More

    500 ಶಾಲೆಗಳಲ್ಲಿ ಪರಿಸರ ಕೂಟ ಸ್ಥಾಪನೆ

    ವಿಜಯಪುರ: ಜಿಲ್ಲೆಯ 500 ಶಾಲೆಗಳಲ್ಲಿ ಪರಿಸರ ಕೂಟಗಳನ್ನು ಸ್ಥಾಪಿಸಿ ಆ ಮೂಲಕ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
    ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಪ್ರತಿ ಶಾಲೆಗೆ ವಾರ್ಷಿಕ 5 ಸಾವಿರ ರೂ. ಅನುದಾನ ನೀಡುತ್ತಿದ್ದು, ಮಕ್ಕಳು ಕಡ್ಡಾಯವಾಗಿ ಸಸಿಗಳನ್ನು ಬೆಳೆಸುವುದು ಮತ್ತು ಇತರರು ಸ್ವಯಂಪ್ರೇರಣೆಯಿಂದ ಸಸಿಗಳನ್ನು ಬೆಳೆಸಲು ಪ್ರೋತ್ಸಾಹಿಸಬೇಕು. ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪಪೂ ಮತ್ತು ವೃತ್ತಿ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಅಧಿಕಾರಿಗಳು ಉಪ ಸಮಿತಿಗಳನ್ನು ರಚಿಸಿ ಪರಿಸರ ಸಂರಕ್ಷಣೆ, ಸ್ವಚ್ಛತೆ ಆಂದೋಲನ, ಜಲಸಂರಕ್ಷಣೆ ಇನ್ನಿತರ ಚಟುವಟಿಕೆಯನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಬೇಕು. ಆಯಾ ಶಾಲೆಗಳ ವ್ಯಾಪ್ತಿಯಲ್ಲಿ ಇಕೋ ಕ್ಲಬ್‌ಗಳನ್ನು ರಚಿಸಿ ಶಾಲೆ ಆವರಣಗಳಲ್ಲಿ ಸಸಿ ನೆಡಲು ದತ್ತು ನೀಡುವ ಜತೆಗೆ ಮೂರು ವರ್ಷ ಸಸಿಗಳನ್ನು ನಿರ್ವಹಣೆ ಮಾಡುವವರಿಗೆ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸುವಂತೆ ಸೂಚಿಸಿದರು.
    ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಕೋಟಿವೃಕ್ಷ ಅಭಿಯಾನದೊಂದಿಗೆ ಮಕ್ಕಳಲ್ಲಿ ಸಮನ್ವಯತೆ ಸಾಧಿಸಬೇಕು. ಕೃಷ್ಣಾಭಾಗ್ಯ ಜಲನಿಗಮದಿಂದ 65 ಸಾವಿರ ಸಸಿಗಳನ್ನು ನೆಟ್ಟಿರುವ ಪರಿಣಾಮ ಪರಿಸರದಲ್ಲಿಯೂ ಸಕಾರಾತ್ಮಕ ಬದಲಾವಣೆಯನ್ನು ಆಯಾಭಾಗದಲ್ಲಿ ಕಾಣುತ್ತಿದ್ದೇವೆ. ಪರಿಸರ ಸಂರಕ್ಷಣೆ, ನೈರ್ಮಲ್ಯ, ಎರೆಹುಳು ಗೊಬ್ಬರ ತಯಾರಿಕೆ, ನದಿ-ಕೆರೆಗಳ ಸ್ವಚ್ಛತೆ, ನೀರು, ಇಂಧನ ಸಂರಕ್ಷಣೆ ಮತ್ತು ಸಸಿ ನೆಡುವ ಇತ್ಯಾದಿ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
    ಈ ಯೋಜನೆಯಡಿ 250 ಶಾಲೆಗಳನ್ನು ಆಯ್ಕೆ ಮಾಡಿದ್ದು, ಇನ್ನುಳಿದ 250 ಶಾಲೆಗಳ ಶೀಘ್ರ ಆಯ್ಕೆಗೆ ಕ್ರಮಕೈಗೊಳ್ಳಬೇಕು. ಜಿಲ್ಲೆಯ 1650 ಶಾಲೆಗಳ ಪ್ರತಿ ಮಗುವಿನಿಂದ ಎರಡು ಸಸಿಗಳನ್ನು ಬೆಳೆಸುವ ಗುರಿ ನೀಡಬೇಕು ಮತ್ತು ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ಸಸಿಗಳನ್ನು ಬೆಳೆಸುವಂತೆ ಸಲಹೆ ನೀಡಿದರು.

    ಅರಣ್ಯ ಇಲಾಖೆ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಗಾರ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜೆ.ಎಸ್.ಪೂಜೇರಿ, ಶಿಕ್ಷಣ ಇಲಾಖೆ ಅಧಿಕಾರಿ ಆರ್ೀ ಬಿರಾದಾರ ಇತರರಿದ್ದರು.

    500 ಶಾಲೆಗಳಲ್ಲಿ ಪರಿಸರ ಕೂಟ ಸ್ಥಾಪನೆ
    500 ಶಾಲೆಗಳಲ್ಲಿ ಪರಿಸರ ಕೂಟ ಸ್ಥಾಪನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts