More

    ರಾಷ್ಟ್ರದ ಪ್ರಗತಿಯ ಮೂಲಾಧಾರ ಜನಗಣತಿ

    ವಿಜಯಪುರ: ಭಾರತದ ಚುನಾವಣೆ ವ್ಯವಸ್ಥೆ ಹಾಗೂ ಜನಗಣತಿ ವ್ಯವಸ್ಥೆ ವಿಶ್ವದ ಗಮನ ಸೆಳೆದಿದ್ದು, ಮುಂಬರುವ ಜನಗಣತಿ ಮೂಲಕ ಗ್ರಾಮ, ಪಟ್ಟಣ ಹಾಗೂ ವಾರ್ಡ್ ಮಟ್ಟದಲ್ಲಿನ ಪ್ರಾಥಮಿಕ ಮಾಹಿತಿಯು ದೇಶದ ಪ್ರಗತಿಯ ಅತೀ ದೊಡ್ಡ ಮೂಲಾಧಾರವಾಗಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜನಗಣತಿಯ ಕುರಿತು ಫೀಲ್ಡ್ ಟ್ರೇನರ್ಸ್‌ (ಕ್ಷೇತ್ರ ಮಟ್ಟದ ತರಬೇತುದಾರರು)ಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    2021ರ ಭಾರತದ ಜನಗಣತಿ ಅಂಗವಾಗಿ ಮನೆ ಸ್ಥಿತಿ, ಸೌಲಭ್ಯಗಳು, ಸ್ವತ್ತುಗಳು, ಜನಸಂಖ್ಯಾ ಶಾಸ, ಧರ್ಮ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ, ಭಾಷೆ, ಸಾಕ್ಷರತೆ, ಶಿಕ್ಷಣ, ಆರ್ಥಿಕ ಚಟುವಟಿಕೆ, ವಲಸೆ ಮತ್ತು ಸಂತಾನೋತ್ಪತ್ತಿ ಸೇರಿದಂತೆ ಅನೇಕ ಮಾನದಂಡಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ಅತ್ಯಂತ ಮಹತ್ವದ್ದಾಗಿದೆ. ಆಧುನಿಕ ತಂತ್ರಜ್ಞಾನದ ಗರಿಷ್ಠ ಬಳಕೆ, ಜನಪರ ಯೋಜನೆಗಳನ್ನು ಯೋಜಿಸಿ, ರೂಪಿಸಿ ಅನುಷ್ಠಾನಗೊಳಿಸುವಲ್ಲಿ ನಿಖರವಾದ ಅಂಕಿ ಸಂಖ್ಯೆಗಳು ಪ್ರಧಾನ ಪಾತ್ರ ನಿರ್ವಹಿಸುವುದರಿಂದ ಯಾವುದೇ ಕಾರಣಕ್ಕೂ ನಿರ್ಲಕ್ಷೃ ತೋರದೆ ನಿಗದಿಪಡಿಸಿದ ಮಾರ್ಗಸೂಚಿಯನ್ವಯ ಮಾಹಿತಿ ಸಂಗ್ರಹಿಸಬೇಕು ಎಂದರು.
    ಪ್ರಸ್ತುತ ಜನಗಣತಿಯು ಭಾರತದ ಮೊದಲ ಡಿಜಟಲ್ ಜನಗಣತಿಯಾಗಿದೆ. ಹಿಂದಿನ ಜನಗಣತಿಗಳಿಗಿಂತ ವಿಭಿನ್ನವಾಗಿದ್ದು, ಈ ಜನಗಣತಿಯಲ್ಲಿ ಗಣತಿದಾರರು ತಮ್ಮ ಸ್ವಂತ ಮೊಬೈಲ್ ಫೋನ್ ಬಳಸಿ ಕುಟುಂಬಗಳಿಂದ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು ಪ್ರೋತ್ಸಾಹಿಸಲಾಗಿದೆ. ಜನಗಣತಿಯ ಪ್ರಥಮ ಹಂತದಲ್ಲಿ ಮನೆಪಟ್ಟಿ ಮತ್ತು ಮನೆಗಣತಿಯಲ್ಲಿ ಮನೆಯ ಸ್ಥಿತಿ, ಕುಟುಂಬಗಳ ಸೌಲಭ್ಯಗಳು ಮತ್ತು ಸ್ವತ್ತುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕಾಗಿದ್ದು, ಅಧಿಕೃತ ಮಾಹಿತಿಯನ್ನು ಯಾವುದೇ ಲೋಪವಿಲ್ಲದೆ ಸಂಗ್ರಹಿಸುವಂತೆ ತಿಳಿಸಿದರು.
    ಡಯಟ್ ಹಿರಿಯ ಉಪನ್ಯಾಸಕರು ಹಾಗೂ ರಾಜ್ಯಮಟ್ಟದ ಮಾಕ್ ಟ್ರೇನರ್ ಆದ ಡಾ. ಅಶೋಕ ಲಿಮಕರ್ ಮಾತನಾಡಿದರು. ರಾಜ್ಯ ಜನಗಣತಿ ನಿರ್ದೇಶನಾಲಯದ ವಿಶೇಷ ವೀಕ್ಷಕ ಎನ್. ಲಮಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಂದ್ರ ಕಾಪಸೆ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಜಿ.ಎಂ. ಕುಲಕರ್ಣಿ ಮತ್ತಿತರರಿದ್ದರು.

    ರಾಷ್ಟ್ರದ ಪ್ರಗತಿಯ ಮೂಲಾಧಾರ ಜನಗಣತಿ
    ರಾಷ್ಟ್ರದ ಪ್ರಗತಿಯ ಮೂಲಾಧಾರ ಜನಗಣತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts