಲೆಯ ಎಲ್ಲ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಪಿಎಂ ಕಿಸಾನ ಲಾನುಭವಿಗಳಿಗೆ ನಿಯಮಾನುಸಾರ ಆದ್ಯತೆ ಮೇಲೆ ಬೆಳೆಸಾಲ ವಿತರಿಸಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಫೆ. 24ರ ವರೆಗೆ ಗುರಿ ಸಾಧನೆಗೆ ಸೂಚಿಸಿದ್ದು, ಜಿಲ್ಲೆಯ ಹೆಚ್ಚು-ಹೆಚ್ಚು ಲಾನುಭವಿಗಳು ಇದರ ಸದುಪಯೋಗ ಪಡೆಯುವಂತೆ ನೋಡಿಕೊಳ್ಳಲು ತಿಳಿಸಿದರು.
    ಕೇಂದ್ರ ಸರ್ಕಾರವು ಫೆ.1, 2019ರ ಆಯವ್ಯಯದಲ್ಲಿ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ೆ.24ರಂದು ದೇಶದ ರೈತರಿಗೆ ಗೋರಕ್‌ಪುರದಲ್ಲಿ ಅರ್ಪಣೆ ಮಾಡಿದ್ದು, ಈ ಯೋಜನೆ ಒಂದು ವರ್ಷ ಪೂರೈಸುತ್ತಿರುವ ಈ ಸುಸಂದರ್ಭದಲ್ಲಿ ಒಂದು ಕೋಟಿ ಕಿಸಾನ ಕ್ರೆಡಿಟ್ ಕಾರ್ಡ್‌ಗಳನ್ನು (ಬೆಳೆಸಾಲ) ಲಾನುಭವಿಗಳಿಗೆ ವಿತರಿಸಲು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ. ಯೋಜನೆಯಡಿ ದೇಶಾದ್ಯಂತ 9.22 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದು, 6.76 ಕೋಟಿ ಲಾನುಭವಿಗಳು ಕಿಸಾನ ಕ್ರೆಡಿಟ್‌ಕಾರ್ಡ್ ಪಡೆದಿದ್ದಾರೆ. ಇನ್ನೂ 2.47 ಕೋಟಿ ಲಾನುಭವಿಗಳು ಇದರ ಲಾಭ ಪಡೆಯಲು ಬಾಕಿ ಉಳಿದಿದ್ದು, ಈ ಪೈಕಿ ಜಿಲ್ಲೆಯ ಲಾನುಭವಿಗಳು ಸದುಪಯೋಗ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.
    ಜಿಪಂ ಸಿಇಒ ಗೋವಿಂದ ರೆಡ್ಡಿ, ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ಸೋಮನಗೌಡ ಐನಾಪುರ, ಎಂ.ಎನ್. ವಿದ್ಯಾಗಣೇಶ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts