More

    ಮತ್ತೆರಡು ಪಾಸಿಟಿವ್ ಪತ್ತೆ

    ವಿಜಯಪುರ : ಗುಮ್ಮಟನಗರಿ ವಿಜಯಪುರದಲ್ಲಿ ಮತ್ತೆರಡು ಕರೊನಾ ಪಾಟಿಸಿವ್ ಪತ್ತೆಯಾಗಿದೆ. ಪ್ರಥಮ ಸೋಂಕಿತೆ ರೋಗಿ ನಂ. 221 ಸಂಪರ್ಕ ಹೊಂದಿದ್ದ 62 ವರ್ಷದ ಪುರುಷ ಹಾಗೂ 33 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢವಾಗಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 1937 ಜನರ ಮೇಲೆ ನಿಗಾ ವಹಿಸಲಾಗಿದ್ದು, 424 ಜನರನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ. 1511 ಮಂದಿ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. ಈ ವರೆಗೆ ಒಟ್ಟು 2012 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರಲ್ಲಿ 1832 ಜನರ ವರದಿ ನೆಗೆಟಿವ್ ಬಂದಿದೆ. 43 ಜನರ ವರದಿ ಪಾಸಿಟಿವ್ ಬಂದಿದೆ. ಇನ್ನು 137 ಜನರ ವರದಿ ಬರಬೇಕಿದೆ. 6 ಮಂದಿ ಗುಣಮುಖರಾಗಿದ್ದಾರೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts