More

    ಸಂಸ್ಥೆಯಲ್ಲಿ ಕರೊನಾದಿಂದ ಮೃತಪಟ್ಟ ಕುಟುಂಬಕ್ಕೆ ನೆರವು

    ವಿಜಯಪುರ: ಮಹಾಮಾರಿ ಕರೊನಾಗೆ ಬಿಎಲ್‌ಡಿಇ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 16 ಜನರು ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಆಸರೆಯಾಗಲು ಸಂಸ್ಥೆಯಿಂದ ಎಲ್ಲ ರೀತಿಯ ನೆರವು ನೀಡಲಾಗುವುದೆಂದು ಬಿಎಲ್‌ಡಿಇ ಅಧ್ಯಕ್ಷ, ಮಾಜಿ ಸಚಿವ, ಶಾಸಕ ಎಂ.ಬಿ. ಪಾಟೀಲ ಹೇಳಿದರು.

    ಸಂಸ್ಥೆಯಿಂದ ಮೃತ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಿ, ಕುಟುಂಬ ವರ್ಗದವರಿಗೆ ಸ್ವಾಂತನ ಹೇಳಿದ ಅವರು, ಕರೊನಾ ಮಹಾಮಾರಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಉಪ ಕುಲಪತಿ ಡಾ. ಎಂ.ಎಸ್. ಬಿರಾದಾರ, ವೈದ್ಯ ಡಾ. ಆರ್.ಎಂ. ಪೋಟೆಕರ, ಟೆಕ್ನಿಷಿಯನಗಳಾದ ರುದ್ರಗೌಡ ಎಸ್. ಪಾಟೀಲ, ಜಗದೀಶ ಬಿ. ಬಡಿಗೇರ, ಅಟೆಂಡರ್‌ಗಳಾದ ಸುರೇಂದ್ರ ಭಾವಿಮನಿ, ದ್ರಾಕ್ಷಾಯಣಿ ಪೂಜಾರಿ, ಆಡಳಿತ ಕಚೇರಿ ಎಫ್.ಡಿ.ಸಿ. ಪ್ರಕಾಶ ಖ್ಯಾಡದ, ಜೆ.ಎಸ್.ಎಸ್ ಕಾಲೇಜಿನ ದ್ವಿತೀಯ ದರ್ಜೆ ಸಹಾಯಕಿ ತನುಜಾ ಪಾಟೀಲ, ಎಸ್.ಎಸ್. ಮಾಧ್ಯಮಿಕ ಎ ಶಾಲೆ ಶಿಕ್ಷಕ ಪ್ರಕಾಶ ತೊರವಿ, ತಿಕೋಟಾ ನ್ಯೂ ಆರ್ಟ್ಸ್ ಕಾಲೇಜು ಉಪನ್ಯಾಸಕ ಡಾ. ಎಂ.ಬಿ. ಸಿಂಗೆ ಹಾಗೂ ದ್ವಿತೀಯ ದರ್ಜೆ ಸಹಾಯಕ ಇರ್ಫಾನ್ ಜಮಖಂಡಿ, ಜಮಖಂಡಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಮೇಶ ಬಿರಾದಾರ, ಲಚ್ಯಾಣ ಎಸ್.ಎಸ್. ಅಗ್ರಿ ಸ್ಕೂಲ್ ಶಿಕ್ಷಕ ಸಿದ್ದಪ್ಪ ಇಂಗಳೇಶ್ವರ, ಇಂಜಿನಿಯರಿಂಗ್ ಕಾಲೇಜಿನ ಜವಾನ ಶ್ರೀಶೈಲ ನಾವಿ, ನಗರದ ಎಸ್.ಎಸ್.ಎಂ. ಪಾಲಿಟೆಕ್ನಿಕ್‌ನ ವೆಲ್ಡರ್ ಗೋವಿಂದಪ್ಪ ಹಾದಿಮನಿ ಸೇರಿ ಒಟ್ಟು 16 ಜನ ಸಂಸ್ಥೆ ನೌಕರರು ನಮ್ಮನ್ನಗಲಿದ್ದು ದುಃಖಕರ ಸಂಗತಿ. ಅವರ ಕುಟುಂಬಕ್ಕೆ ಮತ್ತು ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಸಂಸ್ಥೆಯಿಂದ 1 ಲಕ್ಷ ರೂ. ಚೆಕ್‌ನ್ನು ನೀಡಲಾಗುತ್ತಿದೆ. ಹಾಗೂ ಕುಟುಂಬದ ನೇರ ವಾರಸುದಾರರಲ್ಲಿ ಒಬ್ಬರಿಗೆ ಸಂಸ್ಥೆಯಲ್ಲಿ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ನೀಡಲಾಗುವುದು ಎಂದರು.

    ಉಪ ಕುಲಪತಿ ಡಾ. ಆರ್.ಎಸ್. ಮುಧೋಳ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಡಳಿತಾಧಿಕಾರಿಗಳಾದ ಡಾ. ರಾಘವೇಂದ್ರ ಕುಲಕರ್ಣಿ, ಕೆ.ಜಿ. ಪೂಜೇರಿ, ಐ.ಎಸ್. ಕಾಳಪ್ಪನವರ, ಮುಖ್ಯ ಹಣಕಾಸು ಅಧಿಕಾರಿ ದೇವೇಂದ್ರ ಅಗರವಾಲ, ಪ್ರಚಾರಾಧಿಕಾರಿ ಡಾ. ಮಹಾಂತೇಶ ಬಿರಾದಾರ ಸೇರಿ ಶಾಲಾ- ಕಾಲೇಜು ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಮೃತ ಕುಟುಂಬ ವರ್ಗದವರು ಉಪಸ್ಥಿತರಿದ್ದರು. ಡಾ.ಎಂ.ಎಸ್. ಮಧಭಾವಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts