More

    ಜಿಲ್ಲಾಡಳಿತ ಎದುರು ಅಹೋರಾತ್ರಿ ಧರಣಿ

    ವಿಜಯಪುರ: ಬಿಎಸಿಎಂ ತಾಲೂಕು ಅಧಿಕಾರಿ ಅಮಾನತ್ತಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದಿಂದ ಜಿಲ್ಲಾಡಳಿತ ಕಚೇರಿ ಎದುರು ನಡೆಯುತ್ತಿರುವ ಧರಣಿ ಬುಧವಾರ ಎರಡನೇ ದಿನ ಪೂರೈಸಿತು.
    ಮಂಗಳವಾರ ಇಡೀ ರಾತ್ರಿ ಜಿಲ್ಲಾಡಳಿತ ಕಚೇರಿ ಎದುರು ಕಳೆದ ಧರಣಿ ನಿರತರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದರು. ನ್ಯಾಯ ಸಿಗುವವರೆಗೂ ಧರಣಿ ಹಿಂಪಡೆಯಲ್ಲ ಎಂದು ಎಚ್ಚರಿಸಿದರು.
    ಬಿಸಿಎಂ ತಾಲೂಕು ಅಧಿಕಾರಿಯ ಕಿರುಕುಳದಿಂದಾಗಿ ಅಡುಗೆ ಸಹಾಯಕಿ ಬೋರಮ್ಮ ಸಾವಿಗೀಡಾಗಿದ್ದಾರೆ. ನಗರದ ಸರ್ಕಾರಿ ವಸತಿ ನಿಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಬೋರಮ್ಮ ಅಧಿಕಾರಿಯ ಚುಚ್ಚು ಮಾತಿನಿಂದಾಗಿ ಮನನೊಂದಿದ್ದರು. ಇದೇ ಕಾರಣಕ್ಕೆ ಆರೋಗ್ಯ ಹದಗೆಟ್ಟು ಸಾವಿಗೀಡಾಗಿದ್ದಾರೆ. ಹೀಗಾಗಿ ಅಧಿಕಾರಿಯನ್ನು ಅಮಾನತ್ತುಗೊಳಿಸುವುದರ ಜತೆಗೆ ಬೋರಮ್ಮಳ ಕುಟುಂಬಕ್ಕೆ ಧನಸಹಾಯ ನೀಡಿ ಅವರಲ್ಲೊಬ್ಬರನ್ನು ಅನುಕಂಪ ಆಧಾರಿತವಾಗಿ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
    ಗ್ರಾಪಂ ನೌಕರರ ಸಂಘದ ಉಪಾಧ್ಯಕ್ಷ ಭೀಮಶಿ ಕಲಾದಗಿ, ಹುಲಗಪ್ಪ ಚಲವಾದಿ, ಪವಾಡೆಪ್ಪ ಚಲವಾದಿ, ಕಾಸಿಂ ಆಲದಾಳ, ಬೋರಕ್ಕ ಬೀಳೂರ, ನೂರಜಾನ ಯಲಗಾರ, ದಾನಮ್ಮ ಹೂಗಾರ, ಸುಮಂಗಲಾ ಕಂಬಾರ, ಲಕ್ಷ್ಮಣ ಮಸಳಿ, ಶಿವು ಇಂಡಿ, ನಿಂಗಪ್ಪ ವಾಲಿಕಾರ, ಶಾಂತಾ ಕ್ವಾಟಿ, ಪ್ರಕಾಶ ದೇಸಾಯಿ, ಬೇಬಿ ಹೊಸಮನಿ, ಯಮುನಾ ಬಜಂತ್ರಿ, ವೈಶಾಲಿ ಸಮಗೊಂಡ, ರೂಪಾ ಬಿರಾದಾರ, ಲಕ್ಷ್ಮಿ ಮಂಗಸೂಳಿ, ಮೀನಾಕ್ಷಿ ತಳವಾರ, ಸುರಾ ರಾಠೋಡ, ಮಾಲಾ ರಾಠೋಡ, ಬಸವರಾಜ ಶಿರಶ್ಯಾಡ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts