More

    ದೈಹಿಕ ತರಬೇತಿಗೆ ಅವಕಾಶ ಕಲ್ಪಿಸಲು ಆಗ್ರಹ

    ವಿಜಯಪುರ: ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ದೈಹಿಕ ತರಬೇತಿ ಪಡೆಯಲು ಅವಕಾಶ ನೀಡಲು ಆಗ್ರಹಿಸಿ ಯುನೈಟೆಡ್ ಕರಿಯರ್ ಅಕಾಡೆಮಿ ಹಾಗೂ ದೈಹಿಕ ಮತ್ತು ಲಿಖಿತ ಪರೀಕ್ಷೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
    ಡಾ. ಬಿ.ಆರ್. ಅಂಬೇಡ್ಕರ್ ಕ್ರಿಡಾಂಗಣದಲ್ಲಿ ಈ ಮೊದಲು ರಾಷ್ಟ್ರ ಮತ್ತು ಅಂತಾರಾಷ್ಟ್ರಿಯ ಮಟ್ಟದ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದರು. ಆದರೆ, ಸಿಂಥೆಟಿಕ್ ಟ್ರಾೃಕ್ ನಿರ್ಮಾಣದ ನಂತರ ಯಾವುದೇ ಕ್ರೀಡಾಪಟುಗಳಿಗೆ ಅವಕಾಶ ನೀಡುತ್ತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಕ್ರೀಡಾಸಕ್ತರಿಗೆ ಮತ್ತು ದೈಹಿಕ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
    ಕರವೇ ನಗರ ಅಧ್ಯಕ್ಷ ಯಾಜ ಕಲಾದಗಿ, ಐ.ಸಿ. ಪಠಾಣ, ಯಾಸೀನ ತಾಳಿಕೋಟಿ, ಶಿವಾನಂದ ದುದ್ದಗಿ, ಶುಭಂ ಬಿಸೆ, ಅಲೀಸಾಬ ದಡೆದ, ಬಸವರಾಜ ನಸಗುನ್ನಿ, ಡಿ.ಎಸ್. ಪೀರಜಾದೆ, ನಾಗರಾಜ ವಡ್ಡರ, ಮಂಜುನಾಥ ಗುಡದರ, ಸಿದ್ರಾಮ ಪೂಜಾರಿ, ಮಹ್ಮದ್ ಪೈಗಂಬರ್, ಕಿರಣ ಇಳಗೇರಿ, ಮಲೀಕ ರಿಹಾನ, ರವಿ ಜಮಾದಾರ, ರೋಹನ ಬಿ.ಕೆ, ಗೋಪಾಲಗೌಡ, ಮಲಿಕಾರ್ಜುನ ಡಿ.ಎನ್, ಸುದೀಪ ಪದಲುರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts