More

    ಸ್ಕಾೃನಿಂಗ್ ಸೆಂಟರ್‌ಗಳಿಗೆ ನೋಟಿಸ್

    ವಿಜಯಪುರ : ಸ್ಕಾೃನಿಂಗ್ ಸೆಂಟರ್‌ಗಳಲ್ಲಿ ಭೇಟಿ ನೀಡಿದ ವೇಳೆ ಅನೇಕ ನ್ಯೂನತೆಗಳು ಕಂಡು ಬಂದ ಹಿನ್ನೆಲೆ ಸೆಂಟರ್‌ಗಳಿಗೆ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ನೋಟಿಸ್ ನೀಡಿದ್ದಾರೆ.

    ವಿಜಯಪುರದ ಮೇಡಿ ಸ್ಕಾೃನಿಂಗ್ ಸೆಂಟರ್, ಶ್ರೀ ಬನಶಂಕರಿ ಡೈಗ್ನೋಸ್ಟಿಕ್ ಸ್ಕಾೃನ್ ಸೆಂಟರ್, ಸಾಸನೂರ ಆಸ್ಪತ್ರೆ, ದಾನೇಶ್ವರಿ ಡೈಗ್ನೋಸ್ಟಿಕ್ ಸೆಂಟರ್, ರಜನಿ ಸೋನೋಗ್ರಾಫಿ ಮತ್ತು ಎಕ್ಸ್ ರೇ ಸೆಂಟರ್, ಆದಿತ್ಯ ಜನರಲ್ ಮತ್ತು ಮೆಟರ್‌ನಿಟಿ ಆಸ್ಪತ್ರೆಗೆ ನೋಟಿಸ್ ಜಾರಿಗೊಳಿಸಲಾಗಿದೆ.

    ಜಿಲ್ಲಾ ಪಿಸಿಪಿಎನ್‌ಡಿಟಿ ಪರಿಶೀಲನಾ ತಂಡ ಈಚೆಗೆ ಸ್ಕಾೃನ್ ಸೆಂಟರ್‌ಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿತ್ತು. ಆ ವೇಳೆ ರಸೀದಿ ಪುಸ್ತಕ ಇಡದಿರುವುದು, ಸ್ಕಾೃನಿಂಗ್ ಮಾಡಿರುವ ಬಗ್ಗೆ ವಿವರಣೆ ದಾಖಲಿಸದಿರುವುದು, ಶೌಚಗೃಹ ಸುಸಜ್ಜಿತವಾಗಿ ಕಾಪಾಡದಿರುವುದು, ರೋಗಿಗಳ ದಾಖಲಾತಿ ಯಾದಿಗೆ ಹೊಂದಾಣಿಕೆ ಆಗದಿರುವುದು, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆಗಳನ್ನು ನಮೂದಿಸದಿರುವುದು, ಗರ್ಭಿಣಿಯರ ತಪಾಸಣೆಗೆ ಶಿಫಾರಸು ಮಾಡಿದ ವೈದ್ಯರ ಸಹಿ, ಮುದ್ರೆಗಳು ಇಲ್ಲದಿರುವುದು, ಸಿ.ಸಿ. ಟಿವಿ ಕ್ಯಾಮರಾ ಅಳವಡಿಸದಿರುವುದು, ಸ್ಕಾೃನಿಂಗ್ ದರಪಟ್ಟಿ ಪ್ರದರ್ಶಿಸದಿರುವುದು ಹೀಗೆ ಅನೇಕ ನ್ಯೂನತೆಗಳು ಕಂಡು ಬಂದಿವೆ. ಈ ಕುರಿತು ಏಳು ದಿನಗಳಲ್ಲಿ ಲಿಖಿತ ರೂಪದಲ್ಲಿ ವಿವರಣೆ ನೀಡದಿದ್ದರೆ ಕಾನೂನು ಪ್ರಕಾರ ಪಿಸಿಪಿಎನ್‌ಡಿಟಿ ಕಾಯ್ದೆ-1994 ಅನ್ವಯ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts