More

    ಕರೊನಾ ಮುಕ್ತ ವಿಜಯಪುರಕ್ಕೆ ಕೈ ಜೋಡಿಸಿ

    ವಿಜಯಪುರ: ಕರೊನಾ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸಲಾಗುತ್ತಿದ್ದು, ಉಚಿತ ಲಸಿಕೆ ಅಭಿಯಾನ ಹಮ್ಮಿಕೊಳ್ಳುವ ಜತೆಗೆ ಕಾಳಜಿ ಕೇಂದ್ರ ಸಹ ತೆರೆಯಲಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹ ಸೋಂಕು ತಡೆಗೆ ಶ್ರಮಿಸುವ ಮೂಲಕ ಕರೊನಾ ಮುಕ್ತ ವಿಜಯಪುರಕ್ಕೆ ಕೈ ಜೋಡಿಸಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮನವಿ ಮಾಡಿದರು.

    ನಗರದ ಜೈನ್ ಕಾಲೇಜಿನಲ್ಲಿ ಸಿದ್ಧೇಶ್ವರ ಸಂಸ್ಥೆ, ಜೈನ್ ಫೌಂಡೇಷನ್ ಹಾಗೂ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಹಭಾಗಿತ್ವದಲ್ಲಿ ಆರಂಭಿಸಲಾದ ಕರೊನಾ ಕಾಳಜಿ ಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಜೈನ್ ಕಾಲೇಜ್ ಕಟ್ಟಡದಲ್ಲಿ 100 ಬೆಡ್‌ಗಳನ್ನು ಹೊಂದಿದ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಇಲ್ಲಿಗೆ ಬರುವ ರೋಗಿಗಳಿಗೆ ಉಚಿತ ಉಪಾಹಾರ, ಊಟ ಮತ್ತು ಹಣ್ಣು ಹಂಪಲು ನೀಡಲಾಗುತ್ತಿದೆ. ಸಿದ್ಧೇಶ್ವರ ಸಂಸ್ಥೆಯ ಶಾಲೆ ಬಸ್‌ಗಳನ್ನು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈಶ್ವರಗೌಡ ಪಾಟೀಲ ಯತ್ನಾಳ ಡಯಾಲಿಸಿಸ್ ಕೇಂದ್ರದಲ್ಲಿ 27 ಬೆಡ್‌ಗಳ ವೆಂಟಿಲೇಟರ್, ಆಕ್ಸಿಜನ್ ಒಳಗೊಂಡಂತಹ ಆಸ್ಪತ್ರೆ ತೆರೆಯಲಾಗಿದೆ. ಒಂದು ಕಡೆ ಲಸಿಕೆ ಅಭಿಯಾನ ನಡೆಯುತ್ತಿದ್ದರೆ ಇನ್ನೊಂದೆಡೆ ಕರೊನಾ ರೋಗಿಗಳಿಗಾಗಿ ಬೆಡ್‌ಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ ಎಂದರು.

    18 ವರ್ಷ ಮೇಲ್ಪಟ್ಟ ಯುವಕರಿಗೂ ಶೀಘ್ರ ಲಸಿಕೆ ನೀಡಲಾಗುತ್ತಿದೆ. ಹಾಗೊಂದು ವೇಳೆ ಸರ್ಕಾರದಿಂದ ಪೂರೈಕೆಯಾಗದಿದ್ದರೂ ಎಲ್ಲ ಯುವಕರಿಗೂ ನನ್ನ ವೈಯಕ್ತಿಕ ಹಣ ನೀಡಿ ಲಸಿಕೆ ಹಾಕಿಸುತ್ತೇನೆ ಎಂದರು.

    ಸಿದ್ಧೇಶ್ವರ ಸಂಸ್ಥೆ ಚೇರಮನ್ ಬಸಯ್ಯ ಹಿರೇಮಠ, ಸಿದ್ಧಸಿರಿ ಸೌಹಾರ್ದ ಸಹಕಾರಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಸ್.ಎಲ್. ಲಕ್ಕಣ್ಣವರ, ಡಾ. ಶರಣ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜೈನ್ ಫೌಂಡೇಷನ್ ಶಾಂತಿಲಾಲ್ ಓಸ್ವಾಲ್ ಮತ್ತಿತರರಿದ್ದರು.

    ವಾರ್ಡ್ ನಂ-3ರ ಗ್ಯಾಂಗ್‌ಬಾವಡಿ ಸರ್ಕಾರಿ ಶಾಲೆ ನಂ.10ರಲ್ಲಿ ಹಾಗೂ ತೊರವಿ ಗ್ರಾಮದ ಲಕ್ಷ್ಮಿ ಗುಡಿ ಆವರಣದಲ್ಲಿ ಉಚಿತ ಲಸಿಕೆ ಆಭಿಯಾನಕ್ಕೆ ಚಾಲನೆ ನೀಡಲಾಯಿತು.

    ಶ್ರೀ ಸಿದ್ಧೇಶ್ವರ ಗುಡಿ ಹತ್ತಿರದ ಕೃಷ್ಣಾ ಕಾಂಪ್ಲೆಕ್ಸ್‌ನಲ್ಲಿಯ ಶ್ರೀ ಈಶ್ವರಗೌಡ ಪಾಟೀಲ ಯತ್ನಾಳ ಡಯಾಲಿಸಿಸ್ ಕೇಂದ್ರದಲ್ಲಿ ಪ್ರತ್ಯೇಕ 27 ಬೆಡ್‌ಗಳ ಸೆಂಟ್ರಲೈಸ್ಡ್ ಆಕ್ಸಿಜನ್, ಎನ್‌ಐವಿ ವೆಂಟಿಲೇಟರ್ ಹೊಂದಿದ ಕರೊನಾ ಆಸ್ಪತ್ರೆ ಉದ್ಘಾಟಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts