More

    ಹೂ-ಹಣ್ಣುಗಳ ಪುರ ಆಗಲಿ

    ವಿಜಯಪುರ: ಬೆಳ್ಳಿ, ಬಂಗಾರದಿಂದ ಮನೆಯ ಸೌಂದರ್ಯ ವೃದ್ಧಿಸುವುದಿಲ್ಲ. ನಿಸರ್ಗದ ಅರಳುವಿಕೆ, ಹಸಿರು ಕಂಗೊಳಿಸಿದರೆ ಮನೆಯ ಸೌಂದರ್ಯ ಹೆಚ್ಚುತ್ತದೆ ಎಂದು ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
    ಇಲ್ಲಿನ ತೋಟಗಾರಿಕೆ ಇಲಾಖೆಯ ಬಸವವನದಲ್ಲಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಲಪುಷ್ಪ ಪ್ರದರ್ಶನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀವರ್ಚನ ನೀಡಿದರು.
    ವಿಜಯಪುರ ಬರದನಾಡು ಎಂಬ ಹಣೆಪಟ್ಟಿ ಅಳಿಯಬೇಕಿದೆ. ಇದು ಹೂ-ಹಣ್ಣುಗಳ ಪುರವಾಗಬೇಕು, ಮನುಷ್ಯ ಪ್ರಯತ್ನ ಮಾಡಿದರೆ ಏನೂ ಬೇಕಾದರೂ ಸಾಧಿಸಬಹುದು, ಸುತ್ತಲಿರುವ ಪರಿಸರವನ್ನು ಅದ್ಭುತವಾಗಿ ಬೆಳೆಸಬೇಕು ಎಂದರು.
    ್ರಾನ್ಸ್, ಅಮೆರಿಕದಲ್ಲಿ ಒಕ್ಕಲಿಗರ ಜಾತ್ರೆ ನಡೆಯುತ್ತದೆ. ಸಿದ್ಧೇಶ್ವರ ಜಾತ್ರೆ ಒಕ್ಕಲಿಗರ ಜಾತ್ರೆಯಾಗಬೇಕು. ಸಿದ್ಧರಾಮನ ಜಾತ್ರೆಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
    ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ರೈತರ ಶೋಷಣೆ ತಪ್ಪಿಸಿ, ಈ ಭಾಗದಲ್ಲಿಯೇ ಸಾವಿರಾರು ಕೋಟಿ ರೂ. ವ್ಯವಹಾರ ನಡೆದು ರೈತರ ಬದುಕು ಬಂಗಾರವಾಗುವ ನಿಟ್ಟಿನಲ್ಲಿ ಆನ್‌ಲೈನ್ ಮೂಲಕ ಒಣದ್ರಾಕ್ಷಿ ಮಾರಾಟ ಮಾರುಕಟ್ಟೆ ಸೇವೆಯನ್ನು ಒಂದು ತಿಂಗಳೊಳಗಾಗಿ ಆರಂಭಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಆನ್‌ಲೈನ್ ಟ್ರೇಡಿಂಗ್ ಆರಂಭವಾಗದಂತೆ ಕೆಲವೊಬ್ಬರು ವ್ಯವಸ್ಥಿತ ಲಾಬಿ ನಡೆಸಿದ್ದರು. ಆದರೆ ನಾನು ಯಾವುದೇ ಲಾಬಿಗೂ ಮಣಿಯುವುದಿಲ್ಲ. ಒಂದು ತಿಂಗಳಲ್ಲಿ ಆನ್‌ಲೈನ್ ಟ್ರೇಡಿಂಗ್ ಸೆಂಟರ್ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
    ಒಣದ್ರಾಕ್ಷಿ ಹಾಗೂ ತೋಟಗಾರಿಕಾ ಬೆಳೆಗಳ ಉತ್ತೇಜನಕ್ಕಾಗಿ ತೊರವಿಯ ಎಪಿಎಂಸಿ ಜಾಗದಲ್ಲಿ 15.56 ಕೋಟಿ ರೂ. ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ಆರಂಭಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶ್ರೀ ಸಿದ್ಧೇಶ್ವರ ಸಂಸ್ಥೆಯ ವತಿಯಿಂದಲೂ 5 ಸಾವಿರ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ನಿರ್ಮಿಸಲಾಗುತ್ತಿದೆ ಎಂದರು.
    ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಇನಾಮದಾರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಲ್. ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಶಿವಕುಮಾರ, ಪ್ರಗತಿಪರ ರೈತರಾದ ಸಂಜಯ ಪಾಟೀಲ ಕನಮಡಿ, ಬಿ.ಆರ್. ಪಾಟೀಲ ಕಡ್ಲೇವಾಡ, ಗುರುನಾಥ ಬಗಲಿ, ವಿ.ಜಿ. ರೇವಡಿಗಾರ, ಬಿ.ಎನ್. ಪಾಟೀಲ, ಹಾಪಕಾಮ್ಸ್ ಅಧ್ಯಕ್ಷ ಭೀಮಸೇನ ಕೋಕರೆ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts