More

    ವಾರಾಂತ್ಯದ ಕರ್ಫ್ಯೂದಿಂದ ವಿನಾಯಿತಿ ನೀಡಿ

    ವಿಜಯಪುರ: ವಾರಾಂತ್ಯದ ಕರ್ಫ್ಯೂದಿಂದ ವಿನಾಯಿತಿ ನೀಡುವಂತೆ ಒತ್ತಾಯಿಸಿ ಜಿಲ್ಲಾ ವ್ಯಾಪಾರಸ್ಥರ ಸಂಘದ ವತಿಯಿಂದ ಗುರುವಾರ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.

    ಸಂಘದ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮಾತನಾಡಿ, ಮಹಾರಾಷ್ಟ್ರ ಗಡಿಯಿಂದ ವಿಜಯಪುರ 100 ಕಿ.ಮೀ. ದೂರದಲ್ಲಿದ್ದು, ನೆರೆರಾಜ್ಯದಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಕಡಿಮೆ. ಕರೊನಾ ನೆಪದಲ್ಲಿ ವಿಜಯಪುರ ನಗರದಲ್ಲಿ ಶನಿವಾರ ಹಾಗೂ ಭಾನುವಾರ ಕರ್ಫ್ಯೂ ವಿಧಿಸುತ್ತಿರುವುದರಿಂದ ವ್ಯಾಪಾರಸ್ಥರು ಆರ್ಥಿಕವಾಗಿ, ಮಾನಸಿಕವಾಗಿ ತತ್ತರಿಸಿದ್ದಾರೆ. ಈಗಾಗಲೇ ಕೋವಿಡ್‌ನಿಂದ ಎರಡು ಬಾರಿ ಲಾಕ್‌ಡೌನ್ ಆಗಿ ವ್ಯಾಪಾರ ವಹಿವಾಟು ಇಲ್ಲದೆ ವ್ಯಾಪಾರಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅಲ್ಲದೆ ನಿಶ್ಚಿತ ವೆಚ್ಚಗಳಾದ ಅಂಗಡಿ ಬಾಡಿಗೆ, ನೌಕರರ ಸಂಬಳ, ವಿದ್ಯುತ್ ಬಿಲ್, ಮನೆಯ ಹಾಗೂ ಇನ್ನಿತರ ವೆಚ್ಚಗಳನ್ನು ಯಾವುದೇ ಆದಾಯವಿಲ್ಲದೆ ಭರಿಸುವ ಪರಿಸ್ಥಿತಿ ಬಂದೊದಗಿ ವ್ಯಾಪಾರಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ.

    ವ್ಯಾಪಾರಸ್ಥರ ದಯನೀಯ ಪರಿಸ್ಥಿತಿಯನ್ನು ಗಮನಿಸಿ ಮಹಾರಾಷ್ಟ್ರದ ಗಡಿಭಾಗದಿಂದ ಸಾಕಷ್ಟು ದೂರವಿರುವ ವಿಜಯಪುರ ನಗರಕ್ಕೆ ವಾರಾಂತ್ಯದ ಕರ್ಫ್ಯೂದಿಂದ ವಿನಾಯಿತಿ ನೀಡಬೇಕು. ಕಿರಾಣಾ ಬಜಾರ್, ಆಯಿಲ್ ಮಿಲ್, ಎಲ್‌ಬಿಎಸ್ ಮಾರುಕಟ್ಟೆ, ನೆಹರು ಮಾರುಕಟ್ಟೆ, ಜವಳಿ ವ್ಯಾಪಾರ, ಸರಾಫ್ ವ್ಯಾಪಾರ, ಬಟ್ಟೆ ವ್ಯಾಪಾರ, ಹೋಟೆಲ್, ಭಾಂಡೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts